Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಹುಲ್ ಗಾಂಧಿ ನಮ್ಮ ನಾಯಕರು, ಅವರ ಭೇಟಿ ಹೊಸತಲ್ಲ: ಡಿಸಿಎಂ ಡಿ.ಕೆ ಶಿವಕುಮಾರ್

15/01/2026 2:59 PM

ಡಿಜಿಟಲ್ ಚಿನ್ನ vs ಭೌತಿಕ ಚಿನ್ನ: 2026ರಲ್ಲಿ ಯಾವುದು ಬೆಸ್ಟ್? ಇಲ್ಲಿದೆ ಮಾಹಿತಿ | Digital Gold

15/01/2026 2:53 PM

ಸಾಗರದ ‘ಚೋರಡಿ ಅರಣ್ಯಾಧಿಕಾರಿ’ಗಳ ಭರ್ಜರಿ ಕಾರ್ಯಾಚರಣೆ: ಅಕ್ರಮವಾಗಿ ಕಡಿತಲೆ ಮಾಡಿದ್ದ ‘ಸಾಗುವಾನಿ ಮರ’ ವಶಕ್ಕೆ

15/01/2026 2:22 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಓದುಗರೇ ಗಮನಿಸಿ: ಕಾರ್ಮಿಕ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳು ಹೀಗಿವೆ..!
KARNATAKA

ಓದುಗರೇ ಗಮನಿಸಿ: ಕಾರ್ಮಿಕ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳು ಹೀಗಿವೆ..!

By kannadanewsnow0709/04/2025 8:25 AM

ರಾಮನಗರ: ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ಪ್ರಾರಂಭಿಕವಾಗಿ 26 ವರ್ಗಗಳ ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸಲಾಗುತ್ತಿತ್ತು, ಪ್ರಸ್ತುತ ಹೊಸದಾಗಿ ಹಿಂದುಳಿದ ವರ್ಗಗಳ ಪ್ರವರ್ಗ- 1, 2ಎ, ಮತ್ತು 3ಬಿ ಗೆ ಸೇರಿದ ಪಾರಂಪರಿಕ ವೃತ್ತಿಯಲ್ಲಿ ತೊಡಗಿರುವ 38 ವರ್ಗಗಳು ಹಾಗೂ ಹಿಂದುಳಿದ ವರ್ಗಗಳ ಅಲೆಮಾರಿ ಹಾಗೂ ಅರೆಅಲೆಮಾರಿ ಪಂಗಡದ ಕುಲಕಸುಬಿನಲ್ಲಿ ತೊಡಗಿರುವ 27 ವರ್ಗಗಳ ಕಾರ್ಮಿಕರು ಸೇರಿದಂತೆ ಒಟ್ಟಾರೆ 91 ವರ್ಗಗಳ ಕಾರ್ಮಿಕರನ್ನು ಉಚಿತವಾಗಿ ನೋಂದಾಯಿಸಿ ಸೌಲಭ್ಯಗಳನ್ನೊಳಗೊಂಡ ಸ್ಮಾರ್ಟ್ಕಾರ್ಡ್ ನೀಡಲಾಗುತ್ತಿದೆ.

ಪ್ರಾರಂಭಿಕವಾಗಿ ಗುರುತಿಸಲಾದ 26 ವರ್ಗಗಳ ಅಸಂಘಟಿತ ಕಾರ್ಮಿಕರ ಪಟ್ಟಿ: ಹಮಾಲರು, ಟೈಲರ್‌ಗಳು, ಗೃಹ ಕಾರ್ಮಿಕರು, ಅಗಸರು, ಚಿಂದಿ ಆಯುವವರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು, ಭಟ್ಟಿ ಕಾರ್ಮಿಕರು, ಸಿನಿ ಕಾರ್ಮಿಕರು, ನೇಕಾರರು, ಬೀದಿಬದಿ ವ್ಯಾಪಾರಿಗಳು, ಹೋಟೆಲ್ ಕಾರ್ಮಿಕರು, ಫೋಟೋಗ್ರಾಫರ್‌ಗಳು, ಸ್ವತಂತ್ರ ಲೇಖನ ಬರಹಗಾರರು, ಬೀಡಿ ಕಾರ್ಮಿಕರು, ಅಸಂಘಟಿತ ವಿಕಲಚೇತನ ಕಾರ್ಮಿಕರು, ಅಲೆಮಾರಿ ಪಂಗಡದ ಕಾರ್ಮಿಕರು, ಹಗ್ಗ ಸಿದ್ದಪಡಿಸುವ (ಬೈಜಂತ್ರಿ) ಕಾರ್ಮಿಕರು, ಉಪ್ಪನ್ನು ತಯಾರಿಸುವ ಉಪ್ಪಾರರು, ಬಿದಿರು ವೃತ್ತಿಯಲ್ಲಿರುವ ಮೇದಾರರು, ಚಪ್ಪಲಿ ತಯಾರಿಕೆ ಮತ್ತು ರಿಪೇರಿ ಮಾಡುವ ಕಾರ್ಮಿಕರು, ಕೇಬಲ್ ಕಾರ್ಮಿಕರು, ಕಲ್ಯಾಣ ಮಂಟಪ/ ಸಬಾ ಭವನ/ ಟೆಂಟ್/ ಪೆಂಡಾಲ್‌ಗಳ ಕಾರ್ಮಿಕರು, ಗಾದಿ, ಹಾಸಿಗೆ ಮತ್ತು ದಿಂಬು ತಯಾರಿಕಾ ಕಾರ್ಮಿಕರು (ಪಿಂಜಾರರು/ ನದಾಫರು), ಹೊಸದಾಗಿ ಸೇರ್ಪಡೆ ಮಾಡಲಾಗಿರುವ 65 ಅಸಂಘಟಿತ ವರ್ಗಗಳು.

ಹಿಂದುಳಿದ ವರ್ಗಗಳ ಪ್ರವರ್ಗ-1,2ಎ,3ಎ, ಮತ್ತು 3ಬಿ ಗೆ ಸೇರಿದ ಪಾರಂಪರಿಕ ವೃತ್ತಿಯಲ್ಲಿ ತೊಡಗಿರುವ ಕಾರ್ಮಿಕರು: ಬಡಗಿ/ಮರದ ಕೆತ್ತನೆ ಕೆಲಸ, ಉಣ್ಣೆ ಮತ್ತು ಕಂಬಳಿ ನೇಯ್ಗೆ ಹಾಗೂ ಕಂಬಳಿ ತಯಾರಿಕೆ, ಅಡಿಕೆ ಹಾಳೆಯಿಂದ ತಟ್ಟೆ ತಯಾರಿಕೆ, ಸಿಲ್ಕ್ ರೀಲಿಂಗ್ ಮತ್ತು ಸಿಲ್ಕ್ ಟ್ವಿಸ್ಟಿಂಗ್ ಕೆಲಸ, ಪೊರಕೆ ಕಡ್ಡಿ ತಯಾರಿಕೆ, ಸುಣ್ಣ ಸುಡುವುದು, ವಾಲಗ ಊದುವುದು, ದನಗಾಹಿ ವೃತ್ತಿ, ಹೈನುಗಾರಿಕೆ (ಗೌಳಿ ವೃತ್ತಿ), ಬಳೆ ವ್ಯಾಪಾರ /ಮೇಣದ ಬತ್ತಿ ತಯಾರಿಕೆ, ಕಂಚು ಕೆಲಸ, ನಾರಿನಿಂದ ವಿವಿಧ ಉತ್ಪನ್ನ ತಯಾರಿಕೆ, ಬೆತ್ತದ ಕೆಲಸ (ರಟ್ಟನ್)ಆಟಿಕೆ/ ಗೊಂಬೆ ತಯಾರಿಕೆ ಮತ್ತು ಕೆತ್ತನೆ ಕೆಲಸ, ಚರ್ಮದ ವಸ್ತುಗಳ ತಯಾರಿಕೆ, ಅಗರಬತ್ತಿ ತಯಾರಿಕೆ, ಕಾಯರ್ ಫೈಬರ್ ತಯಾರಿಕೆ, ಸ್ಮಶಾನ ಕಾರ್ಮಿಕರು, ವಿಗ್ರಹ / ಕಲ್ಲು ಕೆತ್ತನೆ ಕೆಲಸ, ಮೀನುಗಾರಿಕೆ, ನಾಟಿ ಔಚಧಿ ತಯಾರಿಕೆ, ಬಣ್ಣ ಶೃಂಗಾರ (ಬ್ಯೂಟಿ ಪಾರ್ಲರ್)ಮಾಡುವ ವೃತ್ತಿ, ಶೀಟ್ ಮೆಟಲ್ ವೃತ್ತಿ, ಬೈಸಿಕಲ್ ರಿಪೇರಿ, ಬಣ್ಣಗಾರಿಕೆ, ಮುದ್ರಣಗಾರಿಕೆ ಮತ್ತು ಹಚ್ಚೆ ಹಾಕುವುದು, ಮ್ಯಾಟ್ ತಯಾರಿಕೆ, ಗಾಡಿ/ ರಥ ತಯಾರಿಕೆ, ಗ್ಲಾಸ್ ಬೀಡ್ಸ್ ತಯಾರಿಕೆ, ಮೆಟಲ್ ಕ್ರಾಫ್ಟ್, ಟಿನ್ ವಸ್ತುಗಳ ತಯಾರಿಕೆ, ಜೇನು ಸಾಕಾಣಿಕೆ, ನಿಟ್ಟಿಂಗ್ ಕೆಲಸ, ಗಾಣದ ಕೆಲಸ, ಮೆಷನರಿ ಕೆಲಸ, ಹೂವು ಕಟ್ಟುವ ವೃತ್ತಿ, ಹೊಸೈರಿ ವಸ್ತುಗಳ ತಯಾರಿಕೆ, ಪಾತ್ರೆಗಳಿಗೆ ಕಲಾಯಿ ಹಾಕುವುದು, ವಾದ್ಯವೃಂದ ವೃತ್ತಿ, ವೆಲ್ಡಿಂಗ್ ಕೆಲಸ, ಕುರಿ ಸಾಕಾಣಿಕೆ.

ಹಿಂದುಳಿದ ವರ್ಗಗಳ ಅಲೆಮಾರಿ ಹಾಗೂ ಅರೆ ಅಲೆಮಾರಿ ಪಂಗಡದ ಕುಲ ಕಸುಬಿನಲ್ಲಿ ತೊಡಗಿರುವ ಕಾರ್ಮಿಕರು: ಧಾರ್ಮಿಕ ಭಿಕ್ಷÄಕ ವೃತ್ತಿ, ಭವಿಷ್ಯ ನುಡಿಯುವುದು, ಲಾವಣಿ ಪದಗಳನ್ನು ಹಾಡುವುದು, ಹವಾಮಾನ ಪ್ರವಾದಿಗಳು, ಹಳ್ಳಿಗಾಡಿನ ಸಾಹಸ ಕಲೆಗಳ ಪ್ರದರ್ಶನ, ಗುಂಡು ಎಸೆಯುವುದು, ಲಾಗ ಹಾಕುವುದು, ಎತ್ತಿನ ಬಂಡಿ ತಿರುಗಿಸುವುದು ಇತರೆ ಕಸರತ್ತುಗಳ ವೃತ್ತಿ, ದೇವಸ್ಥಾನಗಳಲ್ಲಿ ನರ್ತಿಸುವುದು, ಭಿಕ್ಷಾಟನೆ, ಅಂಭಾದೇವಿಯ ಆರಾಧಕರು, ಗೋಂಧಳಿ ನೃತ್ಯ ಮಾಡುವುದು, ಜ್ಯೋತಿಷ್ಯ ಗಿಣಿ ಶಾಸ್ತç, ಹಸ್ತ ಮುದ್ರಿಕೆ ಶಾಸ್ತç, ಬುಡಬುಡಕಿ ಭವಿಷ್ಯ, ಕಣಿ ಹೇಳುವುದು, ದೇವರ ಕಥೆಗಳು ಹಾಗೂ ಪುರಾಣದ ಕಥೆಗಳನ್ನು ಹೇಳುವ ಹಾಗೂ ಬೊಂಬೆ ಪ್ರದರ್ಶನ, ಮದುವೆ ಮತ್ತು ಹಬ್ಬದ ದಿನಗಳಂದು ಡೋಲು ಬಡಿದು ಹಾಡು ಹೇಳುವುದು, ಅರಿಶಿಣ, ಕುಂಕುಮ ಮಾರಾಟ, ಮಸಾಲೆ ದಿನಸಿ ಮಾರಾಟ, ದೊಂಬರಾಟ, ವಿದೂಷಕ, ಮೋಡಿಗಾರರು, ಕಣ್ಣು ಕಟ್ಟು ವಿದ್ಯೆ, ಗೊಂದಲು ಹಾಕುವುದು (ಪೂಜಾ ವಿಧಾನ), ಗ್ರಾಮ ಚರಿತ್ರೆಗಳ ಪಾರುಪತ್ತೆಗಾರರು, ತಂಬೂರಿ ಮತ್ತು ಹಾರ್ಮೋನಿಯಂ ಸಹಾಯದಿಂದ ಪದಗಳನ್ನು ಕಟ್ಟಿ ಹಾಡುವುದು, ಬೊಂಬೆ, ಹೊದಿಕೆ, ಬಾಚಣಿಕೆ ತಯಾರಿಕೆ, ಹಚ್ಚೆ ಹಾಕುವುದು, ಎತ್ತನ್ನು ಹಿಡಿದುಕೊಂಡು ಊರಿಂದ ಊರಿಗೆ ಹೋಗಿ ಭಿಕ್ಷೆ ಬೇಡುವುದು, ಹಠಯೋಗ, ಧರ್ಮ ಪ್ರಚಾರ, ಕಾಲಭೈರವನ ಆರಾಧನೆ, ಕತ್ತಿ ತಯಾರಿಕೆ, ಔಷಧಿ ಮಾರಾಟಗಾರರು, ಭಿಕಾರಿ ವೈದ್ಯ ವೃತ್ತಿ, ಗಾರುಡಿಗರು, ಬೀಸುವ ಕಲ್ಲು ಮತ್ತು ಬೀಸಣಿಕೆ ಮಾರಾಟ, ಮರದ ಸೌಟುಗಳ ತಯಾರಿಕೆ, ಸೂಜಿ, ದಾರ, ಒಳಕಲ್ಲು ಮಾರಾಟ, ಡ್ರಂ ಬಾರಿಸುವುದು ಮತ್ತು ಕೊಳಲು ನುಡಿಸುವುದು, ಕಬ್ಬಿಣ, ತಾಮ್ರದ ತಂತಿಗಳನ್ನು ಉಪಯೋಗಿಸಿ ವಿಧವಿಧವಾದ ಬಳೆ ಮತ್ತು ಅಲಂಕಾರಿಕ ವಸ್ತುಗಳನ್ನು ತಯಾರಿಸುವುದು, ತೊಗಲು ಬೊಂಬೆ ಆಡಿಸುವುದು, ಮರಗವನ ಆಡಿಸುವುದು, ಊರೂರು ಅಲೆದು ಬಯಲಾಟಗಳ ಪ್ರದರ್ಶನ, ತಾಮ್ರ, ಬೆಳ್ಳಿ, ಕಲ್ಲು, ಹಿತ್ತಾಳೆಗಳಿಂದ ಆಭರಣಗಳನ್ನು ತಯಾರಿಸಿ ಮಾರಾಟ ಮಾಡುವುದು, ಅಲೆಮಾರಿ ಪಶುಪಾಲಕರು, ಕೋಳಿಮೊಟ್ಟೆ, ಮೀನು ಮಾರಾಟ ಮಾಡುವವರು.

ದೊರಕುವ ಸೌಲಭ್ಯಗಳು:

ಅಪಘಾತ ಪರಿಹಾರ ಸೌಲಭ್ಯ: ಅಪಘಾತದಿಂದ ಮರಣ ಹೊಂದಿದಲ್ಲಿ ಅವರ ನಾಮನಿರ್ದೇಶಿತರಿಗೆ ರೂ. 1 ಲಕ್ಷ ಪರಿಹಾರ. ಅಪಘಾತದಿಂದ ಸಂಪೂರ್ಣ/ ಭಾಗಶಃ ದುರ್ಬಲತೆ ಹೊಂದಿದಲ್ಲಿ ರೂ. 1 ಲಕ್ಷಗಳವರೆಗೆ ಪರಿಹಾರ. ಆಸ್ಪತ್ರೆ ವೆಚ್ಚ ಮರುಪಾವತಿ ರೂ.50,000/- ಗಳ ವರೆಗೆ( ಅಪಘಾತ ಪ್ರಕರಣಗಳಲ್ಲಿ ಮಾತ್ರ).

ಸಹಜ ಮರಣ ಪರಿಹಾರ ಮತ್ತು ಅಂತ್ಯಕ್ರಿಯೆ ವೆಚ್ಚ: ನೋಂದಾಯಿತ ಫಲಾನುಭವಿಯು ವಯೋಸಹಜ/ ಖಾಯಿಲೆ/ಅಕಾಲಿಕ ಅಥವಾ ಇನ್ನಿತರೆ ಕಾರಣಗಳಿಂದ ಮರಣ ಹೊಂದಿದಲ್ಲಿ ಫಲಾನುಭವಿಯ ಕುಟುಂಬದವರಿಗೆ ಅಂತ್ಯಕ್ರಿಯೆ ವೆಚ್ಚಕ್ಕಾಗಿ ರೂ.10,000/- ಗಳ ಧನಸಹಾಯ.

ನೋಂದಣಿಗೆ ಅರ್ಹತೆ: ಈ ಯೋಜನೆಯು ಕರ್ನಾಟಕ ರಾಜ್ಯದ ನಿವಾಸಿಗಳಿಗೆ ಮಾತ್ರ ಅನ್ವಯ. 18 ರಿಂದ 60 ವಯೋಮಾನದವರು. ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಇ.ಪಿ.ಎಫ್. ಹಾಗೂ ಇ.ಎಸ್.ಐ ಸೌಲಭ್ಯ ಹೊಂದಿರಬಾರದು.

ಅವಶ್ಯಕ ದಾಖಲೆಗಳು: ಪಾಸ್ ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ. ಆಧಾರ್ ಸಂಖ್ಯೆ, ಪಡಿತರ ಚೀಟಿ (ಲಭ್ಯವಿದ್ದಲ್ಲಿ) ಬ್ಯಾಂಕ್ ಪಾಸ್ ಪುಸ್ತಕ.

ಹೆಚ್ಚಿನ ಮಾಹಿತಿಗೆ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಚೇರಿ, ಕಂದಾಯ ಭವನ, ಅಥವಾ ತಾಲ್ಲೂಕು ಕಾರ್ಮಿಕ ನಿರೀಕ್ಷಕರ ಕಚೇರಿ, ರಾಮನಗರ ತಾಲ್ಲೂಕು, ಚನ್ನಪಟ್ಟಣ ತಾಲ್ಲೂಕು, ಕನಕಪುರ ತಾಲ್ಲೂಕು, ಮಾಗಡಿ ತಾಲ್ಲೂಕಿನಲ್ಲಿ ಸಂಪರ್ಕಿಸಿ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದಲ್ಲದೇ ರಾಜ್ಯದ ಜನತೆ ಆಯಾ ಕಾರ್ಮಿಕ ಅಧಿಕಾರಿಗಳ ಕಚೇರಿಗಳಿಗೆ ಭೇಟಿ ನೀಡಿ ಮಾಹಿತಿ ಇಲ್ಲವೇ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

Readers note: The facilities available in the Labour Department are as follows.
Share. Facebook Twitter LinkedIn WhatsApp Email

Related Posts

ರಾಹುಲ್ ಗಾಂಧಿ ನಮ್ಮ ನಾಯಕರು, ಅವರ ಭೇಟಿ ಹೊಸತಲ್ಲ: ಡಿಸಿಎಂ ಡಿ.ಕೆ ಶಿವಕುಮಾರ್

15/01/2026 2:59 PM1 Min Read

ಸಾಗರದ ‘ಚೋರಡಿ ಅರಣ್ಯಾಧಿಕಾರಿ’ಗಳ ಭರ್ಜರಿ ಕಾರ್ಯಾಚರಣೆ: ಅಕ್ರಮವಾಗಿ ಕಡಿತಲೆ ಮಾಡಿದ್ದ ‘ಸಾಗುವಾನಿ ಮರ’ ವಶಕ್ಕೆ

15/01/2026 2:22 PM1 Min Read

ಸ್ಪರ್ಶ್ ಆಸ್ಪತ್ರೆಯಲ್ಲಿ ಕಿಡ್ನಿ ಕಸಿಗೆ ರೊಬೋಟಿಕ್‌ ಶಸ್ತ್ರಚಿಕಿತ್ಸೆ: 75 ವರ್ಷದ ತಾಯಿಯಿಂದ ಮಗನಿಗೆ ಮರುಜೀವ

15/01/2026 2:18 PM2 Mins Read
Recent News

ರಾಹುಲ್ ಗಾಂಧಿ ನಮ್ಮ ನಾಯಕರು, ಅವರ ಭೇಟಿ ಹೊಸತಲ್ಲ: ಡಿಸಿಎಂ ಡಿ.ಕೆ ಶಿವಕುಮಾರ್

15/01/2026 2:59 PM

ಡಿಜಿಟಲ್ ಚಿನ್ನ vs ಭೌತಿಕ ಚಿನ್ನ: 2026ರಲ್ಲಿ ಯಾವುದು ಬೆಸ್ಟ್? ಇಲ್ಲಿದೆ ಮಾಹಿತಿ | Digital Gold

15/01/2026 2:53 PM

ಸಾಗರದ ‘ಚೋರಡಿ ಅರಣ್ಯಾಧಿಕಾರಿ’ಗಳ ಭರ್ಜರಿ ಕಾರ್ಯಾಚರಣೆ: ಅಕ್ರಮವಾಗಿ ಕಡಿತಲೆ ಮಾಡಿದ್ದ ‘ಸಾಗುವಾನಿ ಮರ’ ವಶಕ್ಕೆ

15/01/2026 2:22 PM

ಸ್ಪರ್ಶ್ ಆಸ್ಪತ್ರೆಯಲ್ಲಿ ಕಿಡ್ನಿ ಕಸಿಗೆ ರೊಬೋಟಿಕ್‌ ಶಸ್ತ್ರಚಿಕಿತ್ಸೆ: 75 ವರ್ಷದ ತಾಯಿಯಿಂದ ಮಗನಿಗೆ ಮರುಜೀವ

15/01/2026 2:18 PM
State News
KARNATAKA

ರಾಹುಲ್ ಗಾಂಧಿ ನಮ್ಮ ನಾಯಕರು, ಅವರ ಭೇಟಿ ಹೊಸತಲ್ಲ: ಡಿಸಿಎಂ ಡಿ.ಕೆ ಶಿವಕುಮಾರ್

By kannadanewsnow0915/01/2026 2:59 PM KARNATAKA 1 Min Read

ಬೆಂಗಳೂರು : “ರಾಹುಲ್ ಗಾಂಧಿ ಅವರನ್ನು ನಾನು ಭೇಟಿ ಮಾಡುವುದು ಹೊಸತೇನಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಸದಾಶಿವನಗರ…

ಸಾಗರದ ‘ಚೋರಡಿ ಅರಣ್ಯಾಧಿಕಾರಿ’ಗಳ ಭರ್ಜರಿ ಕಾರ್ಯಾಚರಣೆ: ಅಕ್ರಮವಾಗಿ ಕಡಿತಲೆ ಮಾಡಿದ್ದ ‘ಸಾಗುವಾನಿ ಮರ’ ವಶಕ್ಕೆ

15/01/2026 2:22 PM

ಸ್ಪರ್ಶ್ ಆಸ್ಪತ್ರೆಯಲ್ಲಿ ಕಿಡ್ನಿ ಕಸಿಗೆ ರೊಬೋಟಿಕ್‌ ಶಸ್ತ್ರಚಿಕಿತ್ಸೆ: 75 ವರ್ಷದ ತಾಯಿಯಿಂದ ಮಗನಿಗೆ ಮರುಜೀವ

15/01/2026 2:18 PM

BREAKING : ಹೈಕಮಾಂಡ್ ಮನಸ್ಸು ಮಾಡಿದರೆ ಮಲ್ಲಿಕಾರ್ಜುನ ಖರ್ಗೆ ‘CM’ ಆಗಬಹುದು : ಕೆ.ಹೆಚ್ ಮುನಿಯಪ್ಪ

15/01/2026 1:53 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.