ಬೆಂಗಳೂರು: ನೈಋತ್ಯ ರೈಲ್ವೆಯು ತನ್ನ ವ್ಯಾಪ್ತಿಯಲ್ಲಿ ಚಲಿಸುವ ಮಾಲ್ಗುಡಿ ಎಕ್ಸ್ ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕರಿಸಿದೆ. ಈ ಪರಿಷ್ಕೃತ ಸಮಯವು ಮೇ 5, 2025 ರಿಂದ ಜಾರಿಗೆ ಬರಲಿದೆ.
ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ರೈಲು ಸಂಖ್ಯೆ 20623 ಅಶೋಕಪುರಂ-ಕೆಎಸ್ಆರ್ ಬೆಂಗಳೂರು ಮಾಲ್ಗುಡಿ ಡೈಲಿ ಎಕ್ಸ್ ಪ್ರೆಸ್ ಇನ್ನು ಮುಂದೆ ಅಶೋಕಪುರಂನಿಂದ ಬೆಳಿಗ್ಗೆ 08.30ರ ಬದಲು 10 ನಿಮಿಷ ಮುಂಚಿತವಾಗಿ, ಅಂದರೆ 08.20ಕ್ಕೆ ಹೊರಡಲಿದೆ. ಈ ರೈಲು ಮೈಸೂರು ಜಂಕ್ಷನ್ಗೆ ನಿಗದಿತ ಸಮಯಕ್ಕಿಂತ ಮುಂಚಿತವಾಗಿ 08.30ಕ್ಕೆ ಆಗಮಿಸಿ, 08.35ಕ್ಕೆ ನಿರ್ಗಮಿಸಲಿದೆ. ನಂತರ, ಈ ರೈಲು ಪಾಂಡವಪುರಕ್ಕೆ 08.54ಕ್ಕೆ ಆಗಮಿಸಿ 08.55ಕ್ಕೆ, ಮಂಡ್ಯಕ್ಕೆ 09.11ಕ್ಕೆ ಆಗಮಿಸಿ 09.12ಕ್ಕೆ, ಮದ್ದೂರಿಗೆ 09.26ಕ್ಕೆ ಆಗಮಿಸಿ 09.27ಕ್ಕೆ, ಚನ್ನಪಟ್ಟಣಕ್ಕೆ 09.42ಕ್ಕೆ ಆಗಮಿಸಿ 09.43ಕ್ಕೆ, ರಾಮನಗರಂ ನಿಲ್ದಾಣಕ್ಕೆ 09.52ಕ್ಕೆ ಆಗಮಿಸಿ 09.53ಕ್ಕೆ, ಬಿಡದಿಗೆ 10.05ಕ್ಕೆ ಆಗಮಿಸಿ 10.06ಕ್ಕೆ ಮತ್ತು ಕೆಂಗೇರಿಗೆ 10.22ಕ್ಕೆ ಆಗಮಿಸಿ 10.23ಕ್ಕೆ ನಿರ್ಗಮಿಸಲಿದೆ. ಅಂತಿಮವಾಗಿ, ಈ ರೈಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ನಿಲ್ದಾಣವನ್ನು ಬೆಳಿಗ್ಗೆ 11.20ರ ಬದಲು 15 ನಿಮಿಷ ಮುಂಚಿತವಾಗಿ, ಅಂದರೆ 11.05ಕ್ಕೆ ತಲುಪಲಿದೆ.
ಇದಲ್ಲದೆ, ರೈಲು ಸಂಖ್ಯೆ 56210 ಮೈಸೂರು-ಚಾಮರಾಜನಗರ ಡೈಲಿ ಪ್ಯಾಸೆಂಜರ್ ರೈಲಿನ ವೇಳಾಪಟ್ಟಿಯಲ್ಲೂ ಬದಲಾವಣೆ ಮಾಡಲಾಗಿದೆ. ಈ ರೈಲು ಮೈಸೂರಿನಿಂದ ಬೆಳಿಗ್ಗೆ 08.20ರ ಬದಲು 15 ನಿಮಿಷ ಮುಂಚಿತವಾಗಿ, ಅಂದರೆ 08.05ಕ್ಕೆ ಹೊರಡಲಿದೆ. ಪರಿಷ್ಕೃತ ಸಮಯದ ಪ್ರಕಾರ, ಈ ರೈಲು ಚಾಮರಾಜಪುರಂ ನಿಲ್ದಾಣಕ್ಕೆ 08.11ಕ್ಕೆ ಆಗಮಿಸಿ 08.12ಕ್ಕೆ ನಿರ್ಗಮಿಸಲಿದೆ, ಅಶೋಕಪುರಂಗೆ 08.18ಕ್ಕೆ ಆಗಮಿಸಿ 08.34ಕ್ಕೆ ನಿರ್ಗಮಿಸಲಿದೆ, ಕಡಕೋಳಕ್ಕೆ 08.48ಕ್ಕೆ ಆಗಮಿಸಿ 08.49ಕ್ಕೆ, ತಾಂಡವಪುರ ಹಾಲ್ಟ್’ಗೆ 08.54ಕ್ಕೆ ಆಗಮಿಸಿ 08.55ಕ್ಕೆ, ಸುಜಾತಪುರಂ ಹಾಲ್ಟ್’ಗೆ 09.00ಕ್ಕೆ ಆಗಮಿಸಿ 09.01ಕ್ಕೆ, ನಂಜನಗೂಡು ಟೌನ್’ಗೆ 09.06ಕ್ಕೆ ಆಗಮಿಸಿ 09.08ಕ್ಕೆ, ಚಿನ್ನದಗುಡಿಹುಂಡಿ ಹಾಲ್ಟ್’ಗೆ 09.17ಕ್ಕೆ ಆಗಮಿಸಿ 09.18ಕ್ಕೆ, ನರಸಾಂಬುಧಿ ಹಾಲ್ಟ್’ಗೆ 09.21ಕ್ಕೆ ಆಗಮಿಸಿ 09.22ಕ್ಕೆ, ಕವಲಂದೆ ಹಾಲ್ಟ್’ಗೆ 09.28ಕ್ಕೆ ಆಗಮಿಸಿ 09.29ಕ್ಕೆ, ಕೋನನೂರು ಹಾಲ್ಟ್’ಗೆ 09.34ಕ್ಕೆ ಆಗಮಿಸಿ 09.35ಕ್ಕೆ, ಬದನಗುಪ್ಪೆ ಹಾಲ್ಟ್’ಗೆ 09.40ಕ್ಕೆ ಆಗಮಿಸಿ 09.41ಕ್ಕೆ ಮತ್ತು ಮರಿಯಾಳ್ ಗಂಗಾವಾಡಿ ಹಾಲ್ಟ್’ಗೆ 09.46ಕ್ಕೆ ಆಗಮಿಸಿ 09.47ಕ್ಕೆ ನಿರ್ಗಮಿಸಲಿದೆ. ಈ ರೈಲು ಚಾಮರಾಜನಗರವನ್ನು ಎಂದಿನಂತೆ ಬೆಳಿಗ್ಗೆ 10.10ಕ್ಕೆ ತಲುಪಲಿದೆ.
ಮಂಗಳೂರಲ್ಲಿ ಕೇರಳ ಮೂಲದ ವ್ಯಕ್ತಿ ಕೊಲೆ ಕೇಸ್: ಕರ್ತವ್ಯ ನಿರ್ಲಕ್ಷ್ಯ ತೋರಿದ ಮೂವರು ಪೊಲೀಸರ ಸಸ್ಪೆಂಡ್