ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಮರ್ಡರ್ ನಡೆದಿದ್ದು, ಚಾಕುವಿನಿಂದ ಇರಿದು ಮಗನೇ ತಂದೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಬೆಂಗಳೂರಿನ ವಿವೇಕನಗರ ಬಸ್ ನಿಲ್ದಾಣದ ಹಿಂಬಾಗ ತಡರಾತ್ರಿ ಘಟನೆ ನಡೆದಿದೆ. ನಿವೃತ್ತ ಯೋಧ ಇಸ್ಲಾಂ ಅರಬ್ (47) ಬರ್ಬರ ಹತ್ಯೆ ಮಾಡಲಾಗಿದೆ. ತಂದೆ ತುಂಬಾ ಸ್ಟ್ರೀಟ್ ಮಾಡುತ್ತಿದ್ದರು ಎಂದು ಮಗ ಬೋಲು ಅರಬ್ ಕೊಲೆ ಮಾಡಿದ್ದಾನೆ.
ಸದ್ಯ ವಿವೇಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಬೋಲು ಅರಬ್ ನನ್ನು ಪೊಲೀಸರು ಬಂಧಿಸಿದ್ದಾರೆ.