ನವದೆಹಲಿ : ಹೊಸ ಕಾರು ಖರೀದಿಸುವವರಿಗೆ ಮತ್ತೆ ಬೆಲೆ ಏರಿಕೆ ಶಾಕ್ ಎದುರಾಗಿದ್ದು, ಏಪ್ರಿಲ್ 1 ರಿಂದ ಟಾಟಾ ಮತ್ತು ಮಾರುತಿ ಕಾರುಗಳ ಬೆಲೆ ಏರಿಕೆಯಾಗಲಿವೆ.
ಹೌದು, ವಾಹನ ನಿರ್ಮಾಣ ಪರಿಕರಗಳ ಬೆಲೆ ಏರಿಕೆಯ ಪರಿಣಾಮ ಏಪ್ರಿಲ್‌ನಿಂದ ಟಾಟಾ ಮತ್ತು ಮಾರುತಿ ಸುಜುಕಿ ಕಂಪನಿಗಳು ಕಾರು ಮತ್ತು ವಾಣಿಜ್ಯ ವಾಹನಗಳ ಬೆಲೆಯನ್ನು ಏರಿಕೆ ಮಾಡುವುದಾಗಿ 2 ಘೋಷಿಸಿವೆ.
ಟಾಟಾ ಮೋಟರ್ಸ್ ತನ್ನ ವಾಣಿಜ್ಯ ವಾಹನಗಳ ಮೇಲಿನ ಬೆಲೆಯನ್ನು ಶೇ.2ರಷ್ಟು ಏರಿಕೆ ಮಾಡುವುದಾಗಿ ಹೇಳಿದೆ. ಮತ್ತೊಂದೆಡೆ ಮಾರುತಿ ಸುಜುಕಿ ಸಹ ಬೆಲೆ ಏರಿಕೆಗೆ ಮುಂದಾಗಿದ್ದು, ಕಾರುಗಳ ಮೇಲಿನ ಬೆಲೆಯನ್ನು ಶೇ.4ರಷ್ಟು ಹೆಚ್ಚಳ ಮಾಡಲಿದೆ. ಇದು ಈ ವರ್ಷದಲ್ಲೇ 2ನೇ ದರ ಏರಿಕೆಯಾಗಿದೆ. ಫೆಬ್ರ ವರಿಯಲ್ಲಿ ಕೂಡಾ ಕಂಪನಿಗಳು ದರ ಹೆಚ್ಚಿಸಿದ್ದವು. ಇದೀಗ ಮತ್ತೊಮ್ಮೆ ದರ ಏರಿಕೆಯಾಗಿದೆ.