ಹಾವೇರಿ: ಬ್ಯಾಂಕಾಕ್ ಗೆ ಪ್ರವಾಸಕ್ಕೆ ತೆರಳಿದ್ದಂತ ಹಾವೇರಿಯ ಐವರು ಕನ್ನಡಿಗರು ಸುರಕ್ಷಿತರಾಗಿರುವುದಾಗಿ ವೀಡಿಯೋ ಕರೆ ಮಾಡಿ ಸ್ಪಷ್ಟ ಪಡಿಸಿದ್ದಾರೆ. ಈ ಮೂಲಕ ಬೆಂಗಳೂರಿನಿಂದ ತೆರಳಿದ್ದಂತ 22 ಮಂದಿಯೂ ಸುರಕ್ಷಿತರಾಗಿದ್ದಾರೆ.
ಇಂದು ಮ್ಯಾನ್ಮಾರ್ ಹಾಗೂ ಬ್ಯಾಂಕಾಕ್ ನಲ್ಲಿ ಪ್ರಬಲ ಭೂಕಂಪನ ಉಂಟಾಗಿತ್ತು. 7.7ರ ತೀವ್ರತೆಯಲ್ಲಿ ಭೂಕಂಪ ಉಂಟಾಗಿತ್ತು. ಈ ಭೂಕಂಪನದಿಂದಾಗಿ ಹಲವು ಬಹುಮಹಡಿ ಕಟ್ಟಡಗಳು ಕ್ಷಣಾರ್ಧದಲ್ಲಿ ನೆಲಸಮಗೊಂಡಿದ್ದಾವೆ. ಈ ಎಲ್ಲಾ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬ್ಯಾಂಕಾಕ್ ಗೆ ಐದು ದಿನಗಳ ಪ್ರವಾಸಕ್ಕೆಂದು 22 ಮಂದಿ ಬೆಂಗಳೂರಿನಿಂದ ತೆರಳಿದ್ದರು. ಇವತ್ತು ಸಫಾರಿ ವರ್ಡ್ ಗೆ ಹೋಗಿದ್ದಂತ ಸಂದರ್ಭದಲ್ಲಿ ಭೂಕಂಪನದ ಅನುಭವ ಉಂಟಾಗಿತ್ತು. ಬಳಿಕ ಸುವರ್ಣ ಭೂಮಿ ಏರ್ ಪೋರ್ಟ್ ಗೆ ಸುರಕ್ಷಿತವಾಗಿ ಕನ್ನಡಿಗರು ತೆರಳಇದ್ದರು.
ಇದೀಗ ಬ್ಯಾಂಕಾಕ್ ನಲ್ಲಿ ಎಲ್ಲರೂ ಸುರಕ್ಷಿತವಾಗಿದ್ದೇವೆ. ವಿಮಾನ ಬಿಡುವ ವೇಳೆಯಲ್ಲಿ ವ್ಯತ್ಯಾಯಸವಾಗಿದೆ ಎಂಬುದಾಗಿ ವಿಮಾನ ನಿಲ್ದಾಣದಿಂದಲೇ ವೀಡಿಯೋ ಮಾಡಿ ಐವರು ಕನ್ನಡಿಗರು ಸ್ಪಷ್ಟ ಪಡಿಸಿದ್ದಾರೆ.
BREAKING: ಮಚ್ಚು ಹಿಡಿದು ರೀಲ್ಸ್ ಕೇಸ್: ವಿನಯ್, ರಜತ್ ಗೆ ಜಾಮೀನು ಮಂಜೂರು