ಹುಬ್ಬಳ್ಳಿ: ರಾಜ್ಯದಲ್ಲೊಂದು ಹೃದಯ ವಿದ್ರಾವಕ ಘಟನೆ ಎನ್ನುವಂತೆ ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಿ ಕೊರತೆಯಿಂದ ಎರಡೂವರೆ ವರ್ಷದ ಮಗುವೊಂದು ಧಾರುಣವಾಗಿ ಸಾವನ್ನಪ್ಪಿರುವಂತ ಘಟನೆ ಕಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ಸಂಬಂಧ ಎರಡೂವರೆ ವರ್ಷದ ಮಗುವಿನ ಪೋಷಕರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಸಿಬ್ಬಂದಿ, ವೈದ್ಯರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ನಿನ್ನೆ ಕಿಮ್ಸ್ ಆಸ್ಪತ್ರೆಗೆ ಎರಡೂವರೆ ವರ್ಷದ ಮಗು ಸಾವನ್ನಪ್ಪಿದೆ. ಇದಕ್ಕೆ ಔಷಧ ಕೊರತೆಯೇ ಕಾರಣ ಎಂಬುದಾಗಿ ಗಂಭೀರ ಆರೋಪ ಮಾಡಿದ್ದಾರೆ.
ಪಿಟ್ಸ್ ಹಿನ್ನಲೆಯಲ್ಲಿ 16 ದಿನಗಳಿಂದ ಬಶೀರ್ ಅಹ್ಮದ್ ಬಳ್ಳಾರಿ ಹಾಗೂ ನಿಕ್ಕತ್ ಬಳ್ಳಾರಿ ದಂಪತಿಯ ಎರಡೂವರೆ ವರ್ಷದ ಮಗುವನ್ನು ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ನಿನ್ನೆ ಬೆಳಗ್ಗೆ ಮಗು ಆರೋಗ್ಯದಲ್ಲಿ ಚೇತರಿಕೆ ಆಗಿದೆ ಎಂಬುದಾಗಿ ವೈದ್ಯರು ತಿಳಿಸಿದ್ದರು. ಆದರೇ ರಾತ್ರಿ 9 ಗಂಟೆಗೆ ಮಗು ಮೃತಪಟ್ಟಿದೆ ಎಂಬುದಾಗಿ ಮಾಹಿತಿ ನೀಡಿದರು ಅಂತ ಪೋಷಕರು ಹೇಳಿದ್ದಾರೆ.
ನಾಲ್ಕು ದಿನಗಳಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಔಷಧಿಗಾಗಿ ಪರದಾಟ ಮಾಡಿದ್ದೇವೆ. ನೋ ಸ್ಟಾಕ್ ಅಂತ ಹೊರಗಡೆ ಸಿಬ್ಬಂದಿ ಔಷಧಿಗಳನ್ನು ಬರೆದುಕೊಡ್ತಿದ್ದರು. ಔಷಧಿ ಕೊರತೆಯಿಂದಲೇ ತಮ್ಮ ಮಗು ಸಾವನ್ನಪ್ಪಿರುವುದಾಗಿ ಮಗುವಿನ ಪೋಷಕರು ಕಿಮ್ಸ್ ಆಸ್ಪತ್ರೆ ಸಿಬ್ಬಂದಿ, ವೈದ್ಯರ ವಿರುದ್ಧ ಕಿಡಿಕಾರಿದ್ದಾರೆ.
ವಾರಾಂತ್ಯದಲ್ಲಿ UPI ಕೆಲವು ಗಂಟೆಗಳ ಕಾಲ ಸ್ಥಗಿತವೇಕೆ ಗೊತ್ತಾ? ಇಲ್ಲಿದೆ ಕಾರಣ