ಬೆಂಗಳೂರು: ನಗರದಲ್ಲಿ ಚಿನ್ನಾಭರಣ, ಬೆಳ್ಳಿಯ ವಸ್ತು, ಕಾರು ಹಾಗೂ ದ್ವಿ-ಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳ ಬಂಧಿಸಲಾಗಿದೆ. ಬಂಧಿತ ಆರೋಪಿಗಳಿಂದ 25 ಗ್ರಾಂ ಚಿನ್ನಾಭರಣ, 124 ಗ್ರಾಂ ಬೆಳ್ಳಿಯ ವಸ್ತುಗಳು, 3 ಕಾರುಗಳು, 6 ದ್ವಿ-ಚಕ್ರ ವಾಹನಗಳು ಹಾಗೂ 6000/-ನಗದು ವಶ, ಒಟ್ಟು ಮೌಲ್ಯ 34.27 ಲಕ್ಷ ಆಗಿದೆ.
ಎಸ್.ಜೆ ಪಾರ್ಕ್ ಪೊಲೀಸ್ ಠಾಣಾ ಸರಹದ್ದಿನ, ಎಸ್.ಜೆ.ಪಿ ರಸ್ತೆಯ ಶಾಂತಪ್ಪ ಲೇನ್‌ನಲ್ಲಿ ಪಿರಾದುದಾರರು ಹಾರ್ಡ್‌ವೇರ್ ಅಂಗಡಿಯೊಂದನ್ನು ಇಟ್ಟುಕೊಂಡಿದ್ದರು. ಪಿರಾದುದಾರರು ದಿನಾಂಕ:11/03/2025 ರಂದು ಎಸ್.ಜೆ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರಾದುದಾರರು ದಿನಾಂಕ:10/03/2025 ರಂದು ರಾತ್ರಿ ಅಂಗಡಿಗೆ ಬೀಗ ಹಾಕಿಕೊಂಡು ಮನೆಗೆ ಹೋಗಿರುತ್ತಾರೆ. ಮಾರನೇಯ ದಿನ, ದಿನಾಂಕ:11/03/2025 ರಂದು ಬೆಳಿಗ್ಗೆ ಬಂದು ನೋಡಲಾಗಿ ಅಂಗಡಿಯ ಬಾಗಿಲ ಬೀಗ ಮುರಿದಿರುವುದು ಕಂಡು ಬಂದಿರುತ್ತದೆ. ಅಂಗಡಿಯ ಒಳಗೆ ಹೋಗಿ ನೋಡಲಾಗಿ, ವ್ಯಾಪಾರ ಮಾಡಿ ಡ್ರಾಯರ್‌ನಲ್ಲಿಟ್ಟಿದ್ದ 7000/-ನಗದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಎಸ್.ಜೆ.ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ಬಾತ್ಮೀದಾರರಿಂದ ಖಚಿತ ಮಾಹಿತಿಯನ್ನು ಕಲೆಹಾಕಿ, ದಿನಾಂಕ:26/03/2025 ರಂದು ಮಾಗಡಿ ರಸ್ತೆಯ ಹೆರೋಹಳ್ಳಿ ಕ್ರಾಸ್ ಬಳಿ ಇರುವ ಲಾರಿ ಸ್ಟ್ಯಾಂಡ್ ಬಳಿ ಇಬ್ಬರೂ ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು.
ವಶಕ್ಕೆ ಪಡೆದ ವ್ಯಕ್ತಿಗಳನ್ನು ವಿಚಾರಣೆ ಮಾಡಲಾಗಿ, ಈ ಪ್ರಕರಣದಲ್ಲಿ ಕನ್ನ ಕಳವು ಮಾಡಿರುವುದಾಗಿ ತಪ್ಪಿಪ್ಪಿಕೊಂಡಿರುತ್ತಾರೆ. ಹಾಗೂ ರಾಜ್ಯದ ವಿವಿಧ ಕಡೆಗಳಲ್ಲಿ ಕಾರು, ದ್ವಿ-ಚಕ್ರ ವಾಹನ, ಚಿನ್ನ ಮತ್ತು ಬೆಳ್ಳಿಯ ವಸ್ತುಗಳನ್ನು ಕಳವು ಮಾಡಿರುವುದಾಗಿ ತಿಳಿಸಿರುತ್ತಾರೆ. ಆರೋಪಿಗಳಿಬ್ಬರ ವಶದಲ್ಲಿದ್ದ 25 ಗ್ರಾಂ ಚಿನ್ನಾಭರಣ, 124 ಗ್ರಾಂ ಬೆಳ್ಳಿಯ ವಸ್ತುಗಳು ಮತ್ತು ಒಂದು ದ್ವಿ- ಚಕ್ರ ವಾಹನವನ್ನು ಹಾಗೂ ಕೆ 6000/- ನಗದನ್ನು ವಶಪಡಿಸಿಕೊಳ್ಳಲಾಯಿತು.
ದಿನಾಂಕ:27/03/2025 ರಂದು ಆರೋಪಿಗಳಿಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, 5 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.
ಪೊಲೀಸ್ ಅಭಿರಕ್ಷೆಗೆ ಪಡೆದ ಆರೋಪಿಗಳಿಬ್ಬರನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಲಾಗಿ, ರಾಜ್ಯದ ವಿವಿಧ ಕಡೆಗಳಲ್ಲಿ ಕಳವು ಮಾಡಿದ ದ್ವಿ-ಚಕ್ರ ವಾಹನ ಹಾಗೂ ಕಾರುಗಳ ಪೈಕಿ ಕಲಾಸಿಪಾಳ್ಯ 1ನೇ ಕ್ರಾಸ್‌ನ ಮೋರಿ ಪಕ್ಕದಲ್ಲಿ ನಿಲ್ಲಿಸಿದ್ದ 01 ಕಾರು, ಆಂಧ್ರಹಳ್ಳಿ ಪೈಪ್‌ಲೇನ್ ಬ್ರಿಡ್ಜ್ ಬಳಿ ನಿಲ್ಲಿಸಿದ್ದ 02 ಕಾರುಗಳು ಮತ್ತು 1 ದ್ವಿ-ಚಕ್ರ ವಾಹನ, ವಿಲ್ಸನ್‌ಗಾರ್ಡ್‌ನ ನಾಲಾ ರಸ್ತೆಯಲ್ಲಿರುವ ಮೋರಿ ಪಕ್ಕದಲ್ಲಿ ನಿಲ್ಲಿಸಿದ್ದ 03 ದ್ವಿ-ಚಕ್ರ ವಾಹನಗಳು, ಎಸ್.ಜೆ.ಪಾರ್ಕ್ ಪಕ್ಕದ ದ್ವಿ-ಚಕ್ರ ವಾಹನ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ 01 ದ್ವಿ-ಚಕ್ರ ವಾಹನಗಳನ್ನು ದಿನಾಂಕ-29/03/2025 ರಂದು ವಶಪಡಿಸಿಕೊಳ್ಳಲಾಗಿರುತ್ತದೆ.
ಈ ಪ್ರಕರಣದ ಆರೋಪಿಗಳಿಬ್ಬರ ವಶದಿಂದ ಒಟ್ಟಾರೆ 3 ಕಾರುಗಳು, 6 ದ್ವಿ-ಚಕ್ರ ವಾಹನಗಳು, 25ಗ್ರಾಂ ಚಿನ್ನಾಭರಣ, 124ಗ್ರಾಂ ಬೆಳ್ಳಿಯ ವಸ್ತುಗಳು ಮತ್ತು 6000/- ನಗದನ್ನು ವಶಪಡಿಸಿಕೊಳ್ಳಲಾಯಿತು. ಇವುಗಳ ಒಟ್ಟು ಮೌಲ್ಯ * 34,27,733/-(ಮೂವತ್ನಾಲ್ಕು ಲಕ್ಷದ ಇಪ್ಪತ್ತೇಳು ಸಾವಿರದ ಏಳುನೂರ ಮೂವತ್ತಮೂರು ರೂಪಾಯಿಗಳು).
ಈ ಪ್ರಕರಣದ ಆರೋಪಿತರ ಬಂಧನದಿಂದ 01) ಬ್ಯಾಡರಹಳ್ಳಿಯ ಪೊಲೀಸ್ ಠಾಣೆಯ-02 ದ್ವಿ-ಚಕ್ರ ವಾಹನ ಕಳವು ಪ್ರಕರಣಗಳು, 02) ನಂದಿನಿ ಲೇಔಟ್ ಪೊಲೀಸ್ ಠಾಣೆಯ-01 ದ್ವಿ-ಚಕ್ರ ವಾಹನ ಕಳವು ಪ್ರಕರಣ, 03) ರಾಮಮೂರ್ತಿನಗರ ಪೊಲೀಸ್ ಠಾಣೆಯ 2 ಕಾರು ಕಳವು ಪ್ರಕರಣ, 04) ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ-01 ದ್ವಿ-ಚಕ್ರ ವಾಹನ ಕಳುವು ಪ್ರಕರಣ, 05) ತುಮಕೂರು ಜಿಲ್ಲೆ ಪೊಲೀಸ್ ಠಾಣೆಯ-2 ದ್ವಿ-ಚಕ್ರ ವಾಹನ, ಕಳವು ಪ್ರಕರಣಗಳು ಮತ್ತು ನಗದು ಹಣ ಕಳವು ಪ್ರಕರಣ, 06) ಗೌರಿಬಿದನೂರು ಪೊಲೀಸ್ ಠಾಣೆಯ-ಚಿನ್ನ-ಬೆಳ್ಳಿ ಮತ್ತು ನಗದು ಹಣ ಕಳವು ಪ್ರಕರಣ, 07) ಕೋಲಾರ ಜಿಲ್ಲೆ ಪೊಲೀಸ್ ಠಾಣೆಯ-2 ಕಾರು ಕಳುವು ಪ್ರಕರಣಗಳು ಸೇರಿದಂತೆ ಒಟ್ಟು-06 ದ್ವಿ-ಚಕ್ರ ವಾಹನಗಳನ್ನು, 03 ಕಾರುಗಳನ್ನು, 25ಗ್ರಾಂ ಚಿನ್ನದ ಒಡವೆಗಳನ್ನು ಮತ್ತು 124 ಗ್ರಾಂ ಬೆಳ್ಳಿಯ ವಸ್ತುಗಳನ್ನು ಹಾಗೂ * 6000/- ನಗದು ಹಣದ ಪ್ರಕರಣಗಳು ಸೇರಿದಂತೆ ಒಟ್ಟು 11 ಪ್ರಕರಣಗಳು ಪತ್ತೆಯಾಗಿರುತ್ತವೆ.
ದಿನಾಂಕ:01/04/2025 ರಂದು ಆರೋಪಿಗಳಿಬ್ಬರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗಳಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಸಿರುತ್ತೆ.
ಈ ಕಾರ್ಯಾಚರಣೆಯನ್ನು ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತರವರಾದ ಶೇಖರ್ ಹೆಚ್ ಟೆಕ್ಕಣ್ಣನವರ್ ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ಹಾಗೂ ಹಲಸೂರು ಗೇಟ್ ಉಪ ವಿಭಾಗದ ಎ.ಸಿ.ಪಿ ರವರಾದ ಶಿವಾನಂದ ಚಲವಾದಿ ರವರ ಉಸ್ತುವಾರಿಯಲ್ಲಿ ಎಸ್.ಜೆ ಪಾರ್ಕ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಗುರುಪ್ರಸಾದ್.ಎನ್ ಹಾಗೂ ಇತರೆ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
BREAKING: ಉತ್ತರ ಕನ್ನಡದಲ್ಲಿ ಮನೆಯೊಂದರಲ್ಲಿ 14 ಕೋಟಿ ನಕಲಿ ನೋಟು ಪತ್ತೆ
BIG NEWS: ರಾಜ್ಯದಲ್ಲಿ ಮಾರಾಟವಾಗುತ್ತಿರುವ ‘ಔಷಧಿಗಳ ಗುಣಮಟ್ಟ’ದ ಬಗ್ಗೆ ‘ಆರೋಗ್ಯ ಇಲಾಖೆ’ ಶಾಕಿಂಗ್ ಮಾಹಿತಿ ಬಿಡುಗಡೆ