Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ: DKS

09/07/2025 3:45 PM

ಬಿಬಿಎಂಪಿ ಐವರು ನೌಕರರ ಅಮಾನತು ಆದೇಶ ವಾಪಾಸ್

09/07/2025 3:42 PM

ಬೈಜು ರವೀಂದ್ರನ್ ನ್ಯಾಯಾಂಗ ನಿಂದನೆ ಆರೋಪದಡಿ ದೋಷಿ ಎಂದು ಘೋಷಿಸಿದ ಅಮೇರಿಕಾ ನ್ಯಾಯಾಲಯ

09/07/2025 3:36 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯ ಸರ್ಕಾರದಿಂದ `ಕ್ಷಯ ಮುಕ್ತ ಕರ್ನಾಟಕ ಲಸಿಕಾ ಕಾರ್ಯಕ್ರಮಕ್ಕೆ’ ಚಾಲನೆ : ಯಾರೆಲ್ಲಾ `BCG’ ಲಸಿಕೆಗೆ ಅರ್ಹರು? ಇಲ್ಲಿದೆ ಮಾಹಿತಿ
KARNATAKA

BIG NEWS : ರಾಜ್ಯ ಸರ್ಕಾರದಿಂದ `ಕ್ಷಯ ಮುಕ್ತ ಕರ್ನಾಟಕ ಲಸಿಕಾ ಕಾರ್ಯಕ್ರಮಕ್ಕೆ’ ಚಾಲನೆ : ಯಾರೆಲ್ಲಾ `BCG’ ಲಸಿಕೆಗೆ ಅರ್ಹರು? ಇಲ್ಲಿದೆ ಮಾಹಿತಿ

By kannadanewsnow5726/03/2025 8:57 AM

ಬೆಂಗಳೂರು: ಕರ್ನಾಟಕ ರಾಜ್ಯವನ್ನು ಕ್ಷಯ ರೋಗ ಮುಕ್ತ ರಾಜ್ಯವನ್ನಾಗಿ ರೂಪಿಸುವತ್ತ ಹಲವು ಕಾರ್ಯಕ್ರಮಗಳನ್ನ ಹಾಕಿಕೊಂಡಿರುವ ಆರೋಗ್ಯ ಇಲಾಖೆ, ಇದೀಗ BCG ಲಸಿಕೆ ಹಾಕುವ ಬೃಹತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ.

ವಿಶ್ವ ಕ್ಷಯರೋಗ ದಿನವಾದ ಇಂದು ಬಸಿಜಿ ಲಸಿಕಾ ಕಾರ್ಯಕ್ರಮಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು.‌

ಬಳಿಕ ಮಾತನಾಡಿದ ಸಚಿವರು, ರಾಜ್ಯದಲ್ಲಿ 16 ಜಿಲ್ಲೆಗಳಲ್ಲಿ ಬಸಿಜಿ ಲಸಿಕೆ ಹಾಕುವ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗಿದ್ದು, ಕ್ಷಯ ರೋಗ ಬರದಂತೆ ತಡೆಯುವಲ್ಲಿ ಈ ಕಾರ್ಯಕ್ರಮ ಮಹತ್ವದ ಪಾತ್ರ ವಹಿಸಲಿದೆ ಎಂದರು. ಈಗಾಗಲೇ ರಾಜ್ಯದಲ್ಲಿ 1060 ಗ್ರಾಮ ಪಂಚಾಯತಿಗಳನ್ನ ಕ್ಷಯ ರೋಗ ಮುಕ್ತ ಪಂಚಾಯತಿಗಳನ್ನಾಗಿ ರೂಪಿಸಲಾಗಿದೆ. ಅಲ್ಲದೇ ಕ್ಷಯ ನಿರ್ಮೂಲನಾ ಕಾರ್ಯಕ್ರಮದ ಅಡಿಯಲ್ಲಿ ಕ್ಷಯ ರೋಗಿಗಳಿಗೆ 98721 ಪೌಷ್ಠಿಕ ಆಹಾರದ ಕಿಟ್ ಗಳನ್ನ ವಿತರಿಸಲಾಗಿದೆ. ಸಾರ್ವಜನಿಕರು ಕ್ಷಯ ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಬಿಸಿಜಿ ಲಸಿಕಾ ಕಾರ್ಯಕ್ರಮದ ಲಾಭ ಪಡೆಯಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಬಿಸಿಜಿ ಲಸಿಕೆ ಸುರಕ್ಷಿತ ಲಸಿಕೆಯಾಗಿದ್ದು, ಸಾರ್ವಜನಿಕರು ಅಪನಂಬಿಕೆ ಪಡುವ ಅಗತ್ಯವಿಲ್ಲ ಎಂಬ ಸಂದೇಶ ರವಾನಿಸುವ ನಿಟ್ಟಿನಲ್ಲಿ ಸ್ವತಃ ಆರೋಗ್ಯ ಇಲಾಖೆ ನಿರ್ದೇಶಕಿ ತ್ರಿವೇಣಿ ಅವರು ಸೇರಿದಂತೆ ಕ್ಷಯ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಕಾರ್ಯಕ್ರಮದಲ್ಲಿ ಬಿಸಿಜಿ ಲಸಿಕೆ ಪಡೆದರು.

ಕರ್ನಾಟಕ ಕ್ಷಯ ಮುಕ್ತ ಕಾರ್ಯತಂತ್ರ ಭಾಗವಾಗಿ ಎಲ್ಲಾ ಕ್ಷಯರೋಗಿಗಳಿಗೆ ಸಾರ್ವತ್ರಿಕವಾಗಿ ಚಿಕಿತ್ಸೆ ದೊರಕಿಸುವುದು ಮತ್ತು ಶೂನ್ಯ ಕ್ಷಯ ಮರಣದ ಗುರಿ ಹಾಕಿಕೊಳ್ಳಲಾಗಿದೆ. ಕರ್ನಾಟಕ ರಾಜ್ಯದಲ್ಲಿ 2024 ರ ಸಾಲಿನಲ್ಲಿ 20 ಲಕ್ಷಕ್ಕೂ ಹೆಚ್ಚು ಸಂಭಾವ್ಯ ಕ್ಷಯರೋಗಿಗಳ ಕಫ ಪರೀಕ್ಷೆಗಳನ್ನು ಮಾಡಲಾಗಿದೆ ಹಾಗೂ ಖಾಸಗಿ ವಲಯದಿಂದ 28122 ಮತ್ತು ಸಾರ್ವಜನಿಕ ವಲಯದಿಂದ 49865 ಒಟ್ಟು 77987 ಕ್ಷಯರೋಗಿಗಳನ್ನು ದೃಢಪಡಿಸಿ ಪತ್ತೆ ಹಚ್ಚಲಾಗಿದೆ. ಈ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಇಳಿಮುಖ ವಾಗಿರುತ್ತದೆ. ಇವರಲ್ಲಿ ಶೇ. 4.5 ರಷ್ಟು ಔಷಧ ನಿರೋಧಕ ಕ್ಷಯರೋಗಿಗಳಾಗಿರುತ್ತಾರೆ.

ದೃಢಪಟ್ಟ ಎಲ್ಲಾ ಕ್ಷಯರೋಗಿಗಳಿಗೆ ಕನಿಷ್ಠ 6 ತಿಂಗಳ ಅವಧಿಯ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಕ್ಷಯ ರೋಗದಿಂದ ಉಂಟಾಗುವ ಮರಣ ಧರವನ್ನು ಶೇ 8% ರಿಂದ 6% ಇಳಿಸಲಾಗಿದೆ. ಇದುವರೆಗೂ 4787 ನಿಕ್ಷಯ್ ಮಿತ್ರರಿಂದ 98721 ಪೌಷ್ಠಿಕ ಆಹಾರದ ಕಿಟ್ ಗಳನ್ನು ಕ್ಷಯರೋಗಿಗಳಿಗೆ ವಿತರಿಸಲಾಗಿದೆ.

ಆಡಳಿತಾತ್ಮಕ ಕಾರ್ಯಸಾಧ್ಯತೆಗಾಗಿ, ರಾಜ್ಯವನ್ನು 32 ಜಿಲ್ಲಾ ಟಿಬಿ ಕೇಂದ್ರಗಳಾಗಿ (ಡಿಟಿಸಿ) ವಿಂಗಡಿಸಲಾಗಿದೆ. 32 DTC ಗಳನ್ನು 275 TB ಘಟಕಗಳಾಗಿ (TU) ವಿಂಗಡಿಸಲಾಗಿದೆ. ಪ್ರತಿ 2.5 ಲಕ್ಷ ಜನಸಂಖ್ಯೆಗೆ ಒಂದು ಕ್ಷಯ ಘಟಕ ಸ್ಥಾಪಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 1450 ಮೈಕ್ರೋಸ್ಕೋಪಿಕ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದರ ಜೊತೆಗೆ ರಾಜ್ಯದಲ್ಲಿ 298 TrueNAT ಕೇಂದ್ರಗಳು ಹಾಗೂ 125 CBNAAT ಕೇಂದ್ರಗಳು ವಿವಿಧ ಆರೋಗ್ಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುತ್ತವೆ.

ಯಾರು ಬಿಸಿಜಿ ಲಸಿಕೆ ಪಡೆಯಬಹುದು?

ಕಳೆದ 05 ವರ್ಷಗಳಲ್ಲಿ ಕ್ಷಯರೋಗಕ್ಕೆ ಒಳಗಾಗಿ ಚಿಕಿತ್ಸೆ ಪಡೆದವರು.

ಸಕ್ರಿಯ ಕ್ಷಯರೋಗಿಗಳ ನಿಕಟ ಸಂಪರ್ಕಿತರು.

ದೇಹ ಗಾತ್ರದ ಸೂಚ್ಯಾಂಕ 18 ಕ್ಕಿಂತ ಕಡಿಮೆ ಇರುವವರು.

ಸ್ವಯಂ ವರದಿ ಮಾಡುವ ಮಧುಮೇಹಿಗಳು.

ಸ್ವಯಂ ವರದಿ ಮಾಡುವ ಧೂಮಪಾನಿಗಳು..

60 ವರ್ಷಕ್ಕಿಂತ ಮೇಲ್ಪಟ್ಟವರು ಒಂದು ಬಾರಿ ಮಾತ್ರ ಬಸಿಜಿ ಲಸಿಕೆ ಪಡೆಯಬಹುದಾಗಿದೆ.

ಕರ್ನಾಟಕವನ್ನು ಕ್ಷಯ ಮುಕ್ತ ರಾಜ್ಯವನ್ನಾಗಿ ರೂಪಿಸುವತ್ತ ಆರೋಗ್ಯ ಇಲಾಖೆ ಮಹತ್ವದ ಹೆಜ್ಜೆ ಇರಿಸಿದೆ. 16 ಜಿಲ್ಲೆಗಳಲ್ಲಿ ಬಿಸಿಜಿ ಲಸಿಕೆ ಹಾಕುವ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗಿದ್ದು, ಕ್ಷಯ ರೋಗ ಬಾರದಂತೆ ತಡೆಯುವಲ್ಲಿ ಈ ಕಾರ್ಯಕ್ರಮ ಮಹತ್ವದ ಪಾತ್ರ ವಹಿಸಲಿದೆ. ಈಗಾಗಲೇ ರಾಜ್ಯದಲ್ಲಿ 1,060 ಗ್ರಾಮ ಪಂಚಾಯತಿಗಳನ್ನು ಕ್ಷಯ ರೋಗ ಮುಕ್ತ… pic.twitter.com/s8JGKZoowM

— DIPR Karnataka (@KarnatakaVarthe) March 25, 2025

Good News: ಬೆಂಗಳೂರಲ್ಲಿ ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್: ಏಪ್ರಿಲ್ ನಿಂದ ಮನೆ ಬಾಗಿಲಿಗೆ ‘ಉಚಿತ ಖಾತಾ’ ರವಾನೆ

BIG NEWS : ಅಕ್ರಮ ತಡೆಗೆ ರಾಜ್ಯ ಸರ್ಕಾರದಿಂದ ಮಹತ್ವದ ಕ್ರಮ : ಇನ್ಮುಂದೆ `KEA’ ನೇಮಕಾತಿ ಪರೀಕ್ಷೆಗಳಲ್ಲಿ `AI’ ತಂತ್ರಜ್ಞಾನ ಬಳಕೆ.!

BIG NEWS: State government launches `Tuberculosis-free Karnataka Vaccination Programme': Who is eligible for `BCG' vaccine? Here is the information
Share. Facebook Twitter LinkedIn WhatsApp Email

Related Posts

ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ: DKS

09/07/2025 3:45 PM4 Mins Read

ಬಿಬಿಎಂಪಿ ಐವರು ನೌಕರರ ಅಮಾನತು ಆದೇಶ ವಾಪಾಸ್

09/07/2025 3:42 PM1 Min Read

SHOCKING : ಯುವಕರಾಯ್ತು ಈಗ ಮಕ್ಕಳ ಸರದಿ : ಪಾಠ ಕೇಳುವಾಗಲೇ ‘ಹೃದಯಘಾತದಿಂದ’ 4ನೇ ತರಗತಿ ವಿದ್ಯಾರ್ಥಿ ಸಾವು!

09/07/2025 3:34 PM1 Min Read
Recent News

ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ: DKS

09/07/2025 3:45 PM

ಬಿಬಿಎಂಪಿ ಐವರು ನೌಕರರ ಅಮಾನತು ಆದೇಶ ವಾಪಾಸ್

09/07/2025 3:42 PM

ಬೈಜು ರವೀಂದ್ರನ್ ನ್ಯಾಯಾಂಗ ನಿಂದನೆ ಆರೋಪದಡಿ ದೋಷಿ ಎಂದು ಘೋಷಿಸಿದ ಅಮೇರಿಕಾ ನ್ಯಾಯಾಲಯ

09/07/2025 3:36 PM

SHOCKING : ಯುವಕರಾಯ್ತು ಈಗ ಮಕ್ಕಳ ಸರದಿ : ಪಾಠ ಕೇಳುವಾಗಲೇ ‘ಹೃದಯಘಾತದಿಂದ’ 4ನೇ ತರಗತಿ ವಿದ್ಯಾರ್ಥಿ ಸಾವು!

09/07/2025 3:34 PM
State News
KARNATAKA

ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ: DKS

By kannadanewsnow0909/07/2025 3:45 PM KARNATAKA 4 Mins Read

ನವದೆಹಲಿ: “ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ಒಟ್ಟು ₹11,122.76 ಕೋಟಿ ಅನುದಾನಕ್ಕಾಗಿ ಮನವಿ ಸಲ್ಲಿಸಿದ್ದೇವೆ. ಕುಡಿಯುವ ನೀರಿನ ಉದ್ದೇಶದ ಎತ್ತಿನಹೊಳೆ ಯೋಜನೆಗೆ…

ಬಿಬಿಎಂಪಿ ಐವರು ನೌಕರರ ಅಮಾನತು ಆದೇಶ ವಾಪಾಸ್

09/07/2025 3:42 PM

SHOCKING : ಯುವಕರಾಯ್ತು ಈಗ ಮಕ್ಕಳ ಸರದಿ : ಪಾಠ ಕೇಳುವಾಗಲೇ ‘ಹೃದಯಘಾತದಿಂದ’ 4ನೇ ತರಗತಿ ವಿದ್ಯಾರ್ಥಿ ಸಾವು!

09/07/2025 3:34 PM

SHOCKING: ಬೆಂಗಳೂರಲ್ಲಿ ‘ಕಾಮುಕ’ರ ಅಟ್ಟಹಾಸ: ಸ್ನೇಹಿತನ ಮನೆಗೆ ಬಂದಿದ್ದ ಮಹಿಳೆ ಮೇಲೆ ‘ಗ್ಯಾಂಗ್ ರೇಪ್’

09/07/2025 3:28 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.