ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಎನ್ ಕೌಂಟರ್ ನಲ್ಲಿ ಬಲಿಯಾದ ರಿತೇಶ್ ಕುಮಾರ್ ಭಾವಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಬಾಲಕಿ ಹಂತಕ ರಿತೇಶ್ ಕುಮಾರ್ ಶವ ಹುಬ್ಬಳ್ಳಿಯಲ್ಲಿ ಅನಾಥವಾಗಿ ಬಿದ್ದಿದ್ದು, ಪೊಲೀಸರು ಹಂತಕನ ಗುರುತು ಪತ್ತೆಗೆ ಭಾವಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಕುಟುಂಬಸ್ಥರ ಪತ್ತೆಗೆ ಪೊಲೀಸರು ಭಾವಚಿತ್ರ ಪ್ರಕಟ ಮಾಡಿದ್ದಾರೆ.
ಹುಬ್ಬಳ್ಳಿಯ ಅಶೋಕ್ ನಗರ ಪೊಲೀಸರಿಂದ ಭಾವಚಿತ್ರ ಬಿಡುಗಡೆಯಾಗಿದ್ದು, ಗೋದಿ ಮೈಬಣ್ಣ, ತೆಳ್ಳನೆಯ ಮೈಕಟ್ಟು, ಕೋಲು ಮುಖ, 5.3 ಅಡಿ ಎತ್ತರ, ಅಗಲ ಹಣೆ ಹೊಂದಿದ್ದಾನೆ. ಈತನ ಬಲಗೈಯಲ್ಲಿ ಹಿಂದಿ ಅಕ್ಷರದಲ್ಲಿ ಒಂ ನಮಃ ಶಿವಾಯ ಜಯ ಸಂಜಯ ಎಂಬ ಟ್ಯಾಟೋ ಗುರುತು ಇದೆ. ಈತನ ಗುರುತು ಪರಿಚಯ ಇದ್ದವರು ಕೂಡಲೇ ಸಂಪರ್ಕಿಸಬಹುದು. 0836-2233490ಗೆ ಸಂಪರ್ಕಿಸಬಹುದು ಎಂದು ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ.