ಶಿವಮೊಗ್ಗ: ನಾಳೆ ಸಾಗರದ ವಿಜಯನಗರದಲ್ಲಿ ನವೀಕೃತಗೊಂಡಿರುವಂತ ಈಜು ಕೊಳವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಉದ್ಘಾಟನೆ ಮಾಡಲಿದ್ದಾರೆ. ಇದಲ್ಲದೇ ಬೇಸಿಗೆ ಶಿಬಿರಕ್ಕೂ ಚಾಲನೆಯನ್ನು ನೀಡಲಿದ್ದಾರೆ.
ಕಳೆದ ಕೆಲ ತಿಂಗಳಿನಿಂದ ಸಾಗರದ ವಿಜಯನಗರದಲ್ಲಿರುವಂತ ಈಜುಕೊಳವನ್ನು ದುರಸ್ಥಿ ಮಾಡಲಾಗುತ್ತಿತ್ತು. ಇದೀಗ ನವೀಕರಣ ಕಾರ್ಯವು ಮುಕ್ತಾಯಗೊಂಡಿದ್ದು, ಮೇ.1ರ ನಾಳೆ ಉದ್ಘಾಟನೆಗೊಳ್ಳಲಿದೆ.
ನಾಳೆ ಬೆಳಗ್ಗೆ 11 ಗಂಟೆಗೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ನವೀಕೃತ ಈಜುಕೊಳ ಹಾಗೂ ಬೇಸಿಗೆ ಈಜು ತರಬೇತಿ ಶಿಬಿರಕ್ಕೂ ಚಾಲನೆ ನೀಡಲಿದ್ದಾರೆ. ಈ ಮೂಲಕ ಸಾಗರ ಜನತೆಯ ಬಳಕೆಗೆ ಈಜುಕೊಳವನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಹೀಗಿದೆ ಈಜು ತರಬೇತಿಯ ವೇಳಾಪಟ್ಟಿ
ನಾಳೆ ಶಾಸಕ ಗೋಪಾಲಕೃಷ್ಣ ಬೇಳೂರು ಸಾಗರದ ವಿಜಯನಗರದಲ್ಲಿರುವಂತ ಈಜುಕೊಳವನ್ನು ಉದ್ಘಾಟನೆ ಬಳಿಕ, ಮೇ.2ರಿಂದ ಈಜು ತರಬೇತಿಯೂ ಆರಂಭಗೊಳ್ಳಲಿದೆ.
4 ವರ್ಷ ಮೇಲ್ಪಟ್ಟ ಎಲ್ಲರಿಗೂ ರೂ.1,500 ತರಬೇತಿ ಶುಲ್ಕವನ್ನು ನಿಗದಿ ಪಡಿಸಲಾಗಿದೆ. ಸುಮಾರು 21 ದಿನಗಳ ಕಾಲ ಈಜು ತರಬೇತಿಯನ್ನು ನುರಿತ ಈಜು ತಜ್ಞರಿಂದ ನೀಡಲಾಗುತ್ತದೆ.
- ಬೆಳಿಗ್ಗೆ 6ರಿಂದ 7ರವರೆಗೆ ಮೊದಲ ಬ್ಯಾಚ್ ತರಬೇತಿ ನಡೆಯಲಿದೆ.
- ಬೆಳಿಗ್ಗೆ 7ರಿಂದ 8 ಎರಡನೇ ಬ್ಯಾಚ್ ಗೆ ತರಬೇತಿ
- ಬೆಳಿಗ್ಗೆ 9ರಿಂದ 10ರವರೆಗೆ ಮೂರನೇ ಬ್ಯಾಚ್ ಗೆ ತರಬೇತಿ
- ಬೆಳಿಗ್ಗೆ 10ರಿಂದ 11ರವರೆಗೆ ನಾಲ್ಕನೇ ಬ್ಯಾಚ್ ಗೆ ತರಬೇತಿ.
- ಸಂಜೆ 3ರಿಂದ 4ರವರೆಗೆ ಕೇವಲ ಮಹಿಳೆಯರಿಗೆ ಮಾತ್ರ ತರಬೇತಿ ನೀಡಲಾಗುತ್ತದೆ.
- ಸಂಜೆ 4ರಿಂದ 5ರವರೆಗೆ ಐದನೇ ಬ್ಯಾಚ್ ಗೆ ತರಬೇತಿ
- ಸಂಜೆ 5ರಿಂದ 6ರವರೆಗೆ ಆರನೇ ಬ್ಯಾಚ್ ಗೆ ತರಬೇತಿ
- ಸಂಜೆ 6ರಿಂದ 7ರವರೆಗೆ ಮಹಿಳೆಯರಿಗೆ ಮಾತ್ರವೇ ತರಬೇತಿ ನೀಡಲಾಗುತ್ತದೆ.
- ಪ್ರತಿ ಸೋಮವಾರ ರಜೆ ಇರಲಿದೆ.
ಈ ಬೇಸಿಗೆ ಈಜು ತರಬೇತಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9731233184, 9008982197.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ಚಂದ್ರನ ಶಿವಶಕ್ತಿ ಬಿಂದುವಿನಲ್ಲಿ ಚಂದ್ರಯಾನ -3 ದೊಡ್ಡ ಆವಿಷ್ಕಾರ: ನಿರ್ಣಾಯಕ ಪುರಾವೆ ಪತ್ತೆ | Chandrayaan-3
BBMPಯ ನೂತನ ಮುಖ್ಯ ಆಯುಕ್ತರಾಗಿ ಮಹೇಶ್ವರ ರಾವ್, ಆಡಳಿತಗಾರಾಗಿ ತುಷಾರ್ ಗಿರಿನಾಥ್ ಅಧಿಕಾರ ಸ್ವೀಕಾರ