ಬೆಂಗಳೂರು: ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಬರೋಬ್ಬರಿ 30 ಕೋಟಿ ಹವಾಲಾ ಹಣವನ್ನು ದುಬೈಗೆ ರವಾನಿ, ಅದರಲ್ಲಿ 49.6 ಕೆಜಿ ಚಿನ್ನವನ್ನು ಖರೀದಿಸಿದ್ದಾಗೆ ಕೋರ್ಟ್ ಗೆ ಡಿಆರ್ ಐ ಅಧಿಕಾರಿಗಳು ತನಿಖಾ ವರದಿಯನ್ನು ಸಲ್ಲಿಸಿದ್ದಾರೆ.
ನಟಿ ರನ್ಯಾ ರಾವ್ ಅವರು ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ಜೈಲುಪಾಲಾಗಿದ್ದಾರೆ. ಅವರ ವಿರುದ್ಧದ ಪ್ರಕರಣದ ತನಿಖೆ ನಡೆಸುತ್ತಿರುವಂತ ಡಿ ಆರ್ ಐ ತನ್ನ ವರದಿಯನ್ನು ಕೋರ್ಟ್ ಗೆ ಸಲ್ಲಿಸಿದೆ. ಡಿ ಆರ್ ಐ ಸಲ್ಲಿಸಿದಂತ ವರದಿಯಲ್ಲಿ ಶಾಕಿಂಗ್ ಮಾಹಿತಿಯನ್ನು ಬಿಚ್ಚಿಡಲಾಗಿದೆ.
ಕಳೆದ ಮೂರು ತಿಂಗಳಿನಿಂದ ದುಬೈನಿಂದ ನಟಿ ರನ್ಯಾ ರಾವ್ ಅವರು 49.6 ಕೆಜಿ ಚಿನ್ನವನ್ನು ಖರೀದಿಸಿದ್ದಾರೆ. ಅದು 30 ಕೋಟಿ ಹವಾಲ ಹಣದ ಮೂಲಕವಾಗಿದೆ. ದುಬೈಗೆ ಹವಾಲಾ ಹಣ ಕಳುಹಿಸಿರುವಂತ ನಟಿ ರನ್ಯಾ ರಾವ್ ಅವರು, ಅದರಿಂದಲೇ 49.6 ಕೆಜಿ ಚಿನ್ನ ಖರೀದಿಸಿದ್ದಾಗಿ ವರದಿಯನ್ನು ಸಲ್ಲಿಸಿದೆ.
ಭಾರತ ಸೇರಿದಂತೆ ವಿವಿಡೆ ಅಕ್ರಮವಾಗಿ ದುಬೈನಿಂದ ತಂದಿದ್ದಂತ ಚಿನ್ನವನ್ನು ನಟಿ ರನ್ಯಾ ರಾವ್ ವಿವಿಧ ಏಜೆಂಟರುಗಳ ಮೂಲಕ ಮಾರಾಟ ಮಾಡಿದ್ದಾರೆ. ಅವರಲ್ಲಿ ಬಂಧಿತ ಪ್ರಮುಖ ಎ3 ಆರೋಪಿ ಸಾಹಿಲ್ ಜೈನ್ ಕೂಡ ಒಬ್ಬನಾಗಿದ್ದಾನೆ.
ಆರೋಪಿ ಸಾಹಿಲ್ ಜೈನ್ ಬಂಧಿಸಿರುವಂತ ಡಿ ಆರ್ ಐ ಅಧಿಕಾರಿಗಳು, ವಿಚಾರಣೆಗೆ ಒಳಪಡಿಸಿದಾಗ ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಇಂಚಿಂಚೂ ಮಾಹಿತಿ ಬಹಿರಂಗಗೊಂಡಿದೆ.
ನವೆಂಬರ್ ನಿಂದ ಬರೋಬ್ಬರಿ 49.6 ಕೆಜಿ ಚಿನ್ನವನ್ನು ದುಬೈನಿಂದ ಅಕ್ರಮವಾಗಿ ನಟಿ ರನ್ಯಾ ರಾವ್ ಭಾರತಕ್ಕೆ ಸಾಗಿಸಿದ್ದಾರೆ. ಇದರಲ್ಲಿ ಕೇವಲ ಡಿ ಆರ್ ಐ ಅಧಿಕಾರಿಗಳಿಗೆ ಸಿಕ್ಕಿರೋದು 14 ಕೆಜಿ ಮಾತ್ರವೇ ಎಂಬುದಾಗಿ ತಿಳಿದು ಬಂದಿದೆ.
ಕ್ರಿಕೆಟಿಗ ಮೊಹಮ್ಮದ್ ಶಮಿ ಸಹೋದರಿ ಮತ್ತು ಇತರ ಸಂಬಂಧಿಕರು MNREGA ವಂಚನೆಯಲ್ಲಿ ಭಾಗಿ: ತನಿಖಾ ವರದಿ
BREAKING : ರಾಜ್ಯಸಭೆಯಲ್ಲೂ ಮಹತ್ವದ `ವಕ್ಫ್ ತಿದ್ದುಪಡಿ’ ಮಸೂದೆ ಅಂಗೀಕಾರ | Waqf Amendment Bill 2025