ನವದೆಹಲಿ: ಕಡಿಮೆ ಮೌಲ್ಯದ ಭೀಮ್-ಯುಪಿಐ ವಹಿವಾಟುಗಳನ್ನು (ಪಿ 2 ಎಂ) ಉತ್ತೇಜಿಸಲು ಪ್ರೋತ್ಸಾಹಕ ಯೋಜನೆಗೆ ಕೇಂದ್ರ ಸಚಿವ ಸಂಪುಟ ಮಾರ್ಚ್ 19 ರಂದು ಅನುಮೋದನೆ ನೀಡಿದೆ.
ಈ ಯೋಜನೆಯನ್ನು 2024-25ರ ಹಣಕಾಸು ವರ್ಷದಲ್ಲಿ 1,500 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಜಾರಿಗೆ ತರಲಾಗುವುದು. ಸಣ್ಣ ವ್ಯಾಪಾರಿಗಳಿಗೆ 2,000 ವರೆಗಿನ ವಹಿವಾಟುಗಳಿಗೆ ಪ್ರತಿ ವಹಿವಾಟು ಮೌಲ್ಯಕ್ಕೆ 0.15% ದರದಲ್ಲಿ ಪ್ರೋತ್ಸಾಹಧನ ನೀಡಲಾಗುವುದು.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ 2024-25ರ ಹಣಕಾಸು ವರ್ಷಕ್ಕೆ ಕಡಿಮೆ ಮೌಲ್ಯದ ಭೀಮ್-ಯುಪಿಐ ವಹಿವಾಟುಗಳನ್ನು ( BHIM-UPI transactions ) ವ್ಯಕ್ತಿಯಿಂದ ವ್ಯಾಪಾರಿಗೆ (ಪಿ 2 ಎಂ) ಉತ್ತೇಜಿಸುವ ಪ್ರೋತ್ಸಾಹಕ ಯೋಜನೆಗೆ ಅನುಮೋದನೆ ನೀಡಿದೆ ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.
ಯಜುವೇಂದ್ರ ಚಾಹಲ್-ಧನಶ್ರೀ ವರ್ಮಾ ವಿಚ್ಛೇದನ: 4.75 ಕೋಟಿ ಜೀವನಾಂಶ ನೀಡಲು ಕ್ರಿಕೆಟಿಗ ಒಪ್ಪಿಗೆ
BIG NEWS: 2028ರಲ್ಲಿ ನಮ್ಮ ಸರ್ಕಾರ ಬಂದ್ರೆ ‘ಗೃಹಲಕ್ಷ್ಮಿ ಹಣ’ವನ್ನು 4,000 ರೂ.ಗೆ ಏರಿಕೆ: ಕಾಂಗ್ರೆಸ್ ಶಾಸಕ