ಚಿತ್ರದುರ್ಗ : ಚಿತ್ರದುರ್ಗದಲ್ಲಿ ಘೋರ ಘಟನೆಯೊಂದು ನಡೆದಿದ್ದು, ಪಕ್ಕದ ಮನೆ ಸ್ನೇಹಿತೆ ಸೈಕಲ್ ಕೊಟ್ಟಿಲ್ಲ ಎಂದು ಮನನೊಂದು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಜಿಲ್ಲೆಯ ಹಿರಿಯೂರು ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಗೋಪಾಲ ಮತ್ತು ರುದ್ರಮ್ಮ ದಂಪತಿ ಪುತ್ರಿ ಸ್ಪಂದನಾ (11) ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಪಕ್ಕದ ಮನೆ ಗೆಳತಿ ಜೊತೆ ಬಾಲಕಿ ಪ್ರತಿನಿತ್ಯ ಸೈಕಲ್ ಆಡುತ್ತಿದ್ದಳು. ಅವಳು ಆಡುವುದಕ್ಕೆ ಸೈಕಲ್ ಕೊಟ್ಟಿಲ್ಲ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹಿರಿಯೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.