Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವಿಷಕ್ಕೆ ಸಮಾನ.! ಈ ಸಮಸ್ಯೆ ಇರುವವರು ಮರೆತು ಕೂಡ ‘ಬೀಟ್ರೂಟ್’ ತಿನ್ನಬಾರದು.!

07/07/2025 10:09 PM

ನಿಮ್ಮ ಮಕ್ಕಳು ಊಟ ಮಾಡುವುಕ್ಕೆ ಹಟ ಮಾಡ್ತಿದ್ದಾರಾ.? ಈ ಬಾರಿ ಇದನ್ನ ಟ್ರೈ ಮಾಡಿ!

07/07/2025 9:42 PM

‘YouTube’ ಹೊಸ ರೂಲ್ಸ್ ; ಇನ್ಮುಂದೆ ‘AI- ರಚಿತ, ಪುನರಾವರ್ತಿತ ವಿಷಯ’ ಹಾಕಿದ್ರೆ ‘ಹಣ’ ಸಿಗೋದಿಲ್ಲ

07/07/2025 9:33 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಕರ್ನಾಟಕದಲ್ಲಿ ಗುಂಡಿ ಮುಕ್ತ ರಸ್ತೆಗಳ ನಿರ್ವಹಣೆ ಗುರಿ : ಎಕೋಫಿಕ್ಸ್ ಎಂಬ ರೆಡಿಮಿಕ್ಸ್ ಪದಾರ್ಥ ಬಳಕೆ : ಟ್ರೈ ಪಾರ್ಟಿ ಒಡಂಬಡಿಕೆಗೆ ಸಹಿ.!
KARNATAKA

BIG NEWS : ಕರ್ನಾಟಕದಲ್ಲಿ ಗುಂಡಿ ಮುಕ್ತ ರಸ್ತೆಗಳ ನಿರ್ವಹಣೆ ಗುರಿ : ಎಕೋಫಿಕ್ಸ್ ಎಂಬ ರೆಡಿಮಿಕ್ಸ್ ಪದಾರ್ಥ ಬಳಕೆ : ಟ್ರೈ ಪಾರ್ಟಿ ಒಡಂಬಡಿಕೆಗೆ ಸಹಿ.!

By kannadanewsnow5718/04/2025 4:03 PM

ಬೆಂಗಳೂರು : ಸರ್ಕಾರವು ಕರ್ನಾಟಕ ರಾಜ್ಯವನ್ನು ಗುಂಡಿ ಮುಕ್ತ ರಸ್ತೆಗಳನ್ನಾಗಿಸುವ ಉದ್ದೇಶವನ್ನು ಹೊಂದಿದೆ. ಕಬ್ಬಿಣದ ಉತ್ಪಾದನೆಯಲ್ಲಿ ಬರುವ Sಟಚಿg ಅನ್ನು ಉಪಯೋಗಿಸಿ, ತೇವಾಂಶವಿರುವ ರಸ್ತೆಗಳಲ್ಲಿಯು ಸಹ, ಹೆಚ್ಚಿನ ಕಾರ್ಮಿಕರ ಅವಶ್ಯಕತೆಯಿಲ್ಲದೆ ಕಡಿಮೆ ಸಮಯದಲ್ಲಿ ಗುಂಡಿ ಮುಚ್ಚಲು ಸಾಧ್ಯವಾಗುವಂತೆ ಎಕೋಫಿಕ್ಸ್ ಎಂಬ ರೆಡಿಮಿಕ್ಸ್ ಪದಾರ್ಥವನ್ನು ಬಳಸಿಕೊಂಡು ರಸ್ತೆಯ ಗುಂಡಿಗಳನ್ನು ಮುಚ್ಚಲು ಸಾಧ್ಯವಾಗುವುದು. ಇದರಿಂದಾಗಿ ಅತಿಯಾಗಿ ಮಳೆಯಾಗುವ ಜಿಲ್ಲೆಗಳಲ್ಲಿ ಆಗಿಂದಾಗ್ಗೆ ಉಂಟಾಗುವ ರಸ್ತೆ ಗುಂಡಿಗಳನ್ನು ತೇವಾಂಶ ಇದ್ದಾಗಲೂ ಕೂಡ ಕಡಿಮೆ ಸಮಯದಲ್ಲಿ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬಹುದಾಗಿರುತ್ತದೆ.

ಕೇಂದ್ರ ರಸ್ತೆ ಸಂಶೋಧನಾ ಸಂಸ್ಥೆಯು, ಕಬ್ಬಿಣದ ಉತ್ಪಾದನೆಯಲ್ಲಿ ಬರುವ Slag ಅನ್ನು ಉಪಯೋಗಿಸಿ, ತೇವಾಂಶವಿರುವ ರಸ್ತೆಗಳಲ್ಲಿಯು ಸಹ, ಹೆಚ್ಚಿನ ಕಾರ್ಮಿಕರ ಅವಶ್ಯಕತೆಯಿಲ್ಲದೆ ಕಡಿಮೆ ಸಮಯದಲ್ಲಿ ಗುಂಡಿ ಮುಚ್ಚಲು ಸಾಧ್ಯವಾಗುವಂತೆ ಎಕೋಫಿಕ್ಸ್ ಎಂಬ ರೆಡಿಮಿಕ್ಸ್ ಪದಾರ್ಥವನ್ನು ತಯಾರಿಸಿದ್ದು, ಕರ್ನಾಟಕ ಸರ್ಕಾರವು ಕೇಂದ್ರ ರಸ್ತೆ ಸಂಶೋಧನಾ ಸಂಸ್ಥೆ ಹಾಗೂ ರಾಮುಕ ಗ್ಲೋಬಲ್ ಸರ್ವಿಸಸ್ ಅವರೊಂದಿಗೆ ಟ್ರೈ ಪಾರ್ಟಿ ಕರಾರು ಒಪ್ಪಂದ ಮಾಡಿಕೊಳ್ಳಲಾಗಿರುತ್ತದೆ.

ಈ ಸಂಬಂಧವಾಗಿ ಇಂದು, 2025ನೇ ಏಪ್ರಿಲ್ 17 ರಂದು ಮಾನ್ಯ ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರು ಹಾಗೂ ಮಾನ್ಯ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ರವರ ಉಪಸ್ಥಿಯಲ್ಲಿ ಟ್ರೈ ಪಾರ್ಟಿ -“Ecofix: Ready to Use Pot hole repair mix, for instant repair of distressed roads in state of Karnataka” CSIR – CRRI (Council of Scientific & Industrial Research Central Road Research Institute), ಲೋಕೋಪಯೋಗಿ ಹಾಗೂ ನಗರಾಭಿವೃದ್ಧಿ ಇಲಾಖೆ, ಕರ್ನಾಟಕ ಸರ್ಕಾರ ಮತ್ತು ರಮುಕಾ ಗ್ಲೋಬಲ್ ಸರ್ವೀಸಸ್ ರವರೊಂದಿಗೆ ಮೆಮೊಯಾರ್ಂಡಮ್ ಆಫ್ ಆಂಡರ್ಸ್ಟಾಂ ಡಿಂಗ್ (Memorandum of understanding –MOU) ಕ್ಕೆ ಸಹಿ ಮಾಡಬೇಕಾಗಿತ್ತು. ಆದರೆ, ತುರ್ತು ಕಾರಣಗಳಿಂದಾಗಿ ಸಚಿವರುಗಳ ಅನುಪಸ್ಥಿತಿಯಲ್ಲಿ ಹಾಗೂ ಅವರ ನಿರ್ದೇಶನದಂತೆ ಡಾ.ಶಾಲಿನಿ ರಜನೀಶ್, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರ ರವರ ಅಧ್ಯಕ್ಷತೆಯಲ್ಲಿ ಒಔU ಗೆ ಸಹಿ ಮಾಡಲಾಗಿರುತ್ತದೆ.

ಕರ್ನಾಟಕ ಸರ್ಕಾರವು, ಕೇಂದ್ರ ರಸ್ತೆ ಸಂಶೋಧನಾ ಸಂಸ್ಥೆ ಹಾಗೂ ರಾಮುಕ ಗ್ಲೋಬಲ್ ಸರ್ವಿಸಸ್ ರವರ ಸಹಯೋಗದೊಂದಿಗೆ ರಾಜ್ಯ ಹೆದ್ದಾರಿ 265 ರ ರಸ್ತೆಯಲ್ಲಿ ಪ್ರಾಯೋಗಿಕವಾಗಿ 2024ನೇ ಡಿಸೆಂಬರ್ 10 ರಂದು ಗುಂಡಿ ಮುಚ್ಚುವ ಕಾರ್ಯ ಸಹ ಮಾಡಲಾಗಿರುತ್ತದೆ.

ನಗರ ಪ್ರದೇಶಗಳಲ್ಲಿ ಅತಿಯಾಗಿ ಸಂಚಾರ ದಟ್ಟಣೆ ಇರುವುದರಿಂದ ಗುಂಡಿಗಳನ್ನು ಮುಚ್ಚಲು ಸಮಯ ಅವಕಾಶ ಕಡಿಮೆಯಿರುತ್ತದೆ. ಅಂತಹ ಸಮಯದಲ್ಲಿ ಸಂಚಾರ ದಟ್ಟಣೆ ಕಡಿಮೆಯಿದ್ದಾಗ ಅಂದರೆ ರಾತ್ರಿ ಸಮಯ ಕೂಡ ಎಕೋಫಿಕ್ಸ್ ಉಪಯೋಗಿಸಿ ಸಮತಟ್ಟು ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬಹುದಾಗಿರುತ್ತದೆ.

ಎಕೋಫಿಕ್ಸ್ 30ಕೆ.ಜಿ ಹಾಗೂ 50ಕೆ.ಜಿ ಚೀಲಗಳಲ್ಲಿ ಲಭ್ಯವಿದ್ದು, ಅದನ್ನು ಕಾಮಗಾರಿ ಸ್ಥಳಕ್ಕೆ ಸರಾಗವಾಗಿ ಸಾಗಿಸಬಹುದಾಗಿರುತ್ತದೆ. ಏಕರೂಪ ದರಪಟ್ಟಿಯಲ್ಲಿ ಕೋಲ್ಡ್ ಮಿಕ್ಸ್ ಪದ್ಧತಿಯಲ್ಲಿ ಗುಂಡಿ ಮುಚ್ಚಲು ತಗಲುವ ಮೊತ್ತ ರೂ. 17/- ಪ್ರತಿ ಕೆ.ಜಿ.ಗೆ ನಿಗಧಿಪಡಿಸಲಾಗಿರುತ್ತದೆ. ಎಕೋಫಿಕ್ಸ್ ಪದ್ಧತಿಯಲ್ಲಿ ಸರಬರಾಜು ಮಾಡಿ ಗುಂಡಿ ಮುಚ್ಚಲು ರೂ.15.70/- ಪ್ರತಿ ಕೆ.ಜಿ. ರಂತೆ ಮಾಡಲು ಮೆ:ರಾಮುಕ ಗ್ಲೋಬಲ್ ಸರ್ವಿಸಸ್ ರವರು ಒಪ್ಪಿಕೊಂಡಿರುತ್ತಾರೆ. ಇದರಿಂದಾಗಿ ಗುಂಡಿ ಮುಚ್ಚುವ ವೆಚ್ಚದಲ್ಲಿ ಸುಮಾರು ಶೇ.10 ರಷ್ಟು ಮೊತ್ತ ಸರ್ಕಾರಕ್ಕೆ ಉಳಿತಾಯವಾಗಲಿದೆ.

ಜೆ.ಎಸ್.ಡಬ್ಲ್ಯೂ, ಬಳ್ಳಾರಿ ರವರ ಸಹಯೋಗದೊಂದಿಗೆ ರಾಮುಕ ಗ್ಲೋಬಲ್ ಸರ್ವೀಸಸ್ ರವರು Ecofix Ready to Use Pot hole repair mix ಉತ್ಪಾದನೆ ಮಾಡಿ ಕಡಿಮೆ ದರದಲ್ಲಿ ಕರ್ನಾಟಕ ರಾಜ್ಯ ವ್ಯಾಪ್ತಿಯಲ್ಲಿ ಸರಬರಾಜು ಮಾಡಲು ಒಪ್ಪಿರುತ್ತಾರೆ.

ಲೋಕೋಪಯೋಗಿ ಇಲಾಖೆಯ ಇಲಾಖೆಯ ಎಲ್ಲಾ ಅಭಿಯಂತರರುಗಳಿಗೆ ಹಂತ ಹಂತವಾಗಿ ಎಕೋಫಿಕ್ಸ್ ಉಪಯೋಗಿಸುವುದರ ಬಗ್ಗೆ ತರಬೇತಿ ನೀಡಲಾಗುವುದು. ಇದರಿಂದಾಗಿ ಅತಿ ತುರ್ತಾಗಿ ಗುಂಡಿ ಮುಚ್ಚಿ, ಸಾರ್ವಜನಿಕರಿಗೆ ಹೆಚ್ಚಿನ ಅನೂಕೂಲವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

BIG NEWS: Goal to maintain pothole-free roads in Karnataka: Use of ready-mix material called Ecofix: Tri-party agreement signed!
Share. Facebook Twitter LinkedIn WhatsApp Email

Related Posts

ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಗರ್ಭಿಣಿ ಮಾಡಿ ವಂಚನೆ: ಪ್ರಿಯಕರನ ಮನೆ ಮುಂದೆ ಧರಣಿ ಕುಳಿತ ಮಹಿಳೆ

07/07/2025 8:29 PM1 Min Read

ರಾಜ್ಯದ ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಿ: ಸಿಇಒಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ

07/07/2025 8:00 PM2 Mins Read

ವೈದ್ಯಕೀಯ ಸೀಟು ಕುರಿತಂತೆ KEAಯಿಂದ ಮಹತ್ವದ ಮಾಹಿತಿ

07/07/2025 7:48 PM1 Min Read
Recent News

ವಿಷಕ್ಕೆ ಸಮಾನ.! ಈ ಸಮಸ್ಯೆ ಇರುವವರು ಮರೆತು ಕೂಡ ‘ಬೀಟ್ರೂಟ್’ ತಿನ್ನಬಾರದು.!

07/07/2025 10:09 PM

ನಿಮ್ಮ ಮಕ್ಕಳು ಊಟ ಮಾಡುವುಕ್ಕೆ ಹಟ ಮಾಡ್ತಿದ್ದಾರಾ.? ಈ ಬಾರಿ ಇದನ್ನ ಟ್ರೈ ಮಾಡಿ!

07/07/2025 9:42 PM

‘YouTube’ ಹೊಸ ರೂಲ್ಸ್ ; ಇನ್ಮುಂದೆ ‘AI- ರಚಿತ, ಪುನರಾವರ್ತಿತ ವಿಷಯ’ ಹಾಕಿದ್ರೆ ‘ಹಣ’ ಸಿಗೋದಿಲ್ಲ

07/07/2025 9:33 PM

‘ಭಾರತದ ಅಧ್ಯಕ್ಷತೆಯಲ್ಲಿ ಬ್ರಿಕ್ಸ್’ನ್ನ ಹೊಸ ರೂಪದಲ್ಲಿ ವ್ಯಾಖ್ಯಾನಿಸಲಾಗುವುದು’ : ಬ್ರೆಜಿಲ್ ಸಭೆಯಲ್ಲಿ ಪ್ರಧಾನಿ ಮೋದಿ

07/07/2025 8:56 PM
State News
KARNATAKA

ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಗರ್ಭಿಣಿ ಮಾಡಿ ವಂಚನೆ: ಪ್ರಿಯಕರನ ಮನೆ ಮುಂದೆ ಧರಣಿ ಕುಳಿತ ಮಹಿಳೆ

By kannadanewsnow0907/07/2025 8:29 PM KARNATAKA 1 Min Read

ಕೋಲಾರ: ವಿವಾಹಿತೆಯನ್ನು ಪ್ರೀತಿಸಿ ಮದುವೆ ಆಗುವುದಾಗಿ ನಂಬಿಸಿ ವಂಚನೆ ಮಾಡಿದ್ದಲ್ಲದೇ, ಗರ್ಭಿಣಿಯಾಗುತ್ತಿದ್ದಂತೆ ಮದುವೆಯಾಗಲು ನಿರಾಕರಿಸಿದಂತ ಪ್ರಿಯಕರನ ಮನೆ ಮುಂದೆ ಮಹಿಳೆ…

ರಾಜ್ಯದ ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಿ: ಸಿಇಒಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ

07/07/2025 8:00 PM

ವೈದ್ಯಕೀಯ ಸೀಟು ಕುರಿತಂತೆ KEAಯಿಂದ ಮಹತ್ವದ ಮಾಹಿತಿ

07/07/2025 7:48 PM

BREAKING: ರಾಜ್ಯದಲ್ಲಿನ ಎಲ್ಲ ಹಠಾತ್ ಸಾವುಗಳನ್ನು ಅಧಿಸೂಚಿತ ಖಾಯಿಲೆಯೆಂದು ಪರಿಗಣಿಸಲು ನಿರ್ಧಾರ: ಸಚಿವ ದಿನೇಶ್ ಗುಂಡೂರಾವ್

07/07/2025 7:37 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.