ಬೆಂಗಳೂರು: ಜಾತಿ ಗಣತಿ ಬಗ್ಗೆ ಅಂತಿಮ ತೀರ್ಮಾನಕ್ಕೆ ಬಾರದೇ ಕ್ಯಾಬಿನೆಟ್ ಸಭೆ ಕೊನೆಯಾಗಿದೆ ಎನ್ನುವ ಮಾಹಿತಿ ಪ್ರಾಥಮಿಕ ಮೂಲಗಳಿಂದ ತಿಳಿದು ಬಂದಿದೆ.
ಸಭೆಯಲ್ಲಿ ಸಿಎಂ ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಜಾತಿ ಗಣತಿ ಬಗ್ಗೆ ಲಿಖಿತ ರೂಪದಲ್ಲಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ ಅಂತ ಹೇಳಿದ್ದಾರ ಎನ್ನಲಾಗಿದೆ. ಇದರೊಂದಿಗೆ ಜಾತಿ ಗಣತಿ ಬಹಿರಂಗಗೊಳ್ಳುವ ಆಂತಕದಲ್ಲಿದ್ದವರಿಗೆ ನೆಮ್ಮದಿ ನೀಡಿದೆ. ಸಭೆಯಲ್ಲಿ ಒಕ್ಕಲಿಗ ಮತ್ತು ಲಿಂಗಾಯತ ಶಾಸಕರು ಮತ್ತು ಸಚಿವರು ಜಾತಿ ಗಣತಿ ಬಗ್ಗೆ ತೀವ್ರವಾದ ವಿರೋಧವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.