ಉತ್ತರ ಕನ್ನಡ: ರಾಜ್ಯದಲ್ಲಿ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಎಂಬುದಾಗಿಯೇ ಮೌಸಿನ್ ಶುಕುರ್ ನನ್ನು ಕರೆಯಲಾಗುತ್ತಿತ್ತು. ಇಂತಹ ಆರೋಪಿ ಮೌಸಿನ್ ಶುಕುರ್ ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯ 1ನೇ ಹೆಚ್ಚುವರಿ ಸತ್ರ ನ್ಯಾಯಾಲಯದಿಂದ ಈ ಆದೇಶ ಮಾಡಲಾಗಿದೆ. ಅನೀಸ್ ಕೊಲೆ ಕೇಸಲ್ಲಿ ಮೌಸಿನ್ ಶುಕುರ್ ಗೆ ನ್ಯಾಯಾಂಗ ಬಂಧನವನ್ನು ವಿಧಿಸಿ ಕೋರ್ಟ್ ಆದೇಶಿಸಿದೆ.
ಇನ್ನುಳಿದ ಪ್ರಕರಣದಲ್ಲಿ ಬಾಡಿ ವಾರಂಟ್ ಪಡೆಯಲು ಪೊಲೀಸರು ಸಜ್ಜಾಗಿದ್ದಾರೆ. ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿರುವ ಮೌಸಿನ್ ಶುಕುರ್ ಗೆ ಬಾಡಿ ವಾರೆಂಟ್ ಪಡೆಯಲು ಪೊಲೀಸರು ಮುಂದಾಗಿದ್ದಾರೆ.
ಅಂದಹಾಗೇ ಮೌಸಿರ್ ಶುಕುರ್ ವಿರುದ್ಧ ಉತ್ತರ ಕನ್ನಡ, ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದಾವೆ. ಈತ ಭಯೋತ್ಪಾದಕರ ಜೊತೆ ಸಂಪರ್ಕ ಹೊಂದಿದ್ದರ ಬಗ್ಗೆಯೂ ಮಾಹಿತಿ ಇದೆ. ಈ ಕಾರಣಕ್ಕಾಗಿಯೇ ಎನ್ಐಎ ಕೂಡ ವಿಚಾರಣೆಗೆ ಮುಂದಾಗಿ ಎನ್ನಲಾಗುತ್ತಿದೆ.
BIG NEWS : ಬೆಂಗಳೂರಿನ ‘ನಮ್ಮ ಮೆಟ್ರೋ’ದಲ್ಲಿ ಊಟ ಮಾಡಿದ ಮಹಿಳೆಗೆ 500 ರೂ.ದಂಡ : ‘BMRCL’ ಮಹತ್ವದ ಪ್ರಕಟಣೆ.!
BREAKING : ಷೇರುಪೇಟೆಯಲ್ಲಿ ‘ಸೆನ್ಸೆಕ್ಸ್’ 1,000 ಕ್ಕೂ ಹೆಚ್ಚು ಅಂಕ ಏರಿಕೆ |Share Market