ಬೆಂಗಳೂರು: ರಾಜ್ಯದ ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವಂತ NHM ಸಿಬ್ಬಂದಿಗಳಿಗೆ 15% ವೇತನ ಹೆಚ್ಚಳದ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮಾಜಿ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಪತ್ರ ಬರೆದು ಆಗ್ರಹಿಸಿದ್ದಾರೆ.
ಈ ಸಂಬಂಧ ಸಿಎಂ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದಿದ್ದು, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗುತ್ತಿಗೆ ಮತ್ತು ಹೊರಗುತ್ತಿಗೆ ಸಿಬ್ಬಂದಿಗಳ ವೇತನ ಕಡಿಮೆ ಇರುವ ಬಗ್ಗೆ ಪರಿಶೀಲಿಸಿ ವೇತನ ಹೆಚ್ಚಳ ಮಾಡಲು ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸಚಾರಿ ಅವರ ಅಧ್ಯಕ್ಷತೆಯ ಸಮಿತಿಯು 15% ವೇತನ ಹೆಚ್ಚಳ ಮಾಡಲು ಶಿಫಾರಸ್ಸು ಮಾಡಿತ್ತು ಎಂದಿದ್ದಾರೆ.
ಅದರಂತೆ ಏಪ್ರಿಲ್ 2023 ರಿಂದ ಅನ್ವಯ ಆಗುವಂತೆ ವೇತನ ಹೆಚ್ಚಿಸಿ ಆದೇಶ ಹೊರಡಿಸಲಾಗಿರುತ್ತದೆ ಅದರಂತೆ 2023-24 ರಲ್ಲಿ ತಮ್ಮ ಸರಕಾರ ಬಂದ ನಂತರ 17055 ಸಿಬ್ಬಂದಿಗಳಿಗೆ ಅನ್ವಯ ಆಗುವಂತೆ ಅನುದಾನವನ್ನು ಜಿಲ್ಲೆಗಳಿಗೆ ಬಿಡುಗಡೆ ಮಾಡಿದ್ದೂ ಸ್ವಾಗತಾರ್ಹ ಎಂಬುದಾಗಿ ಹೇಳಿದ್ದಾರೆ.
2024-25 ನೆಯ ಸಾಲಿಗೆ ಈಗಾಗಲೇ ಹೆಚ್ಚಳವಾದ ಅನುದಾನವನ್ನು ಜಿಲ್ಲೆಗಳಿಗೆ ಬಿಡುಗಡೆ ಮಾಡಲೂ ಹಾಗೂ ಇದನ್ನೂ ಎಲ್ಲಾ ಸಿಬ್ಬಂದಿಗಳಿಗೂ ವಿಸ್ತರಿಸಿ ಬಿಡುಗಡೆ ಮಾಡುವಂತೆ ವಿನಂತಿ ಮಾಡಲಾಗಿದ್ದು ಈ ವರೆಗೂ ಬಿಡುಗಡೆ ಆಗಿರುವುದಿಲ್ಲ ಅಂತ ತಿಳಿಸಿದ್ದಾರೆ.
ಆದ್ದರಿಂದ ತಾವು ಜಿಲ್ಲೆಗಳಿಗೆ ಅಗತ್ಯ ಇರುವ ಅನುದಾನವನ್ನು ಬಿಡುಗಡೆ ಮಾಡಲು ಸಂಬಂಧಿಸಿದವರಿಗೆ ನಿರ್ದೇಶನ ನೀಡಲು ಹಾಗೂ ಇದನ್ನೂ ಎಲ್ಲ ಗುತ್ತಿಗೆ ಮತ್ತು ಹೊರಗುತ್ತಿಗೆ ಸಿಬ್ಬಂದಿಗಳಿಗೆ ವಿಸ್ತರಿಸಿ ಪ್ರತೀ ವರ್ಷ ಅನ್ವಯ ಆಗುವಂತೆ ಸಿಬ್ಬಂದಿಗಳ ಆಯಾ ತಿಂಗಳ ವೇತನದಲ್ಲಿ ಸೇರಿಸಿ ನೀಡುವಂತೆ ನಿರ್ದೇಶನ ನೀಡಲು ಸಂಘದ ಗೌರವ ಅಧ್ಯಕ್ಷರಾದ ಆಯನೂರು ಮಂಜುನಾಥ್ ಆಗ್ರಹ ಮಾಡಿದ್ದಾರೆ.
ಕೆಲಸದ ಸ್ಥಳದಲ್ಲಿ ‘ಯೇ ರೇಶ್ಮಿ ಜುಲ್ಫೀನ್’ ಹಾಡುವುದು ಲೈಂಗಿಕ ಕಿರುಕುಳವಲ್ಲ: ಬಾಂಬೆ ಹೈಕೋರ್ಟ್
BREAKING : `ಹನಿಟ್ರ್ಯಾಪ್’ಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ : CM ಸಿದ್ದರಾಮಯ್ಯ ಘೋಷಣೆ | Honeytrap cace
BIG NEWS: ನಾಳೆ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ‘ಅಖಂಡ ಕರ್ನಾಟಕ ಬಂದ್’ ಖಚಿತ: ವಾಟಾಳ್ ನಾಗರಾಜ್ ಘೋಷಣೆ