ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ಸಿಗುವ ಪ್ರವಾಸಿ ಭತ್ಯೆ ಕುರಿತಂತೆ ಸರ್ಕಾರವು ಮಹತ್ವದ ಆದೇಶ ಹೊರಡಿಸಿದ್ದು, ಸರ್ಕಾರಿ ಸೇವೆಗೆ ಸೇರಿದ ಬಳಿಕ ಪ್ರವಾಸಕ್ಕೆ ಹೋದ ವೇಳೆ ಸಿಗುವ ಪ್ರವಾಸ ಭತ್ಯೆ ಕುರಿತಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಪ್ರವಾಸ ಭತ್ಯೆ ನಿಯಮಗಳು
1. ಆರು ಗಂಟೆಗಳವರೆಗೂ ತಂಗುವಿಕೆ : ದಿನ ಭತ್ಯೆ ಇಲ್ಲ
2. ಆರು ಗಂಟೆ ಮೇಲ್ಪಟ್ಟು 12 ಗಂಟೆಗಳವರೆಗೆ : ಅರ್ಧ ದಿನ ಭತ್ಯೆ
3. 12 ಗಂಟೆ ಮೇಲ್ಪಟ್ಟು 24 ಗಂಟೆಗಳವರೆಗೆ : ಒಂದು ದಿನ ಭತ್ಯೆ
4. ಉಚಿತ ಊಟ ಮತ್ತು ವಸತಿ ನೀಡಿದ್ದಲ್ಲಿ : 4 ದಿನ ಭತ್ಯೆ
5. ಉಚಿತ ಊಟ ಅಥವಾ ಉಚಿತ ವಸತಿ ನೀಡಿದ್ದಲ್ಲಿ : 1/2 ದಿನ ಭತ್ಯೆ
6. ಪ್ರವಾಸದಲ್ಲಿದ್ದಾಗ ಬರುವ ಸಾರ್ವಜನಿಕ ರಜೆಗಳಿಗೆ: ದಿನಭತ್ಯೆ ಇಲ್ಲ
7. ಪ್ರವಾಸದಲ್ಲಿದ್ದಾಗ ರಜೆ ಉಪಯೋಗಿಸಿಕೊಂಡರೆ: ದಿನಭತ್ಯೆ ಇಲ್ಲ
8. ಕೇಂದ್ರ ಸ್ಥಾನದಿಂದ ಗೈರು ಹಾಜರಾಗಿ ಕೇಂದ್ರ ಸ್ಥಾನಕ್ಕೆ ಹಿಂತಿರುಗುವವರೆಗಿನ ಗೈರು ಹಾಜರಾತಿ ಹಾಕಲಾಗುವುದು: ದೈನಂದಿನ ಭತ್ಯೆಯ ಲೆಕ್ಕಾಚಾರ
9. ರೈಲಿನಲ್ಲಿ ಪ್ರಯಾಣ ದರ + ದಿನಭತ್ಯೆ + ಮೈಲೇಜ್ ಬಸ್‌ನಲ್ಲಿ ಪ್ರಯಾಣ ದರ + ದಿನಭತ್ಯೆ + ಮೈಲೇಜ್ ವಿಮಾನ ಪ್ರಯಾಣ ದರ + ದಿನಭತ್ಯೆ + ಮೈಲೇಜ್ : ಪ್ರಯಾಣ ಭತ್ಯೆ
10. ಸರ್ಕಾರಿ ವಾಹನದಲ್ಲಿ ಪ್ರಯಾಣ : ಕೇವಲ ದಿನ ಭತ್ಯೆ ಲಭ್ಯ.
ಸಾರ್ವಜನಿಕ ಹಿತ ದೃಷ್ಟಿಯಿಂದ ವರ್ಗಾವಣೆಗೊಂಡಾಗ
‘ಕುಟುಂಬ’ ಎಂದರೆ : ಸರ್ಕಾರಿ ನೌಕರನ ಹೆಂಡತಿ / ಗಂಡ ತಂದೆ – ತಾಯಿ (ಅವಲಂಬಿತರು) ಅವಲಂಬಿತ ಮಕ್ಕಳು. ಕೋರಿಕೆ ಮೇರೆಗೆ ವರ್ಗಾವಣೆಗೊಂಡಲ್ಲಿ : ಪ್ರಯಾಣ ಭತ್ಯೆ ಇಲ್ಲ.
ಲಗೇಜ್ ಸಾಗಣೆ – ಮನೆಯಿಂದ ರೈಲ್ವೆ / ಬಸ್ ಸ್ಟೇಷನ್‌ಗೆ ಮತ್ತು ರೈಲ್ವೆ /ಬಸ್ ಸ್ಟೇಷನ್‌ನಿಂದ – ಹೊಸ ಸ್ಥಳದಲ್ಲಿ ಮನೆಯವರೆಗೆ
ವರ್ಗಾವಣೆಯಾದಾಗಲೂ ಸಹ ಪ್ರಯಾಣದ ಅವಧಿಗೆ ಕುಟುಂಬದ ಎಲ್ಲಾ ಸದಸ್ಯರಿಗೂ : ದಿನ ಭತ್ಯೆ ಇಲ್ಲ.
ಪ್ರತಿ ಕುಟುಂಬ ಸದಸ್ಯನಿಗೂ : ಒಂದು ಪ್ರಯಾಣ ದರ / ರೈಲು / ಬಸ್ / ವಿಮಾನ
ಪ್ರತಿ ಕುಟುಂಬ ಸದಸ್ಯರಿಗೂ ದಿನಭತ್ಯೆ ಲಭ್ಯ.
ವರ್ಗಾವಣೆಯಾದಾಗ ವಿಮಾನದಲ್ಲಿ ಪ್ರಯಾಣ ಮಾಡಲು ಅರ್ಹತೆ : ರೂ.74400 ಮತ್ತು ಮೇಲ್ಪಟ್ಟು
ಕರ್ತವ್ಯದ ಮೇಲೆ ವಿಮಾನದಲ್ಲಿ ಪ್ರಯಾಣ ಮಾಡಲು ಅರ್ಹತೆ
(ಅ) ರಾಜ್ಯದೊಳಗೆ ಪ್ರಯಾಣ: ರೂ.61150.00 ಮತ್ತು ಮೇಲ್ಪಟ್ಟು
(ಆ) ರಾಜ್ಯದ ಹೊರಗೆ ಪ್ರಯಾಣ: ರೂ.74400.00 ಮತ್ತು ಮೇಲ್ಪಟ್ಟು
ರೂ.43100.00 ಮೇಲ್ಪಟ್ಟು ವೇತನ ಪಡೆಯುವ ಸರ್ಕಾರಿ ನೌಕರನ ವರ್ಗಾವಣೆಗೊಂಡಾಗ ಸ್ವಂತ ಕಾರು – ಬಾಡಿಗೆ ಕಾರಿನಲ್ಲಿ ಪ್ರಯಾಣ ಮಾಡಿ ಒಂದು ಮೈಲೇಜನ್ನು ಕ್ಷೇಮು ಮಾಡಬಹುದು.
ಕುಟುಂಬ :- ಗಂಡ / ಹೆಂಡತಿ, ಇಬ್ಬರು ಮಕ್ಕಳು (ಅವಲಂಬಿತರು) : ಒಟ್ಟು 04 ಮಂದಿಗೆ ಮಾತ್ರ
– ಪ್ರಯಾಣದರ ಮಾತ್ರ (ಪ್ರತಿ ಸದಸ್ಯನಿಗೂ) ಲಭ್ಯ : ದಿನಭತ್ಯೆ ಲಭ್ಯ ವಿಲ್ಲ. ವಿಮಾನದಲ್ಲಿ ಪ್ರಯಾಣ ಮಾಡಲು ಅವಕಾಶವಿಲ್ಲ. – ಶೇ 80 ರವರೆಗೂ ಮುಂಗಡ ಡ್ರಾ ಮಾಡಬಹುದು.