ನವದೆಹಲಿ: ಭಾರತದ ಅತ್ಯಂತ ಶ್ರೀಮಂತ ಮತ್ತು ಬಡ ಶಾಸಕರು ಯಾರು ಎಂದು ನಿಮಗೆ ತಿಳಿದಿದೆಯೇ? ಈ ಸಂಬಂಧ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿಯನ್ನು ಬಿಡುಗಡೆ ಮಾಡಿದೆ.
ಎಡಿಆರ್ ವರದಿಯ ಪ್ರಕಾರ, ಮುಂಬೈನ ಘಾಟ್ಕೋಪರ್ ಪೂರ್ವದ ಬಿಜೆಪಿ ಶಾಸಕ ಪರಾಗ್ ಶಾ ಭಾರತದ ಅತ್ಯಂತ ಶ್ರೀಮಂತ ಶಾಸಕ. ಇವರ ಆಸ್ತಿಯ ಮೌಲ್ಯ ಸುಮಾರು 3400 ಕೋಟಿ ರೂ. ಅವರ ನಂತರ ಕರ್ನಾಟಕದ ಕನಕಪುರದ ಕಾಂಗ್ರೆಸ್ ಶಾಸಕ ಡಿ.ಕೆ. ಶಿವಕುಮಾರ್ ಅವರ ಆಸ್ತಿ 1,413 ಕೋಟಿ ರೂ.ಗಳಿಗಿಂತ ಹೆಚ್ಚು.
ಪರಾಗ್ ಶಾ ಅತ್ಯಂತ ಶ್ರೀಮಂತ ಶಾಸಕ
ಎಡಿಆರ್ ವರದಿಯು ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸುವ ಮೊದಲು ಸಲ್ಲಿಸಿದ ಅಫಿಡವಿಟ್‌ಗಳನ್ನು ವಿಶ್ಲೇಷಿಸುತ್ತದೆ. ಈ ಸಂಶೋಧನೆಯು 28 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳ 4092 ಶಾಸಕರನ್ನು ಒಳಗೊಂಡಿದೆ. ಈ ವರದಿಯ ಪ್ರಕಾರ, ಬಿಜೆಪಿಯ ಪರಾಗ್ ಶಾ ಅತ್ಯಂತ ಶ್ರೀಮಂತ ಶಾಸಕರು. ಪಶ್ಚಿಮ ಬಂಗಾಳದ ನಿರ್ಮಲ್ ಕುಮಾರ್ ಧಾರಾ ಅತಿ ಕಡಿಮೆ ಆಸ್ತಿ ಹೊಂದಿರುವ ಶಾಸಕರಾಗಿದ್ದಾರೆ. ಅವರ ಬಳಿ ಕೇವಲ 1700 ರೂಪಾಯಿಗಳ ಆಸ್ತಿ ಇದೆ. ನಿರ್ಮಲ್ ಕುಮಾರ್ ಧಾರಾ ಪಶ್ಚಿಮ ಬಂಗಾಳದ ಇಂಡಸ್ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದಾರೆ.
ಕರ್ನಾಟಕದ ಶಾಸಕರು ಅತಿ ಹೆಚ್ಚು ಆಸ್ತಿ ಹೊಂದಿದ್ದಾರೆ.
ಕರ್ನಾಟಕದ ಶಾಸಕರು ಒಟ್ಟಾರೆಯಾಗಿ 14,179 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದು, ಇದು ದೇಶದಲ್ಲೇ ಅತಿ ಹೆಚ್ಚು. ಮಹಾರಾಷ್ಟ್ರ ಶಾಸಕರ ಆಸ್ತಿ 12,424 ಕೋಟಿ ರೂ. ಆಂಧ್ರಪ್ರದೇಶದ ಶಾಸಕರು 11,323 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಅತ್ಯಂತ ಕಡಿಮೆ ಸಂಪತ್ತು ಹೊಂದಿರುವ ರಾಜ್ಯಗಳಲ್ಲಿ ತ್ರಿಪುರ, ಮಣಿಪುರ ಮತ್ತು ಪುದುಚೇರಿ ಸೇರಿವೆ.
ತ್ರಿಪುರಾ ಶಾಸಕರ ಒಟ್ಟು ಆಸ್ತಿ ಮೌಲ್ಯ 90 ಕೋಟಿ ರೂ.
ತ್ರಿಪುರಾ ಶಾಸಕರು 90 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಮಣಿಪುರ ಶಾಸಕರು 222 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಪುದುಚೇರಿ ಶಾಸಕರು 297 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಕರ್ನಾಟಕದ ಸ್ವತಂತ್ರ ಶಾಸಕ ಕೆ.ಎಚ್. ಪುಟ್ಟಸ್ವಾಮಿ ಗೌಡ ಅವರ ಆಸ್ತಿ 1,267 ಕೋಟಿ ರೂ. ಕರ್ನಾಟಕದ ಕಾಂಗ್ರೆಸ್ ಶಾಸಕ ಪ್ರಿಯಕೃಷ್ಣ ಅವರ ಆಸ್ತಿ 1,156 ಕೋಟಿ ರೂ.
ಶ್ರೀಮಂತ ಶಾಸಕರು
1. ಪರಾಗ್ ಶಾ : 3,383 ಕೋಟಿ ರೂ.
2.ಡಿ.ಕೆ.ಶಿವಕುಮಾರ್ 1413 ಕೋಟಿ ರೂ.
3.ಪುಟ್ಟಸ್ವಾಮಿಗೌಡ : 1267 ಕೋಟಿ ರೂ.
4.ಪ್ರಿಯಾಕೃಷ್ಣ : 1156 ಕೋಟಿ
10 ಬೈರತಿ ಸುರೇಶ್ : 648 ಕೋಟಿ ರೂ. ಆಸ್ತಿ ಹೊಂದಿದ್ದಾರೆ.