ಶಿವಮೊಗ್ಗ: ತಿರುಪತಿಯಿಂದ ಶಿವಮೊಗ್ಗಕ್ಕೆ ತೆರಳಬೇಕಿದ್ದಂತ ವಿಮಾನವೊಂದು ಹವಾಮಾನ ವೈಪರಿತ್ಯದಿಂದಾಗಿ ಬೆಳಗಾವಿಯಲ್ಲಿ ಲ್ಯಾಂಡ್ ಆಗಿದೆ. ಪ್ರಯಾಣಿಕರನ್ನು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಇಳಿಸಿದ್ದರಿಂದ ಶಿವಮೊಗ್ಗಕ್ಕೆ ಬರೋದಕ್ಕೆ ಪರದಾಡುವಂತೆ ಆಗಿದೆ.
ತಿರುಪತಿಯಿಂದ ಶಿವಮೊಗ್ಗಕ್ಕೆ ಸುಮಾರು 80 ಪ್ರಯಾಣಿಕರನ್ನು ಹೊತ್ತ ಸ್ಟಾರ್ ಏರ್ ಲೈನ್ಸ್ ವಿಮಾನ ಹೊರಟಿತ್ತು. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಗೆ ಹವಾಮಾನ ವೈಪರಿತ್ಯ ಅಡ್ಡಿಯಾಗಿತ್ತು. ಹೀಗಾಗಿ ಶಿವಮೊಗ್ಗದ ಬದಲು ಬೆಳಗಾವಿಯಲ್ಲಿ ಸ್ಟಾರ್ ಏರ್ ಲೈನ್ಸ್ ವಿಮಾನ ಲ್ಯಾಂಡ್ ಆಗಿದೆ.
ಶಿವಮೊಗ್ಗ ಬದಲು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಿದ ನಂತ್ರ, ಅಲ್ಲಿಂದ ಶಿವಮೊಗ್ಗಕ್ಕೆ ತೆರಳೋದಕ್ಕೆ ವ್ಯವಸ್ಥೆ ಮಾಡಿಲ್ಲ. ಹೀಗಾಗಿ ಪ್ರಯಾಣಿಕರು ಸ್ಟಾರ್ ಏರ್ ಲೈನ್ಸ್ ವಿರುದ್ಧ ಆಕ್ರೋಶವನ್ನು ಹೊರ ಹಾಕಿದ್ದಾರೆ. ಅಲ್ಲದೇ ಶಿವಮೊಗ್ಗಕ್ಕೆ ಬೆಳಗಾವಿಯಿಂದ ತೆರಳಲು ಸೂಕ್ತ ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ಸ್ಥಳದಲ್ಲಿ ಪ್ರತಿಭಟನೆ ಕೂಡ ನಡೆಸುತ್ತಿರೋದಾಗಿ ತಿಳಿದು ಬಂದಿದೆ.
BREAKING: ಮಾಜಿ ಡಿಜಿ ಮತ್ತು ಐಜಿಪಿ ಓಂ ಪ್ರಕಾಶ್ ಹತ್ಯೆ ಕೇಸ್: ಪತ್ನಿ ಪಲ್ಲವಿ ಅರೆಸ್ಟ್
BIG NEWS: ಎಲ್ಲಾ ಪೌರ ಕಾರ್ಮಿಕರನ್ನು ಖಾಯಂ, ಗುತ್ತಿಗೆ ನೌಕರರಿಗೆ ಕನಿಷ್ಠ ವೇತನ: ಸಿಎಂ ಸಿದ್ದರಾಮಯ್ಯ ಘೋಷಣೆ