ನವದೆಹಲಿ: ಶರಬತ್ ಜಿಹಾದ್ ಹೇಳಿಕೆ ನೀಡಿದ್ದಕ್ಕಾಗಿ ಬಾಬಾ ರಾಮ್ದೇವ್ ಅವರನ್ನು ದೆಹಲಿ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.ಇದು ಸಮರ್ಥನೀಯವಲ್ಲ ಎಂದಿದೆ.
ಏಪ್ರಿಲ್ 3 ರಂದು ಬಾಬಾ ರಾಮ್ದೇವ್ ಹಮ್ದರ್ದ್ನ ರೂಹ್ ಅಫ್ಜಾವನ್ನು ಗುರಿಯಾಗಿಸಿಕೊಂಡು, ಔಷಧೀಯ ಮತ್ತು ಆಹಾರ ಕಂಪನಿ ತನ್ನ ಹಣವನ್ನು ಮಸೀದಿಗಳು ಮತ್ತು ಮದರಸಾಗಳನ್ನು ನಿರ್ಮಿಸಲು ಬಳಸುತ್ತಿದೆ ಎಂದು ಹೇಳಿದ್ದಾರೆ. “ನಿಮಗೆ ಶರ್ಬತ್ ನೀಡುವ ಕಂಪನಿ ಇದೆ, ಆದರೆ ಅದು ಗಳಿಸುವ ಹಣವನ್ನು ಮದರಸಾಗಳು ಮತ್ತು ಮಸೀದಿಗಳನ್ನು ನಿರ್ಮಿಸಲು ಬಳಸಲಾಗುತ್ತದೆ” ಎಂದು ರಾಮ್ದೇವ್ ಆರೋಪಿಸಿದರು.
“ನೀವು ಆ ಶರ್ಬತ್ ಕುಡಿದರೆ, ಮದರಸಾಗಳು ಮತ್ತು ಮಸೀದಿಗಳನ್ನು ನಿರ್ಮಿಸಲಾಗುತ್ತದೆ. ಆದರೆ ನೀವು ಇದನ್ನು ಕುಡಿದರೆ (ಪತಂಜಲಿಯ ಗುಲಾಬಿ ಶರ್ಬತ್ ಅನ್ನು ಉಲ್ಲೇಖಿಸಿ), ಗುರುಕುಲಗಳನ್ನು ನಿರ್ಮಿಸಲಾಗುವುದು, ಆಚಾರ್ಯ ಕುಲಂ ಅಭಿವೃದ್ಧಿಯಾಗುತ್ತದೆ, ಪತಂಜಲಿ ವಿಶ್ವವಿದ್ಯಾಲಯ ವಿಸ್ತರಿಸುತ್ತದೆ ಮತ್ತು ಭಾರತೀಯ ಶಿಕ್ಷಣ ಮಂಡಳಿ ಬೆಳೆಯುತ್ತದೆ.
ಈ ಹೇಳಿಕೆಯ ನಂತರ, ಕಂಪನಿಯು ಬಾಬಾ ರಾಮ್ದೇವ್ ವಿರುದ್ಧ ಹೈಕೋರ್ಟ್ಗೆ ಮೊರೆ ಹೋಯಿತು.
ಹಮ್ದ್ರದ್ ಪರವಾಗಿ ಹಾಜರಾದ ಹಿರಿಯ ವಕೀಲ ಮುಕುಲ್ ರೋಹಟಗಿ, “ಇದು ಆಘಾತಕಾರಿ ಪ್ರಕರಣವಾಗಿದೆ. ಇದು ದ್ವೇಷ ಭಾಷಣಕ್ಕೆ ಹೋಲುವ ಕೋಮು ವಿಭಜನೆಯನ್ನು ಸೃಷ್ಟಿಸುವ ಪ್ರಕರಣವಾಗಿದೆ. ಇದು ಮಾನಹಾನಿ ಕಾನೂನಿನಿಂದ ರಕ್ಷಣೆಯನ್ನು ಹೊಂದಿರುವುದಿಲ್ಲ” ಎಂದರು.
ಬಾಬಾ ರಾಮದೇವ್ ಅವರು ಲವ್ ಜಿಹಾದ್ ಮತ್ತು ರೂಹ್ ಅಫ್ಜಾ ನಡುವಿನ ವಿವಾದಾತ್ಮಕ ಹೋಲಿಕೆಯನ್ನು ಸಹ ಚಿತ್ರಿಸಿದರು.