ಬಳ್ಳಾರಿ : ರಾತ್ರಿ ಮಲಗಿದ್ದ ವೇಳೆಯೇ ಹಾಲು ಕಚ್ಚಿ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ.
ಬಳ್ಳಾರಿಯ ಹೊಸ ಮೋಕಾದಲ್ಲಿ ಹಾವು ಕಚ್ಚಿ ಬಾಲಕಿ ಮಲಗಿದ್ದಲ್ಲೇ ಸಾವನ್ನಪ್ಪಿದ್ದಾಳೆ. 13 ವರ್ಷದ ಶ್ರಾವಣಿ ಮೃತ ವಿದ್ಯಾರ್ಥಿನಿ. ಬೆಳಿಗ್ಗೆ ಬಾಲಕಿ ಏಳದಿದ್ದಾಗ ಕುಟುಂಬದವರು ಗಮನಿಸಿದಾಗ ಬಾಲಕಿಗೆ ಮೂರು ಕಡೆಗಳಲ್ಲಿ ಹಾವು ಕಚ್ಚಿರುವುದು ಕಂಡುಬಂದಿದೆ.
ಬಾಲಕಿಯ ಕೈ, ಕಾಲುಗಳಿಗೆ ಮೂರು ಕಡೆ ಹಾವು ಕಡಿದಿದ್ದು, ವಿಷವೇರಿ ಬಾಲಕಿ ಮಲಗಿದ್ದಲ್ಲಿಯೇ ಸಾವನ್ನಪ್ಪಿದ್ದಾಳೆ.