ಹಾಸನ: ಕಚ್ಚಿದ ಹಾವನ್ನೇ ಕೈಯಲ್ಲಿ ಹಿಡಿದು ಯುವಕನೊಬ್ಬ ಕುಳಿತು ರಂಪಾಟ ಮಾಡಿದಂತ ಘಟನೆ ಹಾಸನದ ಬಿಎಂ ರಸ್ತೆಯಲ್ಲಿ ನಡೆದಿದೆ. ಯುವಕನನ್ನು ಕಚ್ಚಿದಂತ ಕೊಳಕ ಮಂಡಲ ಹಾವು, ಕಚ್ಚಿದ ಬಳಿಕ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ಹಾಸನದ ಬಿಎಂ ರಸ್ತೆಯಲ್ಲಿ ಯುವಕನೊಬ್ಬನಿಗೆ ಕೊಳಕ ಮಂಡಲ ಹಾವು ಕಚ್ಚಿದ್ದರಿಂದ ಅದನ್ನೇ ಕೈಯಲ್ಲಿ ಹಿಡಿದು ಖಾಸಗಿ ಬ್ಯಾಂಕ್ ಮುಂದೆ ಕುಳಿತಿದ್ದಾನೆ. ಆಸ್ಪತ್ರೆಗೆ ಹೋಗು ಅಂತ ಸಾರ್ವಜನಿಕರು ಬುದ್ಧಿ ಹೇಳಿದರೂ ಹೋಗದೇ ರಂಪಾಟ ಮೆರೆದಿದ್ದಾನೆ.
ಕಚ್ಚಿದ ಹಾವನ್ನೇ ಗಟ್ಟಿಯಾಗಿ ಹಿಡಿದು ಕುಳಿತ ಕಾರಣ, ಯುವಕನ ಕೈಯಲ್ಲೇ ಹಾವು ಕೂಡ ಪ್ರಾಣ ಬಿಟ್ಟಿದೆ. ಈ ಮೂಲಕ ಹಾಸನದ ಬಿಎಂ ರಸ್ತೆಯ ಖಾಸಗಿ ಬ್ಯಾಂಕ್ ಮುಂದೆ ಶಾಕಿಂಗ್ ಎನ್ನುವಂತ ಘಟನೆ ನಡೆದಿದೆ.
ಹಜ್ 2025: ಭಾರತ ಸೇರಿದಂತೆ 13 ದೇಶಗಳ ವೀಸಾಗಳನ್ನು ತಾತ್ಕಾಲಿಕವಾಗಿ ಸೌದಿ ಅರೇಬಿಯಾ ನಿಷೇಧಿಸಿದ್ದೇಕೆ? | Hajj 2025
BIG NEWS : ‘ಗೃಹಲಕ್ಷ್ಮಿ’ ಯೋಜನೆ ಕುರಿತು ಮಹತ್ವದ ಪ್ರಕಟಣೆ ಹೊರಡಿಸಿದ ರಾಜ್ಯ ಸರ್ಕಾರ