ಬೆಂಗಳೂರು: ರಾಜ್ಯದ 222 ಗ್ರಾಮ ಪಂಚಾಯ್ತಿಗಳಿಗೆ ಉಪ ಚುನಾವಣೆ ಘೋಷಣೆ ಮಾಡಲಾಗಿತ್ತು. ಆದರೇ ದಿಢೀರ್ 15 ದಿನಗಳ ಮಟ್ಟಿಗೆ ಗ್ರಾಮ ಪಂಚಾಯ್ತಿ ಉಪ ಚುನಾವಣೆ ಮುಂದೂಡಿಕೆ ಮಾಡಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳ ವಿವಿಧ ಕಾರಣಗಳಿಂದ ತೆರವಾಗಿರುವ, ಖಾಲಿಯಿರುವ ಗ್ರಾಮ ಪಂಚಾಯತ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆಯನ್ನು ಜರುಗಿಸಲು ರಾಜ್ಯ ಚುನಾವಣೆ ಆಯೋಗವು ಆದೇಶಿಸಿ ವೇಳಾಪಟ್ಟಿಯೊಂದಿಗೆ ಸೂಚಿಸಿತ್ತು.
ಆದರೆ ರಾಜ್ಯ ಚುನಾವಣೆ ಆಯೋಗವು ಸದರಿ ಗ್ರಾಮ ಪಂಚಾಯತ ಉಪ ಚುನಾವಣೆಗಳನ್ನು 15 ದಿನಗಳ ಮಟ್ಟಿಗೆ ಮುಂದೂಡಿ ಇಂದು ಆದೇಶಿಸಿದೆ.
ಕಾರಣ ಈ ಕುರಿತು ಉಪ ಚುನಾವಣೆಯನ್ನು ಜರುಗಿಸುವ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರಚುರ ಪಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸರ್ಕಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಉಕ್ಕು ಆಮದು ಮೇಲೆ ಶೇ.12 ಸುರಕ್ಷತಾ ಸುಂಕ ವಿಧಿಸಿದ ಕೇಂದ್ರ ಸರ್ಕಾರ: ಪ್ರಧಾನಿ ಮೋದಿಗೆ HDK ಕೃತಜ್ಞತೆ
ರಾಜ್ಯ ಸರ್ಕಾರದ ಆನ್‍ಲೈನ್ ತರಬೇತಿ ಪೋರ್ಟಲ್, ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಸಿಎಂ ಚಾಲನೆ