ಬೆಂಗಳೂರು: ತನ್ನ ಇನ್ಸ್ಟಾ ಗ್ರಾಂನಲ್ಲಿ ಮಹಿಳೆಯೊಬ್ಬರು ತಾನು ಮಾಜಿ ಸಂಸದ ಡಿ.ಕೆ ಸುರೇಶ್ ಅವರ ಪತ್ನಿ ಎಂಬುದಾಗಿ ವೀಡಿಯೋ ಹರಿಬಿಟ್ಟಿದ್ದರು. ಇದು ವೈರಲ್ ಆಗಿ ತೀವ್ರ ವಿವಾದಕ್ಕೂ ಕಾರಣವಾಗಿತ್ತು. ಈ ಬಳಿಕ ಆಕೆಯ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಈ ಬೆನ್ನಲ್ಲೇ ನಾನು ಮಾಜಿ ಸಂಸದ ಡಿ.ಕೆ ಸುರೇಶ್ ಪತ್ನಿ ಎಂಬುದಾಗಿ ವೀಡಿಯೋ ಹರಿಬಿಟ್ಟಂತ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಮಾಜಿ ಸಂಸದ ಡಿ.ಕೆ ಸುರೇಶ್ ಪತ್ನಿ ಎಂಬುದಾಗಿ ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ಹರಿಬಿಟ್ಟ ಕನಕಪುರ ತಾಲ್ಲೂಕಿನ ದೊಡ್ಡಾಲಹಳ್ಳಿ ಗ್ರಾಮದ ಪವಿತ್ರ ಎಂಬುವರ ವಿರುದ್ಧ ರಾಮನಗರ ಸೆನ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಮಾಜಿ ಸಂಸದ ಡಿ.ಕೆ ಸುರೇಶ್ ಪೋಟೋ ಜೊತೆಗೆ ತನ್ನ ಪೋಟೋ ಎಡಿಟ್ ಮಾಡಿ ಏಪ್ರಿಲ್.8ರಂದು ತಮ್ಮ ಫೇಸ್ ಬುಕ್, ಇನ್ ಸ್ಟಾಗ್ರಾಮ್ ನಲ್ಲಿ ಪವಿತ್ರ ಪೋಸ್ಟ್ ಮಾಡಿದ್ದರು. ಈ ಸಂಬಂಧ ವಕೀಲ ಪ್ರದೀಪ್ ಎಂಬುವರು ಡಿಕೆ ಸುರೇಶ್ ವಿರುದ್ಧ ದುರುದ್ದೇಶದಿಂದ ಅಪಪ್ರಚಾರ ಮಾಡಲಾಗುತ್ತಿದೆ ಎಂಬುದಾಗಿ ದೂರು ನೀಡಿದ್ದರು. ಈ ದೂರು ಆಧರಿಸಿ ಎಫ್ಐಆರ್ ಕೂಡ ದಾಖಲಾಗಿತ್ತು.
ಕನಕಪುರ ತಾಲ್ಲೂಕಿನ ದೊಡ್ಡಾಲಹಳ್ಳಿ ಗ್ರಾಮದ ಪವಿತ್ರಾ, ಮೈಸೂರಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಪತಿಯಿಂದ ವಿಚ್ಛೇತದ ಪಡೆದ ಬಳಿಕ ಮೈಸೂರಲ್ಲಿ ವಾಸವಿದ್ದಂತ ಅವರು ಅಕ್ಕಪಕ್ಕದ ಮನೆಯವರಿಂದ ಕಿರಿಕಿರಿ ಹಿನ್ನಲೆಯಲ್ಲಿ ಡಿ.ಕೆ ಸುರೇಶ್ ಪತ್ನಿ ಎಂಬುದಾಗಿ ಹೇಳಿಕೊಂಡರೇ ನನ್ನ ತಂಟೆಗೆ ಬರಲ್ಲ ಅನ್ನೋ ಉದ್ದೇಶದಿಂದ ಹೀಗೆ ವೀಡಿಯೋ ಹರಿಬಿಟ್ಟಿದ್ದರಂತೆ. ಇಂತಹ ಮಹಿಳೆಯನ್ನು ಈಗ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.