ಉತ್ತರ ಕನ್ನಡ: ಜಿಲ್ಲೆಯಲ್ಲಿನ 32 ಚಾರಣ ಪ್ರಿಯರಿಗೆ ಗುಡ್ ನ್ಯೂಸ್ ಎನ್ನುವಂತೆ ಚಾರಣಕ್ಕೆ ಅವಕಾಶ ನೀಡುವ ಸಂಬಂಧ ಚಾರಣ ಪಥವನ್ನು ಜಿಲ್ಲಾಡಳಿತ ಗುರುತಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವಂತ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ಅವರು, ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಸೇರಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಚಾರಣಕ್ಕೆ ಉತ್ತಮ ಎನಿಸುವ ಪ್ರದೇಶಗಳ ಬಗ್ಗೆ ಸರ್ವೆ ನಡೆಸಲಾಯಿತು. ಈ ಸರ್ವೆಯಲ್ಲಿ 32 ಚಾರಣ ಪಥಗಳನ್ನು ಗುರಿತಿಸಲಾಗಿದೆ ಎಂದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಚಾರಣಕ್ಕಾಗಿ ಗುರುತಿಸಿರುವಂತ 32 ಸ್ಥಳಗಳನ್ನು ಚಾರಣ ಪಥಗಳಾಗಿ ಅನುಮತಿಸಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಲ್ಲಿ ಮನವಿ ಮಾಡಲಾಗಿದೆ. ಅರಣ್ಯ ಇಲಾಖೆಯಿಂದ ಅನುಮತಿ ನೀಡಿದ ಬಳಿಕ 32 ಕಡೆ ಚಾರಣಕ್ಕೆ ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಅರಣ್ಯ ಸಂರಕ್ಷಣಾಧಿಕಾರಿಗಳು ಅನುಮತಿ ನೀಡಿದ ಬಳಿಕ ಉತ್ತರ ಕನ್ನಡ ಜಿಲ್ಲೆಯ 32 ಚಾರಣ ಪಥಗಳ ಬಗ್ಗೆ ವೆಬ್ ಸೈಟ್ ಹಾಗೂ ಪ್ರವಾಸೋದ್ಯ ಇಲಾಖೆಯ ಮೂಲಕ ಪ್ರಚಾರ ನೀಡಲಾಗುತ್ತದೆ. ಈ ಚಾರಣ ಸ್ಥಳಗಳನ್ನು ಅರಣ್ಯ ಇಲಾಖೆಯು ನಿರ್ವಹಿಸಲಿದೆ ಎಂದರು.