ಶಿವಮೊಗ್ಗ : 2024-25 ನೇ ಸಾಲಿನಲ್ಲಿ ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯದವರಿಗೆ ಹಾಗೂ ಅರಣ್ಯ ಆಧಾರಿತ ಆದಿವಾಸಿ ಸಮುದಾಯದ ವಿದ್ಯಾವಂತ ನಿರುದ್ಯೋಗಿ ಯುವಕ/ಯುವತಿಯರಿಗೆ ವಿವಿಧ ಕೌಶಲ್ಯಾಭಿವೃದ್ದಿ(ತಾಂತ್ರಿಕ ನೈಪುಣ್ಯತೆ) ತರಬೇತಿಯನ್ನು ನೀಡಲು ಜಿಲ್ಲಾ ಮಟ್ಟದಲ್ಲಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ ಬೆಂಗಳೂರು ಇವರ ಪ್ರಾದೇಶಿಕ ಕೆಜಿಟಿಟಿಐ ತರಬೇತಿ ಕೇಂದ್ರಗಳ ಸಹಯೋಗದೊಂದಿಗೆ ತರಬೇತಿ ನೀಡಲಾಗುವುದು. ಅರ್ಹ ವಿದ್ಯಾವಂತ ನಿರುದ್ಯೋಗ ಯುವಕ/ಯುವತಿಯರು ಅರ್ಜಿಯನ್ನು ಉಪ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಶಿವಮೊಗ್ಗ ಇಲ್ಲಿ ಮತ್ತು ಆಯಾ ತಾಲ್ಲೂಕಿನ ಸಹಾಯಕ ನಿರ್ದೇಶಕರುಗಳ ಕಚೇರಿ, ಸಮಾಜ ಕಲ್ಯಾಣ ಇಲಾಖೆ ಮೂಲಕ ಆಫ್‌ಲೈನ್‌ನಲ್ಲಿ ಏ.5 ರೊಳಗೆ ಸಲ್ಲಿಸಬಹುದು.
ಸೆಲ್ಫ್ ಎಂಪ್ಲಾಯ್ಡ್ ಟೈಲರಿಂಗ್ 2 ತಿಂಗಳ ಅವಧಿಯ ತರಬೇತಿ, ಅಸಿಸ್ಟೆಂಟ್ ಬ್ಯೂಟಿ ಥೆರಪಿಸ್ಟ್ 2 ತಿಂಗಳು, ಡೊಮೆಸ್ಟಿಕ್ ಡಾಟಾ ಎಂಟ್ರಿ ಆಪರೇಟರ್ 2 ತಿಂಗಳು, ಫ್ಯಾಷನ್ ಡಿಸೈನರ್ 1 ತಿಂಗಳ ಅವಧಿಯ ತರಬೇತಿಯನ್ನು ನೀಡಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
BREAKING NEWS: ಇನ್ಮುಂದೆ ‘ಸರ್ಕಾರಿ ನೌಕರ’ರು ‘ಮುಂಬಡ್ತಿ’ ಹೊಂದಲು ಈ ನಿಯಮ ಪಾಲನೆ ಕಡ್ಡಾಯ: ‘ರಾಜ್ಯ ಸರ್ಕಾರ’ ಆದೇಶ
‘ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್’ ಆರೋಪಕ್ಕೆ ಅಂಕಿಅಂಶ ಸಹಿತ ಈ ಉತ್ತರ ಕೊಟ್ಟ ‘ಸಚಿವ ರಾಮಲಿಂಗಾರೆಡ್ಡಿ’