ಮಾಸ್ಕೋ: ಎರಡನೇ ಮಹಾಯುದ್ಧದಲ್ಲಿ ಜರ್ಮನಿಯ ವಿರುದ್ಧ ವಿಜಯ ಸಾಧಿಸಿದ 80ನೇ ವಾರ್ಷಿಕೋತ್ಸವದ ಅಂಗವಾಗಿ ಮೇ 9ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಷ್ಯಾ ಆಹ್ವಾನಿಸಿದೆ ಎಂದು ರಷ್ಯಾದ ಉಪ ವಿದೇಶಾಂಗ ಸಚಿವ ಆಂಡ್ರೆ ರುಡೆಂಕೊ ಹೇಳಿದ್ದಾರೆ.
ಮೇ 9 ರ ಮೆರವಣಿಗೆಯಲ್ಲಿ ಮಾಸ್ಕೋ ಭಾರತದ ಪ್ರಧಾನಿಯನ್ನು ನಿರೀಕ್ಷಿಸುತ್ತಿದೆ. ಆಹ್ವಾನವನ್ನು ಈಗಾಗಲೇ ಕಳುಹಿಸಲಾಗಿದೆ ಮತ್ತು ಭೇಟಿಯನ್ನು ರೂಪಿಸಲಾಗುತ್ತಿದೆ ಎಂದು ರಷ್ಯಾದ ಸುದ್ದಿ ಸಂಸ್ಥೆ ಟಾಸ್ ರುಡೆಂಕೊ ಅವರನ್ನು ಉಲ್ಲೇಖಿಸಿದೆ.