ಬೆಂಗಳೂರು : ಕರ್ನಾಟಕ ರಾಜ್ಯ ಫಾರ್ಮಸಿ ಪರಿಷತ್ತಿನ ಆಡಳಿತ ಮಂಡಳಿಯನ್ನು ರದ್ದುಗೊಳಿಸಿ, ಆಡಳಿತಾಧಿಕಾರಿಯನ್ನು ನೇಮಿಸುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಮೇಲೆ ಓದಲಾದ ಆಯುಕ್ತರ ಏಕ ಕಡತದಲ್ಲಿ, ಕರ್ನಾಟಕ ರಾಜ್ಯ ಫಾರ್ಮಸಿ ಪರಿಷತ್ತಿಗೆ ಸುಮಾರು 16 ವರ್ಷವಾದರೂ ಸಹ ಇದುವರೆಗೂ ಚುನಾವಣೆಯನ್ನು ನಡೆಸದೆ ಹಿಂದೆ ಚುನಾಯಿಸಲ್ಪಟ್ಟ 06 ಸದಸ್ಯರ ಪೈಕಿ ಇಬ್ಬರು ಸುಮಾರು 20 ವರ್ಷಗಳಿಂದ ಸದಸ್ಯರುಗಳಾಗಿ ಕಾರ್ಯ ನಿರ್ವಹಿಸುತ್ತಿದ್ದು ಅದೇ ರೀತಿ ಸರ್ಕಾರದಿಂದ ನಾಮನಿರ್ದೇಶನಗೊಂಡಿರುವ 05 ಜನ ಸದಸ್ಯರ ಅವಧಿ 2021ಕ್ಕೆ ಮುಗಿದಿದ್ದರೂ ಸಹ ಸರ್ಕಾರದ ಯಾವುದೇ ಆದೇಶವನ್ನು ಪಡೆಯದೇ ಅಧಿಕಾರದಲ್ಲಿ ಮುಂದುವರೆದಿರುತ್ತಾರೆ.
ಕರ್ನಾಟಕ ರಾಜ್ಯ ಫಾರ್ಮಸಿ ಪರಿಷತ್ತಿನ ವಿರುದ್ಧ ಹಲವಾರು Chemist & Druggist ಸಂಘಟನೆಗಳು ಹಾಗೂ ಕರ್ನಾಟಕ ರಾಜ್ಯ ಫಾರ್ಮಸಿ ಪರಿಷತ್ತಿನ ಸದಸ್ಯರಾದ ಸದರಿ ಪರಿಷತ್ತಿನ ಕಾರ್ಯವೈಖರಿ, ಕರ್ತವ್ಯ ಲೋಪ ಹಾಗೂ ಅಧಿಕಾರ ದುರ್ಬಳಕೆ ಕುರಿತು ದೂರುಗಳನ್ನು ಶ್ರೀ ನಾಗರಾಜು, ಎಂ.ಎಸ್, ರವರು ಸಹ ದಿನಾಂಕ: 03.03.2023ರಲ್ಲಿ ನೀಡಿದ್ದು, ಅವುಗಳಲ್ಲಿ ವುಮುಖವಾಗಿ ಸದರಿ ಪರಿಷತ್ತಿನ ರಿಜಿಸ್ಟ್ರಾರ್ ರವರ ಆಡಳಿತ ದೋಷಗಳು, ಏಕಪಕ್ಷೀಯ ನಿರ್ಧಾರಗಳು, ನೋಂದಣಿ ನವೀಕರಣ ಮಾಡುವಲ್ಲಿ ಫಾರ್ಮಸಿಸ್ಟಗಳಿಗೆ ನೀಡುತ್ತಿರುವ ಹಿಂಸೆ, ಕಿರುಕುಳಗಳನ್ನೊಳಗೊಂಡ ಅನೇಕ ದೂರು ಹಾಗೂ ಸರ್ಕಾರದ ಅನುಮತಿ ಇಲ್ಲದೆ ಪರಿಷತ್ತಿನ ಹಣವನ್ನು ಕಾನೂನು ಬಾಹಿರವಾಗಿ Mutual Fundsಗಳಲ್ಲಿ ಹೂಡಿರುವ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಯಾದ ಅಪರ ಔಷಧ ನಿಯಂತ್ರಕರ ರವರು ಸದರಿ ದೂರಿನ ಬಗ್ಗೆ ತನಿಖೆಯನ್ನು ಕೈಗೊಂಡು ರಿಜಿಸ್ಟ್ರಾರ್ ಮತ್ತು ಪರಿಷತ್ತಿನಲ್ಲಿ ಆಗಿರುವ ಅಧಿಕಾರ ದುರ್ಬಳಕೆಯ ಕುರಿತು ದಿನಾಂಕ:31.01.2024 ರಲ್ಲಿ ವರದಿಯನ್ನು ನೀಡಿರುತ್ತಾರೆ. ಸದರಿ ವರದಿಯನ್ನು ಔಷಧ : 22/34/3/2022-23 ໖: 14.03.20240 1 ಸರ್ಕಾರಕ್ಕೆ ತನಿಖಾ ವರದಿಯನ್ನು ಸಲ್ಲಿಸಿ ಸೂಕ್ತ ಕ್ರಮವನ್ನು ಕೈಗೊಳ್ಳಲು ಕೋರಿರುತ್ತಾರೆ.
ಸರ್ಕಾರದ ಆದೇಶ ಸಂಖ್ಯೆ:ಆಕುಕ 40 ಐಎಂಎಂ 2016, ಬೆಂಗಳೂರು ದಿನಾಂಕ: 28.01.2022ರಲ್ಲಿ ಸದರಿ ಪರಿಷತ್ತಿಗೆ 10 ಫಾರ್ಮಸಿ ಇನ್ಸಪೆಕ್ಟರ್‌ಗಳನ್ನು ಗುತ್ತಿಗೆ ಆಧಾರದ ಮೇರೆಗೆ 11 ತಿಂಗಳ ಅವಧಿಗೆ ನೇಮಿಸಿಕೊಳ್ಳಲು 15 ಷರತ್ತುಗಳನ್ನೊಳಗೊಂಡಂತೆ ಆದೇಶವನ್ನು ನೀಡಲಾಗಿತ್ತು. ಆದರೆ, ಸದರಿ ಪರಿಷತ್ತಿನ ಅಧ್ಯಕ್ಷರು ಅಥವಾ ರಿಜಿಸ್ಟ್ರಾರ್ ರವರು ಸರ್ಕಾರದ ಅಧಿಸೂಚನೆಯಲ್ಲಿ ತಿಳಿಸಿರುವ ಷರತ್ತು 04 ರಂತೆ ಔಷಧ ನಿಯಂತ್ರಕರವರಿಂದ ವೇತನ ನಿಗದಿಪಡಿಸಿಕೊಳ್ಳದೇ ಹಾಗೂ ಕ್ರ. ಸಂ. 08 & 09 ರಲ್ಲಿ ತಿಳಿಸಿದ ಮೀಸಲಾತಿಯನ್ನು ಸಹ ಪಾಲಿಸದೇ ಏಕಾಏಕಿ ತಮಗೆ ಬೇಕಾದ ರೀತಿಯಲ್ಲಿ ಫಾರ್ಮಸಿ ಇನಸ್ಪೆಕ್ಟರ್‌ಗಳನ್ನು ನೇಮಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ రిజినారా ಕಾರ್ಯನಿರ್ವಹಿಸುತ್ತಿರುವ ಡಾ|| ಕ್ರಾಂತಿ ಕುಮಾರ್ ಸಿರ್ಸೆರವರು ಸಹ ಸರ್ಕಾರದ ಅನುಮತಿ ಇಲ್ಲದೆ ನೇಮಕಗೊಂಡು ಕಾರ್ಯನಿರ್ವಹಿಸುತ್ತಿದ್ದಾರೆಂದು ಔಷಧ ನಿಯಂತ್ರಕರು ತಮ್ಮ ಪತ್ರ ಸಂಖ್ಯೆ: ಔನಿಇ/17/ಯೋಜನೆ/2022-23, ದಿನಾಂಕ:24.06.2024ರಲ್ಲಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿರುತ್ತಾರೆ.
ನೋಂದಾಯಿತ ಔಷಧ ತಜ್ಞರ ಪಟ್ಟಿ ತಯಾರಿಕೆ, ನಿರ್ವಹಣೆ ಹಾಗೂ ನೋಂದಾಯಿಸಲ್ಪಟ್ಟಿಲ್ಲದ ವ್ಯಕ್ತಿಗಳು ಔಷಧ ಸರಬರಾಜು ನಿರ್ವಹಣೆ ಮಾಡುವುದನ್ನು ತಡೆಗಟ್ಟುವುದು ರಾಜ್ಯ ಫಾರ್ಮಸಿ ಪರಿಷತ್ತಿನ ಕಾರ್ಯವಾಗಿದ್ದು, ಇದನ್ನು ನಿರ್ವಹಿಸಲು ಪರಿಷತ್ತಿನ ಮಂಡಳಿ ವಿಫಲವಾಗಿರುತ್ತದೆ ಹಾಗೂ ಸರ್ಕಾರದಿಂದ 26.10.2016, 23.05.2017, 19.06.2017 ಹಾಗೂ 02.09.2022 ಈ ದಿನಾಂಕಗಳಲ್ಲಿ ಹಲವಾರು ಅಧಿಕಾರಿಗಳನ್ನು ಸದರಿ ಪರಿಷತ್ತಿನ ಚುನಾವಣೆ ಪ್ರಕ್ರಿಯೆ ಕೈಗೊಳ್ಳಲು ಚುನಾವಣಾ ಅಧಿಕಾರಿಗಳನ್ನಾಗಿ ನೇಮಿಸಿದ್ದರೂ ಸಹ ಸದರಿ ಅಧಿಕಾರಿಗಳಿಗೆ ಸಮರ್ಪಕವಾದ ಮಾಹಿತಿ ಒದಗಿಸಿ ಚುನಾವಣೆ ನಡೆಸುವಲ್ಲಿ ಕರ್ನಾಟಕ ರಾಜ್ಯ ಫಾರ್ಮಸಿ ಪರಿಷತ್ತಿನ ಈಗಿರುವ ಆಡಳಿತ ಮಂಡಳಿಯ ಸದಸ್ಯರು ಸಂಪೂರ್ಣವಾಗಿ ವಿಫಲರಾಗಿರುತ್ತಾರೆ. ಆದ್ದರಿಂದ ಸರ್ಕಾರವು ಸದರಿ ಪರಿಷತ್ತಿಗೆ ಚುನಾವಣೆಯನ್ನು ನಡೆಸಿ ಹೊಸ ಆಡಳಿತ ಮಂಡಳಿಯನ್ನು ರಚಿಸಲು ಸಾಧ್ಯವಾಗಿರುವುದಿಲ್ಲ.
ಕರ್ನಾಟಕ ರಾಜ್ಯ ಫಾರ್ಮಸಿ ಪರಿಷತ್ತಿನ ಸದಸ್ಯರುಗಳು, ಕರ್ನಾಟಕ ರಾಜ್ಯ ಫಾರ್ಮಸಿ ಪರಿಷತ್ತಿನ ನಿಯಮಾವಳಿಗಳನ್ವಯ ನಿಗದಿತ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಉತ್ತಮವಾಗಿ ಹಾಗೂ ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ವಿಫಲರಾಗಿದ್ದು, ಇವರ ಈ ನಡತೆಯಿಂದಾಗಿ ಸಾರ್ವಜನಿಕರಲ್ಲಿ ಪರಿಷತ್ತಿನ ಸೇವೆಗಳ ಕುರಿತು ಸಾಕಷ್ಟು ಅಸಮಾಧಾನ ಹೊಂದಿ, ಸಂಸ್ಥೆಯ ಕುರಿತು ಸಾರ್ವಜನಿಕ ವಲಯದಲ್ಲಿ ಅನುಮಾನಾಸ್ಪದ ಭಾವನೆ ಮೂಡಲು ಕಾರಣಿಭೂತರಾಗಿರುತ್ತಾರೆ. ಆದ್ದರಿಂದ, ಫಾರ್ಮಸಿ ಕಾಯ್ದೆ, 1948 ರ ಅಧಿನಿಯಮ 19 ರ ಮೇರೆಗೆ ಕರ್ನಾಟಕ ಸರ್ಕಾರದಿಂದ ರಚಿಸಲಾದ ಕರ್ನಾಟಕ ರಾಜ್ಯ ಫಾರ್ಮಸಿ ಪರಿಷತ್ತಿನ ಆಡಳಿತ ಮಂಡಳಿಯ ಪ್ರಸ್ತುತ ಸದಸ್ಯರು ಕೈಗೊಳ್ಳುತ್ತಿರುವ ಆಡಳಿತಾತ್ಮಕ ಕಾರ್ಯಚಟುವಟಿಕೆಗಳನ್ನು ಚುನಾವಣೆ ಮುಗಿಯುವವರೆಗೆ ಸ್ಥಗಿತಗೊಳಿಸಿ, ಆಡಳಿತಾತ್ಮಕ ದೃಷ್ಟಿಯಿಂದ ಕರ್ನಾಟಕ ರಾಜ್ಯ ಫಾರ್ಮಸಿ ಪರಿಷತ್ತಿನ ಸುಗಮ ಕಾರ್ಯನಿರ್ವಹಣೆಗಾಗಿ ಪರಿಷತ್ತಿಗೆ ಚುನಾವಣೆ ನಡೆಸಿ ಹೊಸ ಸದಸ್ಯರು ನೇಮಕಗೊಳ್ಳುವವರೆಗೆ ಆಡಳಿತಾಧಿಕಾರಿಯನ್ನು ನೇಮಿಸುವಂತೆ ಸರ್ಕಾರಕ್ಕೆ ಆಯುಕ್ತರು ವರದಿಯನ್ನು ಸಲ್ಲಿಸಿರುತ್ತಾರೆ.
ಆಯುಕ್ತರು, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇವರ ಪ್ರಸ್ತಾವನೆಯನ್ನು ಕೂಲಂಕುಷವಾಗಿ ಪರಿಶೀಲಿಸಿದ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.