ಬೆಂಗಳೂರು : ಪಹಲ್ಗಮ್ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಬೆಂಗಳೂರಿನ ನಿವಾಸಿ ಭರತ್ ಭೂಷಣ್ ಅವರ ಅಂತಿಮ ವಿಧಿವಿಧಾನಗಳನ್ನು ಇಂದು ನಡೆಸಲಾಗುತ್ತಿದೆ. ಇಂದು ಸಂಜೆ ಅಂತ್ಯಕ್ರಿಯೆ ನಡೆಯಲಿದೆ.
ಭರತ್ ಮೃತದೇಹದ ಮುಂದೆ ತಂದೆ, ತಾಯಿಯ ಆಕ್ರಂದನ ಮುಗಿಲು ಮುಟ್ಟಿದ್ದು, ಮತ್ತಿಕೆರೆಯ ಸುಂದರನಗರದಲ್ಲಿ ಭರತ್ ಅಂತಿಮ ದರ್ಶನವನ್ನು ಸಂಬಂಧಿಕರು ಪಡೆಯುತ್ತಿದ್ದಾರೆ.
ಇನ್ನು ಇಂದು ಬೆಳಗ್ಗೆ 7.30ಕ್ಕೆ ಸಿಎಂ ಸಿದ್ದರಾಮಯ್ಯ ಅವರು ಭರತ್ ಭೂಷಣ್ ಅವರ ಅಂತಿಮ ದರ್ಶನ ಪಡೆಯಲಿದ್ದು, ಭರತ್ ನಿವಾಸದ ಸುತ್ತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
#WATCH | Karnataka | Rituals before the final rites of Bharat Bhushan – a resident of Bengaluru, who was killed in the #PahalgamTerroristAttack, are being performed.
Final rites will be performed later today. pic.twitter.com/zpYyU50kcw
— ANI (@ANI) April 24, 2025