ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿ ಬಳಿಕ ಇಂದು ಹೆಲಿಕಾಪ್ಟರ್ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಿದ್ದಾರೆ.
ಶ್ರೀನಗರ, ಜೆ & ಕೆ ನಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಲಿಪಶುಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಗೌರವ ಸಲ್ಲಿಸಿದರು. ಬಳಿಕ ಮೃತದೇಹಗಳನ್ನು ಆಯಾ ರಾಜ್ಯಗಳಿಗೆ ರವಾನೆ ಮಾಡಲಾಗುವುದು ಎಂದು ವರದಿಯಾಗಿದೆ.
ಈ ಭಯೋತ್ಪಾದಕ ದಾಳಿ ಪಹಲ್ಗಾಮ್‌ನ ಬೈಸ್ರಾನ್ ಕಣಿವೆಯಲ್ಲಿ ನಡೆಯಿತು. ಭದ್ರತಾ ಪಡೆಗಳು ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿವೆ. ದಾಳಿಯ ಸುದ್ದಿ ತಿಳಿದ ಕೂಡಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಲು ಸಭೆ ಕರೆದು ನಂತರ ಶ್ರೀನಗರಕ್ಕೆ ತೆರಳಿದರು.
#WATCH | Union Home Minister Amit Shah arrives at Baisaran meadow, the site of the Pahalgam terror attack pic.twitter.com/i9f6muLgTq
— ANI (@ANI) April 23, 2025