ಬೆಂಗಳೂರು : ಕಾಶ್ಮೀರದ ಪಹಲ್ಗಾಮ್ ನ ಉಗ್ರರ ದಾಳಿ ಬಳಿಕ ಕಾಶ್ಮೀರದಿಂದ ಸುರಕ್ಷಿತವಾಗಿ ಕನ್ನಡಿಗರು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಕ್ಕೆ ಬಂದಿಳಿದಿದ್ದಾರೆ.
ಕಾಶ್ಮೀರಕ್ಕೆ ತೆರಳಿರುವ ಕನ್ನಡಿಗರನ್ನು ಅತ್ಯಂತ ಸುರಕ್ಷಿತವಾಗಿ ತಾಯ್ನಾಡು ಕರ್ನಾಟಕಕ್ಕೆ ಕರೆತರುವ ನಿಟ್ಟಿನಲ್ಲಿ ಮಾನ್ಯ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಸಕಲ ವ್ಯವಸ್ಥೆಗಳನ್ನು ಕೈಗೊಂಡಿರುವ ಟ್ರಬಲ್ ಶೂಟರ್ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು 178 ಕನ್ನಡಿಗರನ್ನು ಶ್ರೀನಗರದ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ(ಇಂಡಿಗೋ-6E 9198) ಮೂಲಕ ಇಂದು ಕರೆತಂದಿದ್ದಾರೆ.
ಇಂದು ಬೆಳಗ್ಗೆ 8:45ಕ್ಕೆ ಶ್ರೀನಗರ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನ ಹೊರಟಿದ್ದು,ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇದೀಗ ಬಂದಿಳಿದಿದೆ.