ಬೆಂಗಳೂರು: ಮಾಜಿ ಸಚಿವ ಬಿ.ನಾಗೇಂದ್ರಗೆ ಶಿಕ್ಷೆಯನ್ನು ಪ್ರಕಟಿಸಿ ಕೋರ್ಟ್ ಆದೇಶಿಸಿದೆ. ಬರೋಬ್ಬರಿ 1 ಕೋಟಿ 25 ಲಕ್ಷ ದಂಡವನ್ನು ವಿಧಿಸಿದೆ. ಈ ಮೂಲಕ ಮಾಜಿ ಸಚಿವ ಬಿ.ನಾಗೇಂದ್ರಗೆ ಬಿಗ್ ಶಾಕ್ ನೀಡಿದೆ.
ಮಾಜಿ ಸಚಿವ ಬಿ ನಾಗೇಂದ್ರಗೆ ಚೆಕ್ ಬೌನ್ಸ್ ಪ್ರಕರಣದಲ್ಲಿ ಕೋರ್ಟ್ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದೆ. 1 ಕೋಟಿ 25 ಲಕ್ಷ ದಂಡ ಪಾವತಿಸಲು ಮೂವರು ಆರೋಪಿಗಳಿಗೆ ಶಿಕ್ಷೆ ವಿಧಿಸಿದೆ.
ಇನ್ನೂ ದಂಡ ಪಾವತಿಸದೇ ಇದ್ದರೇ 1 ವರ್ಷ ಸೆರೆವಾಸ ಅನುಭವಿಸುವಂತೆ 42ನೇ ಎಸಿಜೆಎಂ ಕೋರ್ಟ್ ನ ನ್ಯಾಯಮೂರ್ತಿ ಶಿವಕುಮಾರ್ ಆದೇಶಿಸಿದ್ದಾರೆ.
ಅಂದಹಾಗೇ ವಿಎಸ್ ಎಲ್ ಸ್ಟೀಲ್ ಲಿಮಿಟೆಡ್ ಮಾಜಿ ಸಚಿವ ಬಿ ನಾಗೇಂದ್ರ ಸೇರಿದಂತೆ ಮೂವರ ವಿರುದ್ಧ ಚೆಕ್ ಬೌನ್ಸ್ ಕೇಸ್ ದಾಖಲಿಸಿತ್ತು. ಈ ಪ್ರಕರಣದಲ್ಲಿ ಇಂದು ಕೋರ್ಟ್ ತೀರ್ಪು ನೀಡಿದೆ.
ಜೆಡಿಎಸ್ ಪಕ್ಷದಿಂದ ‘ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ’ ಅಭಿಯಾನ: ನಿಖಿಲ್ ಕುಮಾರಸ್ವಾಮಿ
ALERT : ತಲೆಯ ಬಳಿ `ಮೊಬೈಲ್’ ಇಟ್ಟುಕೊಂಡು ಮಲಗುವವರೇ ತಪ್ಪದೇ ಇದನ್ನೊಮ್ಮೆ ಓದಿ.!