ದಾವಣಗೆರೆ : ಅನೈತಿಕ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಮುಸ್ಲಿಂ ಮಹಿಳೆ ಹಾಗೂ ಆಕೆಯ ಸಂಬಂಧಿಕರ ಮೇಲೆ ಹಲ್ಲೆ ನಡೆಸಲಾಗಿದೆ. ನಡು ರಸ್ತೆಯಲ್ಲಿಯೇ ಮಹಿಳೆಯ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆ ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ತಾವರೆಕೆರೆ ಗ್ರಾಮದಲ್ಲಿ ನಡೆದಿದೆ.
ತಾವರೆಕೆರೆ ಗ್ರಾಮದಲ್ಲಿ ಏಪ್ರಿಲ್ 9ರಂದು ಈ ಒಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ನಸ್ರೀನ್ ಬಾನು, ನಸ್ರಿನ್ ಮತ್ತು ಫಯಾಜ್ ಎನ್ನುವವರ ಮೇಲೆ ಹಲ್ಲೆ ನಡೆಸಲಾಗಿದೆ. ಮಹಿಳೆ ಮೇಲೆ ಹಗ್ಗ ಮತ್ತು ದೊಣ್ಣೆ ಕಬ್ಬಿಣದ ಪೈಪ್ ಗಳಿಂದ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಮೊಹಮ್ಮದ್ ಫಯಾಜ್ ಎನ್ನುವ ವ್ಯಕ್ತಿಯಿಂದ ಮಹಿಳೆಯ ಮೇಲೆ ಹಲ್ಲೆ ನಡೆದಿದೆ ಎಂದು ತಿಳಿದುಬಂದಿದೆ.
ವಿಡಿಯೋದ ಬಗ್ಗೆ ವ್ಯಾಪಕ ಆಕ್ರೋಶದ ನಂತರ, ಶಬೀನಾ ಅವರ ದೂರಿನ ಆಧಾರದ ಮೇಲೆ ಪೊಲೀಸರು ಮೊಹಮ್ಮದ್ ನಿಯಾಜ್, ಮೊಹಮ್ಮದ್ ಗೌಸ್ಪೀರ್, ಚಾಂದ್ ಬಾಷಾ, ಇನಾಯತ್ ಉಲ್ಲಾ, ದಸ್ತಗೀರ್ ಮತ್ತು ರಸೂಲ್ ಎಂಬ ಆರು ವ್ಯಕ್ತಿಗಳನ್ನು ಬಂಧಿಸಿದರು.