ಬೆಂಗಳೂರು : ಪ್ರಸಕ್ತ ಹಣಕಾಸು ವರ್ಷದಲ್ಲಿ ಟಿಸಿಎಸ್ 42,000 ಹೊಸಬರ ನೇಮಕ ಮಾಡಿಕೊಳ್ಳುವ ನಿರ್ಧಾರವನ್ನು ಪ್ರಕಟಿಸಿದ ಬೆನ್ನಲ್ಲೇ, ಐಟಿ ದೈತ್ಯ ಸಂಸ್ಥೆಗಳಾದ ಇನ್ಫೋಸಿಸ್, ವಿಪ್ರೊ ಕೂಡ ಹೊಸಬರನ್ನು ನೇಮಕ ಮಾಡಿಕೊಳ್ಳುವುದಾಗಿ ಹೇಳಿವೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಇನ್ಫೋಸಿಸ್ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ಜಯೇಶ್ ಸಂಘರಾಜ್ಯ ಅವರು, ಈ ಹಣಕಾಸು ವರ್ಷದಲ್ಲಿ 20,000ಕ್ಕೂ ಅಧಿಕ ಪ್ರಶರ್‌ಗಳನ್ನು ನೇಮಿಸಿಕೊಳ್ಳಲು ಯೋಜಿಸಿದೆ. 2025-26ನೇ ಸಾಲಿಗೆ ಒಟ್ಟು 20 ಸಾವಿರ ಅಭ್ಯರ್ಥಿಗಳು ಸಂಸ್ಥೆಗೆ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿಸಿದ್ದಾರೆ. ಐಟಿ ದೈತ್ಯ ಕಂಪನಿಗಳಲ್ಲಿ ಒಂದಾಗಿರುವ ವಿಪ್ರೊ ಕೂಡ ಪ್ರಸಕ್ತ ವರ್ಷ 10,000 ನೇಮಕ ನಡೆಸುವುದಾಗಿ ಹೇಳಿದೆ.
ಐಟಿ ಸೇವೆಗಳ ದೈತ್ಯ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) 2026 ರ ಹಣಕಾಸು ವರ್ಷದಲ್ಲಿ 42,000 ಫ್ರೆಶರ್ಗಳನ್ನು ನೇಮಿಸಿಕೊಳ್ಳುವ ಯೋಜನೆಯನ್ನು ಘೋಷಿಸಿದೆ.
ಮಾರ್ಚ್ 31, 2025 ರ ವೇಳೆಗೆ ಕಂಪನಿಯ ಉದ್ಯೋಗಿಗಳ ಸಂಖ್ಯೆ 6,07,979 ರಷ್ಟಿದ್ದು, ನಾಲ್ಕನೇ ತ್ರೈಮಾಸಿಕದಲ್ಲಿ 625 ನಿವ್ವಳ ಸೇರ್ಪಡೆಯಾಗಿದೆ. ಟಿಸಿಎಸ್ 2025ರ ಹಣಕಾಸು ವರ್ಷದಲ್ಲಿ 42,000 ಫ್ರೆಶರ್ಗಳನ್ನು ನೇಮಿಸಿಕೊಳ್ಳಲಿದೆ.