ಬೆಂಗಳೂರು: ಸ್ಪೀಕರ್ ಅವರು ಆಡಳಿತ ಪಕ್ಷದ ಕೈಗೊಂಬೆಯಾಗಿ ವರ್ತಿಸಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಮನವಿ ಮಾಡಿದ್ದಾರೆ.
ಬಿ.ವೈ. ವಿಜಯೇಂದ್ರ ಮತ್ತು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ನೇತೃತ್ವದಲ್ಲಿ ಬಿಜೆಪಿ ಶಾಸಕರ ನಿಯೋಗವು ಇಂದು ಗೌರವಾನ್ವಿತ ರಾಜ್ಯಪಾಲರನ್ನು ಭೇಟಿ ಮಾಡಿತು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿಯ 18 ಶಾಸಕರನ್ನು 6 ತಿಂಗಳ ಕಾಲ ಅಮಾನತು ವಿಷಯದಲ್ಲಿ ಸಂವಿಧಾನ ವಿರೋಧಿ ನಡೆಯನ್ನು ಅನುಸರಿಸಲಾಗಿದ್ದು, ಸ್ಪೀಕರ್ ಅವರು ಇದಕ್ಕೆ ಬೆಂಬಲ ಕೊಡಬಾರದು ಎಂದು ಒತ್ತಾಯಿಸಿದರು.
ಆಡಳಿತ ಪಕ್ಷಕ್ಕೆ ಮನವರಿಕೆ ಮಾಡಿ ಸ್ಪೀಕರ್ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಆಗ್ರಹಿಸಿದರು. ಗೌರವಾನ್ವಿತ ರಾಜ್ಯಪಾಲರನ್ನು ಭೇಟಿ ಮಾಡಿದ್ದೇವೆ. ರಾಜ್ಯಪಾಲರು ಇದರಲ್ಲಿ ಮಧ್ಯಸ್ಥಿಕೆ ವಹಿಸಬೇಕು. ಸರಕಾರಕ್ಕೆ ಬುದ್ಧಿ ಹೇಳಬೇಕೆಂದು ಕೋರಿದ್ದಾಗಿ ವಿವರಿಸಿದರು.
ಈಚೆಗೆ ನಡೆದ ಸದನದ ಕಲಾಪದಲ್ಲಿ ಬಿಜೆಪಿಯ 18 ಶಾಸಕರ ಅಮಾನತು ಕೂಡ ಆಗಿದೆ. ಹಲವಾರು ಬಾರಿ ವಿಪಕ್ಷದ ನಾಯಕರು ಮತ್ತು ಶಾಸಕರು ಸಭಾಧ್ಯಕ್ಷರನ್ನು ಭೇಟಿ ಮಾಡಿ ಮನವಿ ಮಾಡಿದರೂ ಶಾಸಕರ ಅಮಾನತನ್ನು ಹಿಂಪಡೆದಿಲ್ಲ ಎಂದರು. ಸ್ಪೀಕರ್ ಅವರು ಮಂಗಳೂರಿನಲ್ಲಿ ಹೇಳಿಕೆ ನೀಡಿದ್ದು, 18 ಶಾಸಕರ ಅಮಾನತು ತಮ್ಮೊಬ್ಬರ ತೀರ್ಮಾನ ಅಲ್ಲ ಎಂದಿದ್ದಾರೆ ಎಂದು ಗಮನ ಸೆಳೆದರು.
ಅವಿವೇಕತನದ ಹೇಳಿಕೆ ಬಿಟ್ಟು ದೇಶದ ಪರವಾಗಿ ನಿಲ್ಲಲು ಆಗ್ರಹ
ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದ ವಿಜಯೇಂದ್ರ ಅವರು, ಮುಖ್ಯಮಂತ್ರಿಗಳೇ ಯುದ್ಧ ಬೇಡ ಎಂದು ಹೇಳಿಕೆ ಕೊಟ್ಟಿದ್ದಾರೆ. ಉಳಿದಂತೆ ತಿಮ್ಮಾಪುರ, ಸಂತೋಷ್ ಲಾಡ್ ಅವರು ಇದೇ ಧಾಟಿಯಲ್ಲಿ ಮಾತನಾಡುವುದರಲ್ಲಿ ವಿಶೇಷ ಇಲ್ಲ; ಕೇಂದ್ರ ಸರಕಾರ, ಪ್ರಧಾನಿ ನರೇಂದ್ರ ಮೋದಿಯವರು ಯಾವುದೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ಬೆಂಬಲ ಕೊಡುವುದಾಗಿ ಕಾಂಗ್ರೆಸ್ ಪಕ್ಷದ (ಎಐಸಿಸಿ) ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಹೇಳಿದ್ದಾರೆ. ಪಾಕ್ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಅಗತ್ಯ ಎಂದು ಕಾಂಗ್ರೆಸ್ಸಿನ ಹಿರಿಯ ಸಂಸದ ಶಶಿ ತರೂರ್ ಅವರೂ ಹೇಳಿದ್ದಾರೆ. ಇದನ್ನು ಈಗಲಾದರೂ ಅರ್ಥ ಮಾಡಿಕೊಳ್ಳಿ ಎಂದು ಮುಖ್ಯಮಂತ್ರಿಗಳಿಗೆ ಮತ್ತು ಸಚಿವ ಸಂಪುಟದ ಸದಸ್ಯರಿಗೆ ತಿಳಿಸಿದರು. ಅವಿವೇಕತನದ ಹೇಳಿಕೆ ಬಿಟ್ಟು ದೇಶದ ಪರವಾಗಿ ನಿಲ್ಲಬೇಕೆಂದು ಮುಖ್ಯಮಂತ್ರಿಗಳು ಮತ್ತು ತಿಮ್ಮಾಪುರ ಅವರಿಗೆ ಆಗ್ರಹಿಸಿದರು.
ತಾಳಿ, ಜನಿವಾರ ತೆಗೆಸÀದಂತೆ ಸೂಚನೆ- ಅಶೋಕ್
ಆರ್. ಅಶೋಕ್ ಅವರು ಮಾತನಾಡಿ, ಶಾಸಕರ ಅಮಾನತು ಸಂವಿಧಾನ ಬಾಹಿರ ಎಂದು ಮಾನ್ಯ ಗವರ್ನರ್ ಅವರ ಗಮನ ಸೆಳೆÀದಿದ್ದೇವೆ. ಸರಕಾರಕ್ಕೆ ಪತ್ರ ಬರೆಯುವೆ; ಹಾಗೂ ಸ್ಪೀಕರ್ ಜೊತೆ ಮಾತನಾಡುವುದಾಗಿ ಹೇಳಿದ್ದಾರೆ ಎಂದು ವಿವರಿಸಿದರು.
ರೈಲ್ವೆ ನೇಮಕಾತಿಗಳಲ್ಲಿ ತಾಳಿ ಮತ್ತು ಜನಿವಾರದ ಉಲ್ಲೇಖ ಮಾಡಿದ್ದಾರಂತೆ. ನಾನು ಈಗ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಜೊತೆ ಮಾತನಾಡಿದ್ದೇನೆ. ರೈಲ್ವೆ ಸಚಿವರು ಅಂಥ ಕ್ರಮ ಕೈಗೊಳ್ಳದಂತೆ ಸೂಚಿಸಿದ್ದಾಗಿ ಪ್ರಲ್ಹಾದ್ ಜೋಶಿ ಅವರು ಹೇಳಿದ್ದಾರೆ ಎಂದು ವಿವರ ನೀಡಿದರು.
ಪ್ರಯಾಣಿಕರ ಗಮನಕ್ಕೆ: ಈ ಮಾರ್ಗದಲ್ಲಿ ರೈಲು ಸಂಚಾರ ಪುನರಾರಂಭ | Indian Railway Updates
BREAKING : ಷೇರುಪೇಟೆಯಲ್ಲಿ ‘ಸೆನ್ಸೆಕ್ಸ್’ 1,000 ಕ್ಕೂ ಹೆಚ್ಚು ಅಂಕ ಏರಿಕೆ |Share Market