ಬೆಂಗಳೂರು: ರಾಜ್ಯಾಧ್ಯಂತ ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆ-1ರ ಮೊದಲ ವಿಷಯದ ಪರೀಕ್ಷೆ ಯಶಸ್ವಿಯಾಗಿ ನಡೆಯಿತು. ಪ್ರಥಮ ಭಾಷೆಯ ವಿಷಯದ ಮೊದಲ ದಿನದ ಪರೀಕ್ಷೆಗೆ 8,22,658 ವಿದ್ಯಾರ್ಥಿಗಳು ಹಾಜರಿದ್ದರೇ, 16,313 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
ಈ ಬಗ್ಗೆ ಶಾಲಾ ಪರೀಕ್ಷೆಗಳ ಇಲಾಖೆಯಿಂದ ಮಾಹಿತಿ ನೀಡಲಾಗಿದ್ದು, ಇಂದು ರಾಜ್ಯಾಧ್ಯಂತ ಪ್ರಥಮ ಭಾಷೆಯ ಎಸ್ ಎಸ್ ಎಲ್ ಸಿ ಪರೀಕ್ಷೆ-1 ಯಶಸ್ವಿಯಾಗಿ ನಡೆದಿದೆ. ಈ ಪರೀಕ್ಷೆಗೆ 8,38,971 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಇವರಲ್ಲಿ 8,22,658 ವಿದ್ಯಾರ್ಥಿಗಳು ಹಾಜರಾಗಿದ್ದರು ಎಂಬುದಾಗಿ ತಿಳಿಸಿದೆ.
ಬೆಂಗಳೂರು ನಾರ್ಥ್ ನಲ್ಲಿ 47,073 ವಿದ್ಯಾರ್ಥಿಗಳು ಇಂದಿನ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಇವರಲ್ಲಿ 46,320 ಮಂದಿ ಹಾಜರಾಗಿದ್ದರೇ, 753 ವಿದ್ಯಾರ್ಥಿಗಳು ಗೈರಾಗಿದ್ದರು. ಕಲಬುರ್ಗಿಯಲ್ಲಿ 44,503 ನೋಂದಾಯಿತ ವಿದ್ಯಾರ್ಥಿಗಳಲ್ಲಿ 42,541 ಮಂದಿ ಹಾಜರಾಗಿದ್ದರೇ, 1,962 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
ಒಟ್ಟಾರೆ ಇಂದಿನ ಎಸ್ ಎಸ್ ಎಲ್ ಸಿ ಪರೀಕ್ಷೆ-1ರ ಮೊದಲ ದಿನದ ಪರೀಕ್ಷೆ ಯಶಸ್ವಿಯಾಗಿದೆ. 838971 ಮಂದಿಯಲ್ಲಿ 822658 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರೇ, 16313 ಮಂದಿ ಗೈರು ಹಾಜರಾಗಿದ್ದಾರೆ. ಶೇ.98.06ರಷ್ಟು ವಿದ್ಯಾರ್ಥಿಗಳು ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ
ದೆಹಲಿ ಹೈಕೋರ್ಟ್ ಜಡ್ಜ್ ಮನೆಯಲ್ಲಿ 15 ಕೋಟಿ ನಗದು ಪತ್ತೆ: ಆಂತರಿಕ ತನಿಖೆ ಆರಂಭಿಸಿದ ಸುಪ್ರೀಂ ಕೋರ್ಟ್
BREAKING : `ಹನಿಟ್ರ್ಯಾಪ್’ಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ : CM ಸಿದ್ದರಾಮಯ್ಯ ಘೋಷಣೆ | Honeytrap cace