ಬೆಂಗಳೂರು: ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿಯ ಹಿರಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷರನ್ನಾಗಿ ಡಾ.ಲತಾ.ಟಿ.ಎಸ್ ಅವರನ್ನು ನೇಮಕ ಮಾಡಲಾಗಿದೆ.
ಈ ಬಗ್ಗೆ ಮಾಹಿತಿಯನ್ನು ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿಯ ಗೌರವಾಧ್ಯಕ್ಷ ಹಾಗೂ ಮುಖ್ಯಸ್ಥರಾದಂತ ಎಂ.ಬಿ ಜಯರಾಂ ಹಾಗೂ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯ ಅಧ್ಯಕ್ಷರಾದಂತ ಗೀತಾ ಶಂಕರ್ ಮಾಹಿತಿ ನೀಡಿದ್ದಾರೆ.
KSRTCಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮತ್ತು ಮಂಡಳಿಯ ಕಾರ್ಯದರ್ಶಿಯಾಗಿರುವಂತ ಡಾ.ಲತಾ ಟಿ.ಎಸ್ ಅವರನ್ನು ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿಯ ಹಿರಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷರನ್ನಾಗಿ ನೇಮಿಸಿರುವುದಾಗಿ ತಿಳಿಸಿದ್ದಾರೆ.
ಅಂದಹಾಗೇ ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿಯು ದೇಶಾದ್ಯಂತ 85 ಶಾಖೆಗಳನ್ನು ಹೊಂದಿದೆ. ಅಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲೂ ಸಿಂಗಾಪುರ್, ಲಂಡನ್, ಶ್ರೀಲಂಕಾ, ದುಬೈ, ನೇಪಾಳ, ಆಸ್ಟ್ರೇಲಿಯಾ, ಅಮೇರಿಕಾದಲ್ಲೂ ತನ್ನ ಶಾಖೆಯನ್ನು ಹೊಂದಿದೆ. ಇದಲ್ಲದೆ YCC Young Communicators Club of PRCI ದೇಶದ್ಯಾಂತ 70 ಕ್ಕೂ ಹೆಚ್ಚು ಕಾಲೇಜುಗಳಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ ಎಂಬುದಾಗಿಯೂ ಮಾಹಿತಿ ನೀಡಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ಚೆಕ್ ಬೌನ್ಸ್ ಕೇಸಲ್ಲಿ ಮಾಜಿ MLA ಗೂಳಿಹಟ್ಟಿ ಶೇಖರ್ ಗೆ ಬಿಗ್ ಶಾಕ್: 60 ಲಕ್ಷ ಕಟ್ಟದಿದ್ದರೇ 6 ತಿಂಗಳು ಜೈಲು ಶಿಕ್ಷೆ
BIG NEWS : ಬೆಂಗಳೂರಿನ ‘ನಮ್ಮ ಮೆಟ್ರೋ’ದಲ್ಲಿ ಊಟ ಮಾಡಿದ ಮಹಿಳೆಗೆ 500 ರೂ.ದಂಡ : ‘BMRCL’ ಮಹತ್ವದ ಪ್ರಕಟಣೆ.!