ನವದೆಹಲಿ : ಆಭರಣ ಪ್ರಿಯರಿಗೆ ಬಿಗ್ ಶಾಕ್, 10 ಗ್ರಾಂ ಚಿನ್ನದ ಬೆಲೆ ದಾಖಲೆಯ 90,000 ರೂ.ತಲುಪಿದೆ.
ಹೌದು, ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಸೋಮವಾರ ದೆಹಲಿ ಮಾರುಕಟ್ಟೆಯಲ್ಲಿ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ತಲುಪಿವೆ. ಸತತ 4ನೇ ದಿನವೂ ಏರಿಕೆ ಹಾದಿಯಲ್ಲಿ ಸಾಗಿದ 24 ಕ್ಯಾರೆಟ್ ಚಿನ್ನದ ಬೆಲೆ ಸೋಮವಾರ ಪ್ರತಿ 10 ಗ್ರಾಂಗೆ 1300 ರು. ನಷ್ಟು ಏರಿಕೆ ಕಂಡು 90750 ರು. ತಲುಪಿದೆ. ಆಭರಣ ಚಿನ್ನದ ಬೆಲೆ ಕೂಡಾ 1300 ರು. ಏರಿಕೆ ಕಂಡು 90350 ರೂ. ತಲುಪಿದೆ.
ಬೆಳ್ಳಿಯ ಬೆಲೆಯೂ ಏರಿಕೆಯಾಗಿದ್ದು, ಪ್ರತಿ ಕೆಜಿಗೆ 1300 ರು. ಏರಿಕೆ ಕಂಡು 1.02 ಲಕ್ಷ ರು. ತಲುಪಿದೆ. ಪ್ರಸಕ್ತ ವರ್ಷವೊಂದರಲ್ಲೇ ಪ್ರತಿ 10 ಗ್ರಾಂ ಚಿನ್ನದ ಬೆಲೆ 11360 ರು. ಏರಿಕೆ ಕಂಡಿದೆ. ಜ.1ರಂದು 79390 ರು. ಇದ್ದ ದರ ಇದೀಗ 90750 ರು. ತಲುಪಿದೆ.