ಬೆಂಗಳೂರು: ಬರೀ TV, ಪತ್ರಿಕೆಗಳಿಗಷ್ಟೇ ಅಲ್ಲದೇ, ಇನ್ನು ಮುಂದೆ Digital Mediaಗೂ ಜಾಹೀರಾತು ನೀಡಬೇಕು ಎಂಬ ಸರ್ಕಾರ ಆದೇಶ ಜಾರಿಗಳಿಸಿದೆ. ಈ ಹಿನ್ನೆಲೆಯಲ್ಲಿ ಈ ನೀತಿ ಜಾರಿಯಾಗಲು ಕಾರಣರಾದ ಸಿಎಂ ಮಾಧ್ಯಮ ಕಾರ್ಯದರ್ಶಿ ಕೆ.ವಿ.ಪ್ರಭಾಕರ್ ಮತ್ತು ವಾರ್ತಾ ಇಲಾಖೆಯ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರನ್ನು ನಾಳೆ ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಕರ್ನಾಟಕ ಡಿಜಿಟಲ್ ಮೀಡಿಯಾ ಪೋರಂ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಡಿಜಿಟಲ್ ಮೀಡಿಯಾಗಳಿಗೆ ಜಾಹಿರಾತು ಅನುಮತಿ KSDMF ಗೆ ಸಂತಸದ ಕ್ಷಣ. ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿ ಸರಣಿ ಸಭೆಗಳ ಬಳಿಕ ಡಿಜಿಟಲ್ ಮಾಧ್ಯಮಕ್ಕೆ ಜಾಹಿರಾತು ನೀಡಲು ಒಪ್ಪಿ ಆದೇಶ ಜಾರಿಗೊಳಿಸಿರುವುದು ನಿಜಕ್ಕೂ ಅಭಿನಂದನಾರ್ಹ ಸಂಗತಿ.
ಈ ಹಿನ್ನೆಲೆಯಲ್ಲಿ ಇದಕ್ಕೆ ಕಾರಣರಾದ ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ಕೆ.ವಿ ಪ್ರಭಾಕರ್ & ವಾರ್ತಾ ಇಲಾಖೆಯ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರನ್ನ ಅಭಿನಂಧಿಸಲು ಕರ್ನಾಟಕ ಡಿಜಿಟಲ್ ಮೀಡಿಯಾ ಪೋರಂ ಅಧ್ಯಕ್ಷರಾದಂತ ಸಮೀವುಲ್ಲಾ ಬಿ ಬೆಲಗೂರು ನೇತೃತ್ವದಲ್ಲಿ ನಡೆದಂತ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ದಿನಾಂಕ 29-04-2025ರ ನಾಳೆ ಬೆಳಗ್ಗೆ 11 ಕ್ಕೆ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ KSDMF ವತಿಯಿಂದ ಇವರನ್ನ ಹೃತ್ಪೂರ್ವಕವಾಗಿ ಅಭಿನಂಧಿಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವಂತ ವೆಬ್ ಸೈಟ್, ಯೂಟ್ಯೂಬ್ ಚಾನಲ್ ನಡೆಸುತ್ತಿರುವವರು ಆಗಮಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಲು ಕೋರಲಾಗಿದೆ.
ಈ ಕಾರ್ಯಕ್ರಮದ ಬಗ್ಗೆ ಮಾಹಿತಿಗಾಗಿ ಸಂಪರ್ಕಿಸಿ
– ಕೆ.ಎಂ ಶಿವಕುಮಾರ್, KSDMF ಕಾರ್ಯದರ್ಶಿ ( ಕರ್ನಾಟಕ ಟಿವಿ ) 7204490507
– ವಸಂತ ಬಿ ಈಶ್ವರಗೆರೆ, KSDMF ಉಪಾಧ್ಯಕ್ಷರು ( ಕನ್ನಡ ನ್ಯೂಸ್ ನೌ )- 9738123234
– ಮಾಲ್ತೇಶ್, KSDMF ಜಂಟಿ ಕಾರ್ಯದರ್ಶಿ 9480472030
– ರಜನಿ, KSDMF ಜಂಟಿ ಕಾರ್ಯದರ್ಶಿ – 9606576789
ಚೆಕ್ ಬೌನ್ಸ್ ಕೇಸಲ್ಲಿ ಮಾಜಿ MLA ಗೂಳಿಹಟ್ಟಿ ಶೇಖರ್ ಗೆ ಬಿಗ್ ಶಾಕ್: 60 ಲಕ್ಷ ಕಟ್ಟದಿದ್ದರೇ 6 ತಿಂಗಳು ಜೈಲು ಶಿಕ್ಷೆ
ರಾಜ್ಯದ ಬಿಜೆಪಿ ನಾಯಕರು ಮೋದಿ ಜೀ ಪ್ರಶ್ನಿಸುವ ಎದೆಗಾರಿಕೆ ತೋರುತ್ತೀರಾ?: ಸಚಿವ ರಾಮಲಿಂಗಾರೆಡ್ಡಿ ಪ್ರಶ್ನೆ