ಬೆಂಗಳೂರು : ರಾಜ್ಯ ಸರ್ಕಾರವು ಹೈಸ್ಪೀಡ್ ಡೀಸೆಲ್ ದರ ಹೆಚ್ಚಳ ಮಾಡಿದ್ದು, ಇಂದು ಮಧ್ಯರಾತ್ರಿಯಿಂದಲೇ ನೂತನ ದರ ಅನ್ವಯವಾಗಲಿದೆ.
ಹೌದು, ರಾಜ್ಯ ಸರ್ಕಾರವು ಹೈಸ್ಪೀಡ್ ಡೀಸೆಲ್ ದರ ಹೆಚ್ಚಳ ಮಾಡಲು ನಿರ್ಧರಿಸಿದ್ದು, ಹೈಸ್ಪೀಡ್ ಡೀಸೆಲ್ ದರ 2-3 ರೂ. ಹೆಚ್ಚಳವಾಗುವ ಸಾಧ್ಯತೆ ಇದೆ. ಹೈಸ್ಪೀಡ್ ಡೀಸೆಲ್ ಮೇಲೆ 2.73% ರಷ್ಟು ತೆರಿಗೆ ಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸದ್ಯ ಬೆಂಗಳೂರಿನಲ್ಲಿ 88.99 ರೂ.ಗೆ ಹೈಸ್ಪೀಡ್ ಡೀಸೆಲ್ ಮಾರಾಟವಾಗುತ್ತಿದೆ. ಈ ಹಿಂದೆ 18.44% ಇದ್ದ ತೆರಿಗೆ ಸದ್ಯ 21.17% ಕ್ಕೆ ಏರಿಕೆ ಮಾಡಲಾಗಿದೆ.
ಹೈಸ್ಪೀಡ್ ಡೀಸೆಲ್ ದರವನ್ನು ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ತರಲಾಗುತ್ತಿದೆ. ಈ ಮೂಲಕ ರಾಜ್ಯದ ಜನತೆಗೆ ಸರ್ಕಾರವು ಮತ್ತೊಂದು ಶಾಕ್ ನೀಡಿದೆ.
ದಿನಾಂಕ: 31-03-2025 ರಂತೆ ಪ್ರತಿ ಲೀಟರಿಗೆ ಡೀಸೆಲ್ ಮಾರಾಟ ದರವು ನೆರೆಯ ರಾಜ್ಯಗಳಲ್ಲಿ ಈ ಕೆಳಕಂಡಂತೆ ಇರುತ್ತದೆ ಎಂದು ತಿಳಿಸಿದೆ.
ಬೆಂಗಳೂರು – ರೂ.89.02
ಹೊಸೂರು (ತಮಿಳುನಾಡು)- ರೂ. 94.42
ಕಾಸರಗೋಡು (ಕೇರಳ)- ರೂ.95.66
ಅನಂತಪುರ (ಆಂಧ್ರಪ್ರದೇಶ)- ರೂ.97.35
ಹೈದರಾಬಾದ್’ (ತೆಲಂಗಾಣ) – ರೂ.95.70
ಕಾಗಲ್ (ಮಹಾರಾಷ್ಟ್ರ) – ರೂ.91.07
ಸಕ್ಷಮ ಪ್ರಾಧಿಕಾರದ ಅನುಮೋದನೆಯ ನಂತರ ಡೀಸೆಲ್ ಮೇಲೆ ವಿಧಿಸಲಾಗುತ್ತಿರುವ ಕರ್ನಾಟಕ ಮಾರಾಟ ತೆರಿಗೆ ದರವನ್ನು ದಿನಾಂಕ: 01-04-2025 ರಿಂದ ಜಾರಿಗೆ ಬರುವಂತೆ ಶೇ 21.17ಕ್ಕೆ ಏರಿಸಲಾಗಿದೆ. ಇದರಿಂದಾಗಿ ಪ್ರತಿ ಲೀಟರಿಗೆ ರೂ 2ರಷ್ಟು ಏರಿಕೆಯಾಗಿ, ಮಾರಾಟ ದರವು ರೂ. 91.02 ಆಗುತ್ತದೆ. ಆದರೂ ಸಹ ರಾಜ್ಯದಲ್ಲಿನ ಪರಿಷ್ಕೃತ ಮಾರಾಟ ದರವು, ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆ ಇರುತ್ತದೆ ಎಂಬುದಾಗಿ ತಿಳಿಸಿದೆ.