ಬೆಂಗಳೂರು: ಸಚಿವ ಕೆಎನ್ ರಾಜಣ್ಣಗೆ ಹನಿಟ್ರ್ಯಾಪ್ ಯತ್ನ ಆರೋಪದ ಸಂಬಂಧ ಇಂದು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಡಿಜಿ ಮತ್ತು ಐಜಿಪಿಗೆ ದೂರು ನೀಡಿದ್ದಾರೆ.
ಹನಿಟ್ರ್ಯಾಫ್ ಯತ್ನ ಪ್ರಕರಣಕ್ಕೆ ಸಮಬಂಧಿಸಿದಂತೆ ಇಂದು ಬೆಂಗಳೂರಿನ ಡಿಜಿ ಮತ್ತು ಐಜಿಪಿ ಕಚೇರಿಗೆ ಭೇಟಿ ನೀಡಿ ಎಂಎಲ್ ಸಿ ದೂರು ನೀಡಿದ್ದಾರೆ. ನನಗೆ ಹನಿಟ್ರ್ಯಾಪ್ ನಡೆಸಲು ಕಳೆದ ಮೂರು ತಿಂಗಳಿನಿಂದ ಯತ್ನ ನಡೆಸಿದ್ದರು. ಹನಿಟ್ರ್ಯಾಪ್ ಸಂಬಂಧ ನಮ್ಮ ಮಧುಗಿರಿ ನಿವಾಸಕ್ಕೂ ಬಂದಿದ್ದರು. ಯಾವ ಕಾರಣಕ್ಕಾಗಿ ನನಗೆ ಹನಿಟ್ರ್ಯಾಪ್ ಯತ್ನ ಮಾಡಿದ್ದಾರೆ ಎಂಬುದು ಗೊತ್ತಿಲ್ಲ ಎಂದರು.
ಯಾರೆಂದು ಹೇಗೆ ಹೋಳೋದು? ತನಿಖೆಯಾಗಲಿ ಎಲ್ಲವೂ ಹೊರ ಬರುತ್ತದೆ. ನಮ್ಮ ತಂದೆಯಷ್ಟೇ ಅಲ್ಲ ಯಾರಿಗೂ ಈ ರೀತಿಯಾಗಿ ಆಗಬಾರದು. ಎಲ್ಲರ ಮನೆಯಲ್ಲೂ ಹೆಣ್ಣಮುಕ್ಕಳು ಇರ್ತಾರೆ ಅಲ್ವ? ಈ ರೀತಿ ಆದ್ರೇ ಹೇಗೆ.? ಪ್ರಕರಣದ ಬಗ್ಗೆ ಹಿರಿಯ ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ಆಗಲಿ ಎಂದು ಹೇಳಿದ್ದಾರೆ.