ರಾಯಚೂರು: ರಾಯಚೂರು: ಇಲ್ಲಿನ ರಾಯರ ಮಠಕ್ಕೆ ಕಾಣಿಕೆಯ ಮಹಾಪೂರವೇ ಹರಿದು ಬಂದಿದೆ. ಬರೋಬ್ಬರಿ 3.48 ಕೋಟಿ ನಗದು, 1 ಕೆಜಿ ಬೆಳ್ಳಿ, 32 ಗ್ರಾಂ ಚಿನ್ನ ಹುಂಡಿಯಲ್ಲಿ ದೊರೆತಿದೆ.
ಮಾರ್ಚ್ ನಲ್ಲಿ ರಾಘವೇಂದ್ರ ಸ್ವಾಮಿ ಮಠದಲ್ಲಿ ಗುರುವೈಭವೋತ್ಸವ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಹೀಗಾಗಿ ರಾಯರ ಮಠಕ್ಕೆ ಭಕ್ತರ ದಂಡೇ ಹರಿದು ಬಂದಿತ್ತು. ರಾಜ್ಯ, ಹೊರ ರಾಜ್ಯ, ವಿದೇಶದಿಂದಲೂ ಭಕ್ತ ಸಾಗರ ಮಂತ್ರಾಲಯಕ್ಕೆ ಭೇಟಿ ನೀಡಿದೆ. ಹೀಗಾಗಿ ನಗದು, ಚಿನ್ನಾಭರಣವನ್ನು ಕಾಣಿಕೆಯಾಗಿ ಹುಂಡಿಗೆ ಸಮರ್ಪಿಸಿದ್ದಾರೆ.
ಇಂತಹ ಕಾಣಿಕೆ ಹುಂಡಿಯನ್ನು ಏಣಿಕೆ ಮಾಡಲಾಗಿದೆ. ಈ ವೇಳೆಯಲ್ಲಿ 3,48,69,621 ರೂ. ನಗದು, 32 ಗ್ರಾಂ ಚಿನ್ನ ಮತ್ತು 1.24 ಕೆಜಿ ಬೆಳ್ಳಿ ದೇಣಿಗೆಯಾಗಿ ಸಂಗ್ರಹವಾಗಿದೆ.
GOOD NEWS: ‘ಏಪ್ರಿಲ್’ನಿಂದ ರಾಜ್ಯಾದ್ಯಂತ ‘ಗೃಹ ಆರೋಗ್ಯ ಯೋಜನೆ’ ಜಾರಿ: ಸಚಿವ ದಿನೇಶ್ ಗುಂಡೂರಾವ್ ಘೋಷಣೆ