ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ಕೆಲ ಪ್ರದೇಶಗಳಲ್ಲಿ ತುರ್ತು ವಿದ್ಯುತ್ ನಿರ್ವಹಣಾ ಕಾಮಗಾರಿಯ ಹಿನ್ನಲೆಯಲ್ಲಿ, ನಾಳೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಈ ಬಗ್ಗೆ ಶಿವಮೊಗ್ಗ ಜಿಲ್ಲೆಯ ಸಾಗರದ ಮೆಸ್ಕಾಂ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ದಿನಾಂಕ 08-04-2025ರಂದು ಸಾಗರ ನಗರ ಉಪ ವಿಭಾಗದ ಘಟಕ-1ರಲ್ಲಿ ತುರ್ತು ವಿದ್ಯುತ್ ನಿರ್ವಹಣಾ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಈ ಕೆಳಗಿನ ಸಾಗರ ತಾಲ್ಲೂಕಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದಿದೆ.
ನಾಳೆ ಸಾಗರ ತಾಲ್ಲೂಕಿನ ಈ ಏರಿಯಾಗಳಲ್ಲಿ ಕರೆಂಟ್ ಇರಲ್ಲ
ನಾಳೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಬಸವನಹೊಳೆ, ಜಂಬಗಾರು, ಶಿವಮೊಗ್ಗ ರಸ್ತೆ, ಹೆಚ್.ಕೆ ಹೆಚ್ ಲೇಔಟ್, ತ್ಯಾಗರ್ತಿ ಕ್ರಾಸ್ ನಲ್ಲಿ ಪವರ್ ಕಟ್ ಆಗಲಿದೆ.
ಇದಲ್ಲದೇ ಜಂಬಗಾರು ಮಹಿಳಾ ಹಾಸ್ಟೆಲ್ ಬಳಿ ಮತ್ತು ಜಂಬಗಾರು ಆಶ್ರಯ ಲೇಔಟ್ ಹತ್ತಿರದ ಸುತ್ತಮುತ್ತಲ ಪ್ರದೇಶಗಳಲ್ಲಿ ಕರೆಂಟ್ ಇರೋದಿಲ್ಲ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಮನವಿ ಮಾಡಿದೆ.
ವರದಿ: ವಸಂತ ಬಿ ಈಶ್ವರಗೆರೆ
ಶೀಘ್ರವೇ ಸಾಗರೋತ್ತರ ಉದ್ಯೋಗ ಮೇಳ ಆಯೋಜನೆ: ಸಚಿವ ಡಾ.ಶರಣಪ್ರಕಾಶ ಪಾಟೀಲ್
BREAKING: ನಾಳೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1ರ ಫಲಿತಾಂಶ ಪ್ರಕಟ: ರಿಸಲ್ಟ್ ಈ ರೀತಿ ಚೆಕ್ ಮಾಡಿ
BIG NEWS: ರಾಜ್ಯದ 208 ಪ್ರಾಥಮಿಕ ಶಾಲೆಗಳಲ್ಲಿ ‘ಆಂಗ್ಲ ಮಾಧ್ಯಮ’ ತರಗತಿ ಆರಂಭ: ರಾಜ್ಯ ಸರ್ಕಾರ ಅಧಿಕೃತ ಆದೇಶ.!