ಶಿವಮೊಗ್ಗ: ನಾನು ರೈತ ವಿರೋಧಿ ಅಂತ ಹೇಳಿದ್ದಾರೆ. ಒಬ್ಬನೇ ಒಬ್ಬ ರೈತ ನನ್ನು ಕಡೆಗೆ ಬೊಟ್ಟು ಮಾಡಿ ತೋರಿಸಲಿ. ನಾನು ಒಂದೇ ಮನೆಯಲ್ಲಿ ಎರಡು ಬೋರು ಇರೋರು ಕನೆಕ್ಷನ್ ಕಟ್ ಮಾಡಿ. ಟ್ರಾನ್ಸ್ ಫಾರ್ಮರ್ ಮೇಲಿನ ಲೋಡ್ ಕಡಿಮೆ ಆಗಲಿದೆ ಅಂತ ಹೇಳಿದ್ದೇನೆ ವಿನಹ ಬೇರೇನು ಅಲ್ಲ. ಏ ಹಾಲಪ್ಪ 9,000 ಮುಳುಗಡೆ ರೈತರಿಗೆ ವಿಷ ಕೊಟ್ಟ ಪಾಪಿ ನೀನು ಮತ್ತು ರಾಘವೇಂದ್ರ ಎಂಬುದಾಗಿ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ವಾಗ್ಧಾಳಿ ನಡೆಸಿದ್ದಾರೆ.
ಇಂದು ಸಾಗರ ನೆಹರು ಮೈದಾನದಲ್ಲಿ ನಡೆದಂತ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದಂತ ಅವರು, ನಾನು ರೈತ ವಿರೋಧಿ ಅಂತ ಹೇಳ್ತಾರೆ. ನಿನ್ನೆ ಸ್ಟೇಟ್ಮೆಂಟ್ ನೋಡಿದೆ. ಗೋಪಾಲಕೃಷ್ಣ ಬೇಳೂರು ರೈತರ ವಿರೋಧಿ. ನಾನು ರೈತರ ವಿರೋಧಿ ಅಂತ ಯಾರಾದರೂ ಒಬ್ಬರು ಬೆಟ್ಟು ಮಾಡಿ ತೋರಿಸಲಿ. ಬಡವರ ವಿರೋಧಿ ಅಂತ ತೋರಿಸಲಿ. ನಾನು ಹೇಳಿದ್ದು ಏನೆಂದ್ರೇ ಎರಡು ಪಂಪ್ ಸೆಟ್ ಇಟ್ಟುಕೊಂಡಿದ್ದಂತ ವ್ಯಕ್ತಿಗೆ ಒಂದಕ್ಕೆ ಅವಕಾಶ ಕೊಡ್ರಪ್ಪ. ಒಂದೊಂದು ಮನೆಗೆ ಎರಡು ಪಂಪ್ ಸೆಟ್ ಗೆ ಅವಕಾಶ ಬೇಡ. ಅವುಗಳನ್ನು ತೆಗೆಯಿರಿ ಅಂತ ಹೇಳಿದೆ ಎಂದರು.
ಟಿಸಿ ಹೋದ್ರೆ ಎಲ್ಲಾ ರೈತರಿಗೂ ಸಮಸ್ಯೆ ಆಗಲಿದೆ. ಒಬ್ಬರು ಎರೆಡು ಪಂಪ್ ಸೆಟ್ ಹಾಕಿರೋದರಿಂದ ಟಿಸಿಗೆ ಹೊತ್ತಡ ಬಿದ್ದು ಹಾಳಾಗೋ ಮುಂದಾಲೋಚನೆಯಲ್ಲಿ ಹೇಳಿದ್ದೆನು. ನಾನು ರೈತರ ಪಂಪ್ ಸೆಟ್ ಕನೆಕ್ಷನ್ ಕಟ್ ಮಾಡಿ ಅಂತ ಹೇಳಿದ್ದಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದರು.
ಏ ಹಾಲಪ್ಪ ಇದೇ ನೀನು ಶಾಸಕರಾದಂತ ಸಂದರ್ಭದಲ್ಲಿ 9,000 ಮುಳುಗಡೆ ರೈತರಿಗೆ ವಿಷ ಕೊಟ್ಟೆಯಲ್ಲೋ ಪಾಪಿ ನೀನು. ನನ್ನ ಬಗ್ಗೆ ಮಾತಾಡ್ತೀಯ ನೀನು. ನಾಚಿಕೆ ಆಗ್ಬೇಕು. ನಿನಗೆ ಮಾನ ಮರ್ಯಾದೆ ಇಲ್ಲ. ನೀನು ರಾಘವೇಂದ್ರ ಸೇರಿಕೊಂಡು 9000 ರೈತರಿಗೆ ಅನ್ಯಾಯ ಮಾಡಿದ್ರಿ ಎಂಬುದಾಗಿ ವಾಗ್ಧಾಳಿ ನಡೆಸಿದರು.
ಮೊನ್ನೆ ಪಾರ್ಲಿಮೆಂಟಿಗೆ ಹೋಗಿ ಮುಳುಗಡೆ ಸಂತ್ರಸ್ತರಿಗೆ ಮಾಡಬೇಕು ಅಂತ ಪೋಸ್ ಕೊಟ್ಟಿದ್ದೀರಿ. 9000 ರೈತರ ಅರ್ಜಿ ವಜಾಗೆ ಇದೇ ರಾಘವೇಂದ್ರ, ಇದೇ ಹಾಲಪ್ಪ, ಅರಗಜ್ಞಾನೇಂದ್ರ ಕಾರಣ. ಇವರು ನನಗೆ ಪಾಠ ಮಾಡೋದಕ್ಕೆ ಬರ್ತಾರೆ ಎಂಬುದಾಗಿ ಕಿಡಿಕಾರಿದರು.
ವರದಿ: ವಸಂತ ಬಿ ಈಶ್ವರಗೆರೆ
BREAKING: ಮಚ್ಚು ಹಿಡಿದು ರೀಲ್ಸ್ ಕೇಸ್: ವಿನಯ್, ರಜತ್ ಗೆ ಜಾಮೀನು ಮಂಜೂರು