ಬೆಂಗಳೂರು: ನಗರದಲ್ಲಿ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿ, ಪರಾರಿಯಾಗಿದ್ದಂತ ಆರೋಪಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಸಂತೋಷ್ ಎಂಬುದಾಗಿ ಗುರುತಿಸಲಾಗಿದೆ.
ಏಪ್ರಿಲ್.3ರಂದು ಬೆಂಗಳೂರಿನ ಎಸ್ ಜಿ ಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮುಂಜಾನೆ ಯುವತಿಯ ಮೇಲೆ ಎರಗಿದ್ದಂತ ಕಾಮುಕ ಆರೋಪಿ ಸಂತೋಷ್, ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಿದ್ದನು.
ಕಳೆದ 10 ದಿನಗಳಿಂದ ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದರು. ಇಂದು ಕೇರಳದಲ್ಲಿ ಆರೋಪಿ ಸಂತೋಷ್ ನನ್ನು ಬಂಧಿಸಿರುವಂತ ಎಸ್ ಜಿ ಪಾಳ್ಯ ಪೊಲೀಸರು, ಬೆಂಗಳೂರಿಗೆ ಕರೆತರುತ್ತಿರುವುದಾಗಿ ತಿಳಿದು ಬಂದಿದೆ.
ಅಂದಹಾಗೇ ಏಪ್ರಿಲ್.3ರಂದು ತನ್ನ ಸ್ನೇಹಿತೆ ಜೊತೆಗೆ ಯುವತಿ ತೆರಳುತ್ತಿದ್ದಾಗ ಹಿಂದಿನಿಂದ ಬಂದು ಲೈಂಗಿಕ ದೌರ್ಜನ್ಯವನ್ನು ಎಸಗಿ ಆರೋಪಿ ಪರಾರಿಯಾಗಿದ್ದನು. ಸಂತ್ರಸ್ತೆ ಹಾಗೂ ಆರೋಪಿಗೂ ಯಾವುದೇ ಪರಿಚಯ ಇರಲಿಲ್ಲ. ಘಟನೆಯ ಬಳಿಕ ಬೆಂಗಳೂರು ನಗರ ತೊರೆದು ಪರಾರಿಯಾಗಿದ್ದನು.
ಈ ಘಟನೆಯ ಸಂಬಂಧ ಸ್ಥಳೀಯ ನಿವಾಸಿಯೊಬ್ಬರು ಎಸ್ ಜಿ ಪಾಳ್ಯ ಠಾಣೆಯ ಪೊಲೀಸರಿಗೆ ದೂರು ನೀಡಿದ್ದರು. ಈ ದೂರು ಆದರಿಸಿ ಡಿಸಿಪಿ ಸಾರಾ ಫಾತೀಮಾ ಅವರು ಎರಡು ವಿಶೇಷ ತಂಡ ರಚಿಸಿದ್ದರು. ಈ ತಂಡವು ಸುಮಾರು 1600ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿ, ಆರೋಪಿಯನ್ನು ಕೇರಳದಲ್ಲಿ ಬಂಧಿಸಿದೆ.
ಸೋದರಳಿಯ ಆಕಾಶ್ ಆನಂದ್ ಮರಳಿ ಬಿಎಸ್ಪಿ ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಂಡ ಮಾಯಾವತಿ
BIG NEWS: ಶಾಸಕ ಯತ್ನಾಳ್ ಮಾತನಾಡುತ್ತಿದ್ದ ವೇಳೆಯೇ ಮಚ್ಚು ಹಿಡಿದು ವೇದಿಕೆಗೆ ನುಗ್ಗಿದ ವ್ಯಕ್ತಿ: ಕೆಲಕಾಲ ಆತಂಕ