ಚಿಕ್ಕಮಗಳೂರು: ಗ್ರಾಮೀಣ ಜನರು ತಮ್ಮ ಕೆಲಸ ಕಾರ್ಯದ ನಿಮಿತ್ತ ಗ್ರಾಮ ಆಡಳಿತ ಅಧಿಕಾರಿಗಳಿಗಾಗಿ ಪರದಾಡುವ ಸಮಸ್ಯೆ ಇನ್ಮುಂದೆ ತಪ್ಪಲಿದೆ. ಗ್ರಾಮೀಣ ಜನತೆಗೆ ಗುಡ್ ನ್ಯೂಸ್ ಎನ್ನುವಂತೆ ಇನ್ಮುಂದೆ ಗ್ರಾಮ ಪಂಚಾಯ್ತಿಗಳಲ್ಲೇ ವಿಎಗಳು ಸಿಗೋದಕ್ಕೆ ವ್ಯವಸ್ಥೆ ಮಾಡಲಾಗಿದೆ.
ಈ ಬಗ್ಗೆ ಮಾತನಾಡಿರುವಂತ ಕಂದಾಯ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಅವರು, ರಾಜ್ಯದಲ್ಲಿ ಜನರು ಗ್ರಾಮ ಆಡಳಿತಾಧಿಕಾರಿಗಳನ್ನು ಎಲ್ಲಿದ್ದಾರೆ ಎಂದು ಹುಡುಕುವ ಸ್ಥಿತಿ ಇದೆ. ಹೀಗಾಗಿ ಇದನ್ನು ತಪ್ಪಿಸೋದಕ್ಕೆ ಗ್ರಾಮ ಪಂಚಾಯ್ತಿ ಮಟ್ಟದಲ್ಲೂ ಅವರಿಗೆ ಕಚೇರಿ ತೆರೆಯಲು ವ್ಯವಸ್ಥೆ ಮಾಡುವುದಾಗಿ ಹೇಳಿದ್ದಾರೆ.
ಹೋಬಳಿ, ತಾಲ್ಲೂಕು, ಜಿಲ್ಲಾ ಕೇಂದ್ರಗಳಿಗೆ ಹೋದರೂ ವಿಎ ಎಲ್ಲಿದ್ದಾರೆ ಅಂತ ಜನರಿಗೆ ಸಿಗುವುದು ಕಟ್ಟವಾಗಿದೆ. ಹೀಗಾಗಿ ಗ್ರಾಮ ಪಂಚಾಯ್ತಿ ಕಚೇರಿಗಳಲ್ಲಿ ಜಾಗ ಇದ್ದರೇ ಅಲ್ಲೇ ಕುರ್ಚಿ, ಟೇಬಲ್ ಹಾಕಿ ವ್ಯವಸ್ಥೆ ಮಾಡಬೇಕು. ಜಾಲ ಇಲ್ಲದೇ ಇದ್ದರೇ ಅದೇ ಕಚೇರಿಯಲ್ಲಿ ಸಣ್ಣ ಕೊಠಡಿ ನಿರ್ಮಿಸಿ ಅವರು ಕೂರಲು, ದಾಖಲೆ ಸಂಗ್ರಹಿಸೋದಕ್ಕೆ, ಗ್ರಾಮೀಣ ಜನರ ಕೆಲಸ ಮಾಡೋದಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಈ ಬಗ್ಗೆ ಎಲ್ಲಾ ಜಿಲ್ಲಾಧಿಕಾರಿಗಳಿಗೂ ಸೂಚಿಸಲಾಗುತ್ತದೆ ಎಂದರು.