ಬೆಂಗಳೂರು : ಬೆಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ನಡೆಸಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಶನಿವಾರ ಸಂಜೆ ಸುವರ್ಣ ಲೌಔಟ್ ಪಾರ್ಕ್ ನಲ್ಲಿ ನಡೆದಿದ್ದ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪೊಲೀಸರು ಮಹೀಮ್, ಆಫ್ರೀದಿ, ವಾಸಿಮ್, ಅಂಜುಮ್ ಎಂಬುವರನ್ನು ಬಂಧಿಸಿದ್ದಾರೆ.
ಶನಿವಾರ ಸಂಜೆ ಹಿಂದೂ ಯುವಕನ ಜೊತೆಗಿದ್ದ ಯುವತಿಯನ್ನು ನಿಲ್ಲಿಸಿ ಹಿಂದೂ ಯುವಕನ ಜೊತೆಗೆ ಯಾಕೆ ಕೂತಿದ್ಯಾ? ಎಂದು ಪ್ರಶ್ನಿಸಿ ಹಿಂದೂ ಯುವಕನ ಮೇಲೆ ಹಲ್ಲೆಗೆ ಮುಂದಾಗಿದ್ದರು. ನನ್ನ ಕ್ಲಾಸ್ಮೇಟ್ ಜೊತೆಗೆ ಮಾತನಾಡುತ್ತಿದ್ದೇನೆ ಎಂದು ಯುವತಿ ಹೇಳಿದರೂ ಕೇಳದೆ ಹಲ್ಲೆಗೆ ಯತ್ನಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಚಂದ್ರಾ ಲೇಔಟ್ ಠಾಣೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.