ಶ್ರೀನಗರ : ಪಹಲ್ಗಾಮ್ ಉಗ್ರ ದಾಳಿಯ ಮತ್ತೊಂದು ಸ್ಪೋಟಕ ಮಾಹಿತಿ ಬಹಿರಂಗವಾಗಿದ್ದು, ಎನ್ ಐಎ ತನಿಖೆ ವೇಳೆ ದಾಳಿಯಲ್ಲಿ ಪಾಕಿಸ್ತಾನದ ಕೈವಾಡ ಬಯಲಾಗಿದೆ.
ಹೌದು, ಪಹಲ್ಗಾಮ್ ದಾಳಿಗೂ ಮುನ್ನ ಉಗ್ರರು ಸ್ಯಾಟ್ ಲೈಟ್ ಫೋನ್ ಬಳಕೆ ಮಾಡಿದ್ದರು ಎನ್ನುವ ಸ್ಪೋಟಕ ಮಾಹಿತಿ ಎನ್ ಐಎ ತನಿಖೆಯಲ್ಲಿ ಬಹಿರಂಗವಾಗಿದೆ. ಪಾಕಿಸ್ತಾನದ ಕರಾಚಿಗೆ ಉಗ್ರರು ಕಾಲ್ ಮಾಡಿರುವುದು ಪತ್ತೆಯಾಗಿದೆ.
ಪಹಲ್ಗಾಮ್ ಉಗ್ರ ದಾಳಿಗೆ ಪಾಕಿಸ್ತಾನದಿಂದ ಆದೇಶ ಬಂದಿತ್ತು. ಸ್ಯಾಟ್ ಲೈಟ್ ಫೋನ್ ನಲ್ಲಿ ಮಾತುಕತೆಯ ಬಳಿಕ ಉಗ್ರರು ಯದ್ವಾದತ್ವ ದಾಳಿ ನಡೆಸಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿದೆ.