ಬೆಂಗಳೂರು: ರಾಜ್ಯದಲ್ಲಿ ಸಿಗುವಂತ ಕೆಲ ಅಂಗಡಿಗಳಲ್ಲಿನ ಕರಿದ ಹಸಿರು ಬಟಾಣಿ, ತುಪ್ಪ, ಖೋವಾ, ಪನ್ನೀರ್, ಸಿಹಿತಿಂಡಿ ಹಾಗೂ ಖಾರ ಮಿಕ್ಸರ್ ಗಳು ಅಸುರಕ್ಷಿತವಾಗಿದ್ದಾವೆ. ಅವು ತಿನ್ನೋದಕ್ಕೆ ಸುರಕ್ಷಿತವಲ್ಲ. ಆರೋಗ್ಯದ ಮೇಲೆ ಪರಿಣಾಮ ಬೀರುವಂತ ರಾಸಾಯನಿಕ ಅಂಶ ಪತ್ತೆಯಾಗಿದೆ ಎಂಬುದಾಗಿ ಆಹಾರ ಸುರಕ್ಷತೆ ಮತ್ತು ಔಷಧಿ ಆಡಳಿತ ಇಲಾಖೆಯು ಮಾಹಿತಿ ನೀಡಿದೆ.
ಈ ಬಗ್ಗೆ ಮಾಹಿತಿ ನೀಡಿದ್ದು, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಹಾರ ಸುರಕ್ಷತಾ ವಿಭಾಗದ ವತಿಯಿಂದ ಫೆಬ್ರವರಿ ಮತ್ತು ಮಾರ್ಚ್ 2025ರ ಮಾಹೆಗಳಲ್ಲಿ ಈ ಕೆಳಕಂಡ ಕ್ರಮಗಳನ್ನು ವಹಿಸಲಾಗಿರುತ್ತದೆ ಎಂದಿದೆ.
ಫೆಬ್ರವರಿ 2025ರ ಮಾಹೆಯಲ್ಲಿ ಒಟ್ಟಾರೆ 3698 ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಲಾಗಿರುತ್ತದೆ.
ವಿಶೇಷ ಅಭಿಯಾನದ ಮೂಲಕ ಕುಡಿಯುವ ನೀರಿನ ಬಾಟಲ್‌ಗಳಲ್ಲಿನ ನೀರಿನ 296 ಮಾದರಿಗಳನ್ನು ವಿಶ್ಲೇಷಣೆಗಾಗಿ ಸಂಗ್ರಹಿಸಿದ್ದು, ಅವುಗಳಲ್ಲಿ 255 ಮಾದರಿಗಳ ವಿಶ್ಲೇಷಣಾ ಕಾರ್ಯ ಪೂರ್ಣಗೊಂಡಿದ್ದು, 72 ಮಾದರಿಗಳು ಸುರಕ್ಷಿತ ಎಂದು, 95 ಮಾದರಿಗಳು ಅಸುರಕ್ಷಿತ ಎಂದು ಹಾಗೂ 88 ಮಾದರಿಗಳು ಕಳಪೆ ಗುಣಮಟ್ಟದ್ದು ಎಂದು ವರದಿಯಾಗಿರುತ್ತವೆ. ಉಳಿದ ಮಾದರಿಗಳ ವಿಶ್ಲೇಷಣಾ ಕಾರ್ಯವು ಪ್ರಗತಿಯಲ್ಲಿರುತ್ತದೆ.
ಕರಿದ ಹಸಿರು ಬಟಾಣಿಗಳಲ್ಲಿ ಕೃತಕ ಬಣ್ಣಗಳ ಬಳಕೆಯ ಬಗ್ಗೆ ಖಚಿತಪಡಿಸಿಕೊಳ್ಳಲು 115 ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಸಲ್ಲಿಸಿದ್ದು, 46 ಮಾದರಿಗಳು ಸುರಕ್ಷಿತ ಎಂದು, 69 ಮಾದರಿಗಳು ಅಸುರಕ್ಷಿತ ಎಂದು ವರದಿಯಾಗಿರುತ್ತವೆ. ಉಳಿದ ಮಾದರಿಗಳ ವಿಶ್ಲೇಷಣಾ ಕಾರ್ಯವು ಪ್ರಗತಿಯಲ್ಲಿರುತ್ತದೆ.
ಮಾರ್ಚ್ 2025ರ ಮಾಹೆಯಲ್ಲಿ ಒಟ್ಟಾರೆ 3204 ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಲಾಗಿರುತ್ತದೆ.
ತುಪ್ಪಗಳ 49 ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಸಲ್ಲಿಸಿದ್ದು, ಅವುಗಳಲ್ಲಿ 6 ಮಾದರಿಗಳ ವಿಶ್ಲೇಷಣಾ ಕಾರ್ಯ ಪೂರ್ಣಗೊಂಡಿದ್ದು, ಎಲ್ಲಾ ಮಾದರಿಗಳು ಸುರಕ್ಷಿತ ಎಂದು ವರದಿಯಾಗಿರುತ್ತವೆ. ಉಳಿದ ಮಾದರಿಗಳ ವಿಶ್ಲೇಷಣಾ ಕಾರ್ಯವು ಪ್ರಗತಿಯಲ್ಲಿರುತ್ತದೆ.
ಖೋವಾಗಳ 43 ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಸಲ್ಲಿಸಿದ್ದು, ಅವುಗಳಲ್ಲಿ 09 ಮಾದರಿಗಳ ವಿಶ್ಲೇಷಣಾ ಕಾರ್ಯ ಪೂರ್ಣಗೊಂಡಿದ್ದು, 03 ಮಾದರಿಗಳು ಕಳಪೆ ಗುಣಮಟ್ಟದ್ದು ಎಂದು, 06 ಮಾದರಿಗಳು ಸುರಕ್ಷಿತ ಎಂದು ವರದಿಯಾಗಿರುತ್ತವೆ. ಉಳಿದ ಮಾದರಿಗಳ ವಿಶ್ಲೇಷಣಾ ಕಾರ್ಯವು ಪ್ರಗತಿಯಲ್ಲಿರುತ್ತದೆ.
ಪನ್ನೀರ್‌ಗಳ 231 ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಸಲ್ಲಿಸಿದ್ದು, ಅವುಗಳಲ್ಲಿ 32 ಮಾದರಿಗಳ ವಿಶ್ಲೇಷಣಾ ಕಾರ್ಯ ಪೂರ್ಣಗೊಂಡಿದ್ದು, 02 ಮಾದರಿಗಳು ಅಸುರಕ್ಷಿತ ಎಂದು, 30 ಮಾದರಿಗಳು ಸುರಕ್ಷಿತ ಎಂದು ವರದಿಯಾಗಿರುತ್ತವೆ. ಉಳಿದ ಮಾದರಿಗಳ ವಿಶ್ಲೇಷಣಾ ಕಾರ್ಯವು ಪ್ರಗತಿಯಲ್ಲಿರುತ್ತದೆ.
ಸಿಹಿತಿಂಡಿಗಳ 198 ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಸಲ್ಲಿಸಿದ್ದು, ಅವುಗಳಲ್ಲಿ 83 ಮಾದರಿಗಳ ವಿಶ್ಲೇಷಣಾ ಕಾರ್ಯ ಪೂರ್ಣಗೊಂಡಿದ್ದು, 02 ಮಾದರಿಗಳು ಅಸುರಕ್ಷಿತ ಎಂದು, 81 ಮಾದರಿಗಳು ಸುರಕ್ಷಿತ ಎಂದು ವರದಿಯಾಗಿರುತ್ತವೆ. ಉಳಿದ ಮಾದರಿಗಳ ವಿಶ್ಲೇಷಣಾ ಕಾರ್ಯವು ಪ್ರಗತಿಯಲ್ಲಿರುತ್ತದೆ.
ಖಾರ ಮಿಕ್ಚರ್ ಗಳ 119 ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಸಲ್ಲಿಸಿದ್ದು, ಅವುಗಳಲ್ಲಿ 27 ಮಾದರಿಗಳ ವಿಶ್ಲೇಷಣಾ ಕಾರ್ಯ ಪೂರ್ಣಗೊಂಡಿದ್ದು, 04 ಮಾದರಿಗಳು ಅಸುರಕ್ಷಿತ ಎಂದು, 23 ಮಾದರಿಗಳು ಸುರಕ್ಷಿತ ಎಂದು ವರದಿಯಾಗಿರುತ್ತವೆ. ಉಳಿದ ಮಾದರಿಗಳ ವಿಶ್ಲೇಷಣಾ ಕಾರ್ಯವು ಪ್ರಗತಿಯಲ್ಲಿರುತ್ತದೆ.
ಸ್ಥಳೀಯವಾಗಿ ತಯಾರಿಸಲ್ಪಡುವ ಜ್ಯೂಸ್/ಪಾನೀಯಗಳ 46 ಮಾದರಿಗಳನ್ನು, ಐಸ್ ಕ್ಯಾಂಡಿಗಳ 39 ಮಾದರಿಗಳನ್ನು ಮತ್ತು ಐಸ್ ಕ್ರೀಂಗಳ 107 ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಸಲ್ಲಿಸಲಾಗಿದ್ದು, ಇನ್ನೂ ಹೆಚ್ಚಿನ ಮಾದರಿಗಳ ಸಂಗ್ರಹಣಾ ಮತ್ತು ವಿಶ್ಲೇಷಣಾ ಕಾರ್ಯವು ಪ್ರಗತಿಯಲ್ಲಿರುತ್ತದೆ. ಅಲ್ಲದೆ ಸದರಿ ಆಹಾರ ಪದಾರ್ಥಗಳ ತಯಾರಿಕಾ/ಮಾರಾಟ ಘಟಕಗಳಿಗೆ ಪರಿಶೀಲನಾ ಭೇಟಿ ನೀಡಿ ಲೋಪಗಳು ಕಂಡುಬಂದ 92 ಘಟಕಗಳಿಗೆ ನೋಟಿಸ್ ಅನ್ನು ಜಾರಿಗೊಳಿಸಲಾಗಿದ್ದು, 06 ಘಟಕಗಳಿಗೆ ರೂ.38,000/-ಗಳ ದಂಡ ವಿಧಿಸಲಾಗಿರುತ್ತದೆ.
ಇದಲ್ಲದೆ ಹೋಟೆಲ್‌ಗಳು/ರೆಸ್ಟೋರೆಂಟ್‌ಗಳಲ್ಲಿ ಜಿರಲೆ/ಇಲಿಗಳು ಸೇರಿದಂತೆ ಕ್ರಿಮಿ ಕೀಟಗಳ ನಿಯಂತ್ರಣಕ್ಕೆ ವಹಿಸಲಾಗಿರುವ ಕ್ರಮಗಳ ಕುರಿತಂತೆ 590 ಹೋಟೆಲ್‌ಗಳು/ ರೆಸ್ಟೋರೆಂಟ್‌ಗಳಿಗೆ ಪರಿಶೀಲನಾ ಭೇಟಿ ನೀಡಿದ್ದು, ನಿಯಂತ್ರಣಾ ಕ್ರಮಗಳನ್ನು ವಹಿಸದ 214 ಹೋಟೆಲ್‌ಗಳು/ ರೆಸ್ಟೋರೆಂಟ್‌ಗಳಿಗೆ ನೋಟಿಸ್ ಅನ್ನು ಜಾರಿಗೊಳಿಸಲಾಗಿದ್ದು, 11 ಹೋಟೆಲ್‌ಗಳು/ ರೆಸ್ಟೋರೆಂಟ್‌ಗಳಿಗೆ ರೂ.1,15,000/-ಗಳ ದಂಡ ವಿಧಿಸಲಾಗಿರುತ್ತದೆ.
ಆಹಾರ ಮಾದರಿಗಳ ವಿಶ್ಲೇಷಣಾ ಫಲಿತಾಂಶಗಳನ್ವಯ ಮುಂದಿನ ಕಾನೂನಾತ್ಮಕ ಕ್ರಮಗಳನ್ನು ಜರುಗಿಸಲಾಗುವುದು ಎಂಬುದಾಗಿ ತಿಳಿಸಿದೆ.
BIG NEWS: ರಾಜ್ಯದ ಜನತೆಗೆ ಶಾಕಿಂಗ್ ನ್ಯೂಸ್: ಇನ್ಮುಂದೆ ‘ವಿಧಾನಸೌಧ’ ವೀಕ್ಷಣೆಗೂ ತೆರಬೇಕು ಶುಲ್ಕ
BIG NEWS: ರಾಜ್ಯದಲ್ಲಿ ಮಾರಾಟವಾಗುತ್ತಿರುವ ‘ಔಷಧಿಗಳ ಗುಣಮಟ್ಟ’ದ ಬಗ್ಗೆ ‘ಆರೋಗ್ಯ ಇಲಾಖೆ’ ಶಾಕಿಂಗ್ ಮಾಹಿತಿ ಬಿಡುಗಡೆ